ಭವಿಷ್ಯ

14 ಫೆಬ್ರವರಿ : ನಿತ್ಯಭವಿಷ್ಯ ಮತ್ತೆ ಪಂಚಾಂಗ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬುಧವಾರ, ೧೪ ಫೆಬ್ರವರಿ ೨೦೧೮
ಸೂರ್ಯೋದಯ : ೦೬:೪೬
ಸೂರ್ಯಾಸ್ತ : ೧೮:೨೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಮಾಘ
ಪಕ್ಷ : ಕೃಷ್ಣ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಶ್ರವಣ
ಯೋಗ : ವ್ಯತೀಪಾತ
ಪ್ರಥಮ ಕರಣ : ವಿಷ್ಟಿ
ಸೂರ್ಯ ರಾಶಿ : ಕುಂಭ
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ದುರ್ಮುಹೂರ್ತ : ೧೨:೧೦ – ೧೨:೫೭
ಅಮೃತಕಾಲ : ೨೦:೦೦ – ೨೧:೪೭
ರಾಹು ಕಾಲ: ೧೨:೩೩ – ೧೪:೦೦
ಗುಳಿಕ ಕಾಲ: ೧೧:೦೬ – ೧೨:೩೩
ಯಮಗಂಡ: ೦೮:೧೩ – ೦೯:೩೯

ಮೇಷ (Mesha)

 

ಹಿರಿಯರ ಮಾತುಗಳನ್ನು ಗೌರವಿಸುವುದರಿಂದ ಆಪತ್ತಿನಿಂದ ದೂರಾಗುವಿರಿ, ಫಲಕ್ಕೊಂದು ಬಲ ದೊರೆತು ಯಶಸ್ಸು ಪಡೆಯುವಿರಿ, ಬೇರೆಯವರ ಸಲಹೆಯಿಂದ ಅಪಾಯ ಸಂಭವ.

ವೃಷಭ (Vrushabh)


ಉತ್ತಮ ಕೆಲಸ ಕಾರ್ಯಗಳಿಂದ ಮನ್ನಣೆ ಗಳಿಸುವುದು, ಸದಾಚಾರ ಕಾರ್ಯಗಳಲ್ಲಿ ಸ್ಪಷ್ಟ ಮನಸ್ಸಿನಿಂದ ತೊಡಗುವಿರಿ, ಸತ್ಕಾರ್ಯಗಳಲ್ಲಿ ತೊಡಗಿ ಯಶಸ್ವಿಗೊಳಿಸುವಿರಿ, ಜನರ ಪ್ರಶಂಸೆಗೆ ಪಾತ್ರರಾಗುವಿರಿ.

ಮಿಥುನ (Mithuna)


ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ, ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಹೊಸ ಜಾಣ್ಮೆಯನ್ನು ಬಳಸಬೇಕಾದ ಸಂದರ್ಭ ಬರಬಹುದು, ನೇರ ಮಾತಿನಿಂದ ಯಶಸ್ಸು.

ಕರ್ಕ (Karka)


ಬಾಳಸಂಗಾತಿಯೊಡನೆ ಸ್ನೇಹದಿಂದ ವರ್ತಿಸಿದಲ್ಲಿ ಆಕೆಯು ಕೂಡಾ ಪ್ರಸನ್ನವದನಳಾಗಿ ನಿಮ್ಮ ಕೆಲಸ ಕಾರ್ಯಕ್ಕೆ ಬೆಂಬಲ ಸೂಚಿಸುವರು. ಆರೋಗ್ಯದ ಕಡೆ ಗಮನ ಇರಲಿ. ಆಂಜನೇಯ ಸ್ತೋತ್ರ ಪಠಿಸಿ.

ಸಿಂಹ (Simha)


ಮನೋಕಾಮನೆಗಳು ಪೂರ್ಣಗೊಳ್ಳಲು ಹಲವು ಅಡೆತಡೆಗಳನ್ನು ಎದುರಿಸಬೇಕಾಗುವುದು. ಮಕ್ಕಳ ಅಸಹಕಾರವು ನಿಮಗೆ ಮುಜುಗರವನ್ನುಂಟು ಮಾಡುವುದು. ದಕ್ಷಿಣಾಮೂರ್ತಿಯನ್ನು ಧ್ಯಾನಿಸಿ.

ಕನ್ಯಾರಾಶಿ (Kanya)


ಖರ್ಚಿನ ದಾರಿಗಳು ಅನೇಕ ರೀತಿಯಲ್ಲಿ ತೆರೆದುಕೊಳ್ಳುವುದು. ಹಾಗಾಗಿ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದು ಕ್ಷೇಮ.

ತುಲಾ (Tula)


ಸಕಾರಾತ್ಮಕ ಚಿಂತನೆಗಳು ನಿಮ್ಮನ್ನು ಉತ್ತುಂಗ ಶಿಖರಕ್ಕೆ ಒಯ್ಯುವುದು. ಮನಸ್ಸಿಗೆ ಬೇಸರವಾಗುವ ಸಂಗತಿ ನಡೆಯುವ ಸಾಧ್ಯತೆ ಇದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮಕ್ಕಳಿಂದ ಸುವಾರ್ತೆ ಕೇಳುವಿರಿ.

ವೃಶ್ಚಿಕ (Vrushchika)


ಕೆಲಸ ಕಾರ್ಯಗಳು ನಿಮಗೆ ಅಧಿಕ ಒತ್ತಡವನ್ನು ತರುವ ಸಾಧ್ಯತೆ ಇದೆ. ಆದರೆ ನೀವು ನಿಮ್ಮ ಕೈಕೆಳಗಿನವರನ್ನು ಪ್ರೀತಿ ವಿಶ್ವಾಸಗಳಿಂದ ನಡೆಸಿಕೊಂಡಲ್ಲಿ ನಿಮಗೆ ಒಳಿತೇ ಆಗುವುದು.

ಧನು ರಾಶಿ (Dhanu)


ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರೆಯವರು ಕರುಬುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಅವರು ರೂಪಿಸುವರು.

ಮಕರ (Makara)


ನಿಮ್ಮ ಹಿಂದೆ ಬಿದ್ದ ಕೆಲಸ ಕಾರ್ಯಗಳಿಗೆಲ್ಲ ಕ್ರಿಯಾಶೀಲತೆ ದೊರೆಯುವುದು. ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಗ್ರಹಗತಿ ಉತ್ತಮವಾಗಿದ್ದು, ಹಣಕಾಸಿನ ತೊಂದರೆ ಇರುವುದಿಲ್ಲ.

ಕುಂಭರಾಶಿ (Kumbha)


ವಿಶೇಷವಾದ ಸಂತೋಷ ಸಮಾಧಾನಗಳು ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು.

ಮೀನರಾಶಿ (Meena)


ಕೆಲ ಗ್ರಹಗಳ ಕಾಟದಿಂದ ತಪ್ಪಿಸಿಕೊಳ್ಳಲು ಗುರು-ಹಿರಿಯರ ಆಶೀರ್ವಾದವನ್ನು ಪಡೆಯಿರಿ ಮತ್ತು ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top