ಮನೋರಂಜನೆ

ಬಿಲ್ಡಪ್ ಸ್ಟಾರ್ ಪ್ರಥಮ್’ನ ನಿಜವಾದ ಹೆಸರು ಏನಂತೆ ಗೊತ್ತಾ?

ಬಿಲ್ಡಪ್ ಸ್ಟಾರ್ ಪ್ರಥಮ್’ನ ನಿಜವಾದ ಹೆಸರು ಏನಂತೆ ಗೊತ್ತಾ?

 

 

ಪ್ರಚಾರಕ್ಕಾಗಿಯೇ ಪ್ರಥಮ್ ಇದ್ದಾರೋ ಅಥವಾ ಪ್ರಚಾರವೇ ಪ್ರಥಮ್’ನನ್ನು ಬಿಡುತ್ತಿಲ್ಲ ಗೊತ್ತಾಗುತ್ತಿಲ್ಲ,. ಸದಾ ಒಂದಿಲ್ಲೊಂದು ಹುಚ್ಚಾಟ, ಗಿಮ್ಮಿಕ್ ಗಳಿಂದಲೇ ಸುದ್ದಿಯಾಗುವ ಪ್ರಥಮ್ ಈಗ ಗಿಮಿಕ್’ನ ಹೊಸಾ ಎಪಿಸೋಡೊಂದು ಶುರುಮಾಡಿದ್ದಾರೆ. ದೇವರಂಥ ಮನುಷ್ಯ ಎಂಬ ತೋಪು ಸಿನಿಮಾದ ನಾಯಕನಾಗಿದ್ದ ಪ್ರಥಮ್ ಸದ್ಯ ಮತ್ತೆರೆಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತನಗೆ ತಾನೇ ಒಳ್ಳೆ ಹುಡುಗ ಎಂದು ನಾಮಕರಣ ಮಾಡಿಕೊಂಡಿರುವ ಈ ಆಸಾಮಿ ಇದೀಗ ತನ್ನ ನಿಜವಾದ ಹೆಸರು ಪ್ರಥಮ್ ಅಲ್ಲ ಎಂಬ ಸತ್ಯವನ್ನ ಬಹಿರಂಗಗೊಳಿಸಿದ್ದಾನೆ.

 

 

ಎಲ್ಲರಿಗೂ ತಿಳಿದಿರುವಂತೆ ಅಪ್ಪು ನಡೆಸಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಈವಾರ ಪ್ರಥಮ್ ಕುಟುಂಬಸ್ಥರು ಸ್ಪರ್ಧಿಗಳಾಗಿ ಬಂದಿದ್ದರು. ಪ್ರಥಮ್‌ ಫ್ಯಾಮಿಲಿ ಎದುರು ಪ್ರತಿಸ್ಪರ್ಧಿಯಾಗಿ ಬಿಗ್‌‌‌‌ಬಾಸ್‌‌‌-5ರ ಸಮೀರ್ ಆಚಾರ್ಯ ಕುಟುಂಬಸ್ಥರು ಬಂದಿದ್ದರು. ಚಟುವಟಿಕೆಗಳೆಲ್ಲಾ ಮುಗಿದ ನಂತರ ಕಾರ್ಯಕ್ರಮದ ಕೊನೆಯಲ್ಲಿ ಅಪ್ಪು ಜೊತೆ ತನ್ನ ಹಳೆ ಚಾಳಿಯಲ್ಲೇ ಮಾತಿಗಿಳಿದ ಪ್ರಥಮ್ ತನ್ನ ನಿಜವಾದ ಹೆಸರು “ಪುನೀತ್” ಎಂದು ಹೇಳಿದ್ದಾನೆ.

ಇವನ ಮಾತುಗಳನ್ನ ಕೇಳಿದವರು ಇವ್ನ್ದು ಇದೇ ಆಯಿತು ಅಂತ ಮೂಗು ಮುರಿಯಬಹುದು ಆದರೆ ಇದು ಸತ್ಯ. ಪ್ರಥಮ್’ನ ಅಸಲಿ ನಾಮಧೇಯ ‘ಪುನೀತ್’ ಅಂತ.. ಈ ವಿಷಯವನ್ನು ಪುನೀತ್ ನಂಬದಿದ್ದಾಗ ತನ್ನ ಐಡೆಂಟಿಟಿ ಕಾರ್ಡ್ ತೋರಿಸಿ ತನ್ನ ಮೂಲ ಹೆಸರು ಏನೆಂದು ಬಹಿರಂಗ ಗೊಳಿಸಿದನು. ‘ ನನ್ನ ನಿಜವಾದ ಹೆಸರು ಪುನೀತ್. ಇಂಡಸ್ಟ್ರಿಗೆ ಒಬ್ಬರೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇರಬೇಕು. ಅದಕ್ಕೆ ರೀಪ್ಲೇಸ್ ಮೆಂಟ್ ಆಗ್ಲಿ ಸೆಕೆಂಡ್ ಕಾಪಿ ಆಗ್ಲಿ ಇರಬಾರದು ಅಂತ ನಾನು ನನ್ನ ಹೆಸರು ಬದಲಾಯಿಸಿಕೊಂಡೆ” ಎಂದು ಪ್ರಥಮ್ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top