ಅರೋಗ್ಯ

ಹೆರಿಗೆ ಹತ್ತಿರ ಬರುತ್ತಿದೆ ಅಂತ ಗೊತ್ತಗ್ಬೇಕಾದ್ರೆ ಈ ವಿಷಯಗಳು ತಲೆಲಿಟ್ಟುಕೊಂಡರೆ ತುಂಬಾನೇ ಒಳ್ಳೇದು ಉಪಯೋಗಕ್ಕೆ ಬರುತ್ತೆ

ಹೆಣ್ಣು ಮಕ್ಕಳು ಅವರ ಗರ್ಭಧಾರಣೆಯ ಸಮಯ ದಲ್ಲಿ ಸಾಮಾನ್ಯ ವಾಗಿ ಅವರ ದೇಹದಲ್ಲಿ ಬದಲಾವಣಿ ಆಗುತ್ತದೆ ಆ ಸಮಯದಲ್ಲಿ ಗರ್ಭಿಣಿಯ ಬಗ್ಗೆ ವಿಶಿಷ್ಟ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಮಹಿಳೆಯರಿಗೆ ಅನೇಕ ಪ್ರಶ್ನೆಗಳು ಹಾಗೂ ಆಸೆಗಳು ಹುಟ್ಟಿಕೊಳ್ಳುತ್ತವೆ.

 

 

ತಾಯಿ ಮತ್ತು ಮಗುವಿನ ಬಾಂಧವ್ಯ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದುದು. ಇವರಿಬ್ಬರ ಸಂಬಂಧವನ್ನು ವಿವರಿಸಲು ಪದಗಳು ಸಾಲದು. ತಾಯಿ ಗರ್ಭಾವಸ್ಥೆಯಲ್ಲಿಯೇ ತನ್ನ ಮಗುವಿನ ಚಲನ ವಲನಗಳನ್ನು ಅರಿತುಕೊಳ್ಳುವುದು ಇದಕ್ಕಾಗಿಯೇ. ಮಗುವಿನ ಮತ್ತು ತಾಯಿಯ ಆರೋಗ್ಯದ ದೃಷ್ಟಿಯಲ್ಲಿ ಮೊದಲ ಮೂರು ತಿಂಗಳು ಹೆಚ್ಚಿನ ಕಾಳಜಿಯನ್ನು ತಾಯಿ ವಹಿಸಬೇಕು.

ಇತ್ತೀಚಿಗೆ ಪ್ರಪಂಚದಾದ್ಯಂತ ಸಹಜ ಹೆರಿಗೆಗಳಿಗಿಂತ ಅವಧಿಗಳಿಗೆ ಮುನ್ನವೇ ಸಿಸೇರಿಯನ್ ಹೆರಿಗೆಗಳು ಹೆಚ್ಚಾಗಿವೆ. ಇದರ ಗಾಯದ ಗುರುತುಗಳು ಒಳಉಡುಪುಗಳಿಂದ ಮುಚ್ಚಿಕೊಂಡಿದ್ದರೂ, ಅದು ನಿಮ್ಮ ಮನಸ್ಸಿಗೂ, ದೇಹಕ್ಕೂ ಒಂದು ರೀತಿಯ ಕಿರಿಕಿರಿಯುಂಟು ಮಾಡಬಹುದು.

ಹೆರಿಗೆಯ ಸಮಯ ಹತ್ತಿರ ಬರುತ್ತಿದ್ದಂತೆ ಮೂತ್ರ ವಿಸರ್ಜನೆಗೆ ಹೋಗಬೇಕು ಅನಿಸುತ್ತದೆ , ಏಕೆಂದರೆ ಮಗುವಿನ ಚಲನೆ ಹೆಚ್ಚಾಗಿರುತ್ತದೆ , ಇದರಿಂದ ಗರ್ಭ ಕಂಠದ ಸುತ್ತಮುತ್ತ ಸ್ನಾಯುಗಳ ಚಲನೆ ಇರುತ್ತದೆ ಇದರಿಂದ ಮೆದುಳಿಗೆ ಮೂತ್ರ ವಿಸರ್ಜನೆ ಮಾಡುವಂತೆ ಸಂದೇಶ ರವಾನೆಯಾಗುತ್ತದೆ .

 

 

ಗರ್ಭ ಕಂಠದ ನಿರಂತರ ಹಿಗ್ಗುವಿಕೆ ಹೆಚ್ಚಾದ್ದರೆ ಹೊಟ್ಟೆಯಲ್ಲಿ ಭಾರದ ಅನುಭವ ಹೆಚ್ಚಾಗಿ , ಶರೀರ ಬಹಳ ಹಿಡಿದುಕೊಂಡಿದೆ ಎನಿಸುತ್ತದೆ .

ಮಗುವಿನ ತಲೆ ಕೆಲ ಮುಖವಾಗಿರುವುದರಿಂದ , ದೇಹ ಸಂಕುಚಿಸಿದಾಗಲೆಲ್ಲ , ಗರ್ಭಿಣಿಯರ ದೇಹದ ಕೆಳಭಾಗದಲ್ಲೆಲ್ಲ ತೂಕ ಹೆಚ್ಚಾದ ಅನುಭವ ಜಾಸ್ತಿಯಾಗುತ್ತದೆ .

ಈ ದೇಹದ ಸಂಕುಚಿತ ಹೆಚ್ಚಾದಾಗಲೆಲ್ಲ ಬಾಯಲ್ಲಿ ನೀರು ಗುಟುರುವುದು ಹೆಚ್ಚಾಗುತ್ತದೆ , ಹೀಗೆ ಕೆಳ ಮುಖದ ತೂಕ ಹೆಚ್ಚಾಗಿ ದೇಹ ಸಂಕುಚಿಸಿದ ಅನುಭವವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು .

ಅಷ್ಟು ದಿನ ಬೆನ್ನು ಮೂಳೆ ಒಂದು ಭಂಗಿಯಲ್ಲಿ ಇದ್ದು , ಗರ್ಭಿಣಿಯರು ಸ್ವಲ್ಪ ಬೆನ್ನು ಮುಂದಕ್ಕೆ ಭಾಗಿಸಿ ನಡೆದು , ಮಗುವಿನ ತೂಕಕ್ಕೂ ಅವರ ನಡುಗೆಗೂ ಸಮತೋಲನ ಕಾಪಾಡಿಕೊಳ್ಳುತ್ತಾರೆ , ಆದರೆ ಮಗುವಿನ ನಿರಂತರ ಜಗ್ಗುವಿಕೆಯಿಂದಾಗಿ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ .

ರಿಲಾಕ್ಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗಲು ಶುರುವಾಗಿದ್ದೇ ತಡ ದೇಹದ ಮೂಳೆಗಳು ಮಗು ಹೊರಗೆ ಬರಲು ಸಹಕರಿಸುವಂತೆ ನೋಡಿಕೊಳ್ಳುತ್ತವೆ ಅಷ್ಟೇ ಅಲ್ಲದೆ , ಸುಲಭವಾಗಿ ಮಗು ಹೊರಗೆ ಬರುವಾಗ ಉಂಟಾಗುವ ದೊಡ್ಡ ಅಡೆ ತಡೆ ಗಳನ್ನೂ ನಿವಾರಿಸುತ್ತದೆ .

ಯಾವುದೇ ಸೂಕ್ಶ್ಮ ಜೀವಿಗಳ ಅಪಾಯ ಸೋಕದಂತೆ ಕಾಪಾಡುತ್ತದೆ .

ಹೆರಿಗೆ ಸಮಯ ಹತ್ತಿರ ಬರುತ್ತಿದ್ದಂತೆ ದೇಹದ ಜೀರ್ಣ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳು ಕಂಡುಬರುತ್ತವೆ , ಭೇದಿ ಹಾಗು ವಾಂತಿ ಹೆಚ್ಚಾಗಿ ಶುರುವಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top