ಅರೋಗ್ಯ

ಈ ಮುದ್ರೆ ದಿನಾಗಲೂ ಅಭ್ಯಾಸ ಮಾಡ್ತಿದ್ರೆ ಹೃದಯದ ಖಾಯಿಲೆ , ಕಿವಿ -ತಲೆ ಸಮಸ್ಯೆ ಮತ್ತೆ ಆಕಾಶ ತತ್ವದಿಂದ ಬರೋ ಯಾವುದೇ ಸಮಸ್ಯೆ ಹತ್ರಾನೂ ಸುಳಿಯಲ್ಲ

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದ ಯೋಗವು ತೂಕ ಇಳಿಸಿಕೊಳ್ಳಲು ಹಾಗೂ ದೇಹವನ್ನು ಸದೃಢವಾಗಿಡಲು ವ್ಯಾಯಾಮಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಆಧುನಿಕ ವಿಜ್ಞಾನದೊಂದಿಗೆ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಇದು ಇತರ ವಿಧದ ವ್ಯಾಯಾಮಕ್ಕಿಂತ ಹೆಚ್ಚಿನ ಆರೋಗ್ಯ ಲಾಭ ನೀಡುತ್ತದೆ.

ಯೋಗ ಕೇವಲ ಆಸನ ಅಥವಾ ಭಂಗಿ ಮಾತ್ರವಲ್ಲ. ಕೆಲವೊಂದು ಯೋಗ ಮುದ್ರಗಳ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಯೋಗ ಮುದ್ರಾಗಳಿಂದ ಸಿಗುವ ಆರೋಗ್ಯ ಲಾಭವು ನಿಮ್ಮನ್ನು ಅಚ್ಚರಿಗೀಡುಮಾಡುತ್ತದೆ. ಪ್ರತಿಯೊಂದು ಯೋಗ ಮುದ್ರವು ವಿಶೇಷವಾದಂತಹದ್ದು ಮತ್ತು ಅದನ್ನು ಸರಿಯಾದ ವಿಧಾನದ ಮೂಲಕ ಅಭ್ಯಾಸ ಮಾಡಬೇಕು.

ಎಲ್ಲಾ ಯೋಗ ಮುದ್ರಾಗಳು ಕೈ ಸನ್ನೆಗಳಾಗಿದ್ದು, ಇದು ಅದ್ಭುತ ಆರೋಗ್ಯ ಲಾಭವನ್ನು ನೀಡುತ್ತದೆ.

 

 

ಕಿವಿಯ ಹಾಗು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಆಕಾಶ ತತ್ವದ ಹೆಚ್ಚಳ ಮತ್ತು ದೇಹದಲ್ಲಿ ಇತರ ತತ್ವದ ಕೊರತೆಯೇ ಕಾರಣವಾಗಿರುತ್ತದೆ , ಪ್ರತಿಯೊಂದು ಜೀವಕೋಶದಲ್ಲಿ ಈ ತತ್ವ ಇರುತ್ತದೆ ಒಂದು ವೇಳೆ ಈ ತತ್ವದ ಕೊರತೆ ಇದ್ದರೆ ಕಿವಿ,ಹೃದಯ ಹಾಗು ತಲೆಯ ಸಮಸ್ಯೆಗೆ ಕಾರಣವಾಗುತ್ತದೆ.

 

 

 

 

ಶೂನ್ಯ ಮುದ್ರಾ

 

 

ಶೂನ್ಯ ಮುದ್ರಾವು ಮುಖ್ಯವಾಗಿ ಸೂರ್ಯನ ಶಕ್ತಿಯನ್ನು ಸ್ಮರಿಸುತ್ತದೆ. ಸೂರ್ಯನ ಶಕ್ತಿಯನ್ನು ಪಡೆಯಲು ಮುಂಜಾನೆ ವೇಳೆ ಈ ಮುದ್ರಾವನ್ನು ಅಭ್ಯಸಿಸಬೇಕು.

ಶೂನ್ಯ ಮುದ್ರೆಯಲ್ಲಿ ಮಧ್ಯಮ ಬೆರಳಿನ ತುದಿಯನ್ನು ಹೆಬ್ಬರಳಿನ ತುದಿಗೆ ಇಡಬೇಕು ಹೀಗೆ ದಿನವೂ ಈ ಮುದ್ರೆಯನ್ನು ಅಭ್ಯಾಸ ಮಾಡುತ್ತಿದ್ದರೆ , ಪೃಥ್ವಿ ತತ್ವದ ಕೊರತೆ ನಿವಾರಣೆಯಾಗಿ ಹೃದಯ ಹಾಗು ಕಿವಿಯ ಸಮಸ್ಯೆ ದೂರವಾಗುತ್ತದೆ ಹಾಗು ಆಕಾಶ ತತ್ವದ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳು ದೂರವಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top