ಅರೋಗ್ಯ

ಕೂದಲು ಉದುರುವುದು ,ಒರಟು, ತಲೆ ಹೊಟ್ಟು, ಬಿಳಿ ಕೂದಲುಈ ಎಲ್ಲ ಸಮಸ್ಯೆಗಳಿಗೆ ದುಬಾರಿ ಎಣ್ಣೆ ಬಳಸೋ ಬದಲು ಮನೇಲೆ ಆಯುರ್ವೇದದ ಮೂಲಿಕಾ ಕೇಶ ತೈಲ ತಯಾರಿಸಿ ಬಳಸಿಕೊಳ್ಳಿ

ಆಯುರ್ವೇದದ ಮೂಲಿಕಾ ಕೇಶ ತೈಲ (ಹರ್ಬಲ್ ಹೇರ್ ಆಯಿಲ್ )

 

ಕೂದಲು ಉದುರುವುದು , ಬೊಕ್ಕ ತಲೆ , ಹಾಗು ಅನೇಕ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದಾರೆ .ನೀವು ಸಹ ಈ ರೀತಿ ತೊಂದರೆ ಅನುಭವಿಸುತ್ತಿದ್ದರೆ ಚಿಂತೆ ಬಿಟ್ಟು ಬಿಡಿ.
ಇಲ್ಲಿದೆ ಸರಳ ಮನೆ ಮದ್ದು.. ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಇಂಥ ತೊಂದರೆಗಳಿಗೆ ಸವಾಲು ಹಾಕಿ ಎದುರಿಸಿ..ಈ ಅಧ್ಬುತವಾದ ಮನೆ ಮದ್ದನ್ನು ಒಮ್ಮೆ ಓದಿ ಹಾಗು ಪ್ರಯೋಗಿಸಿ ನೋಡಿ. ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

 

 

ಕೂದಲು ಉದುರುವುದು ,ಒರಟು, ತಲೆ ಹೊಟ್ಟು, ಬಿಳಿ ಕೂದಲು , ಬೊಕ್ಕ ತಲೆ ಈ ಎಲ್ಲ ಸಮಸ್ಯೆಗಳಿಗೆ ವನ ಸಿರಿಗಳನ್ನು ಬಳಸಿ ಮೂಲಿಕಾ ತೈಲ ಮಾಡಿಕೊಳ್ಳಬಹುದು .

 

ಆಯುರ್ವೇದದ ಮೂಲಿಕಾ ಕೇಶ ತೈಲ (ಹರ್ಬಲ್ ಹೇರ್ ಆಯಿಲ್ ) ತಯಾರಿಸುವ ವಿಧಾನ :

 

ಬೇಕಾಗಿರುವ ಸಾಮಾಗ್ರಿಗಳು :

 

ಕೊಬ್ಬರಿ ಎಣ್ಣೆ (ಶುದ್ಧವಾದ ) – ಒಂದು ಕೆ.ಜಿ

 

 

ಒಂದೆಲಗ (ಬ್ರಾಂಹಿ ) -100 ಗ್ರಾಂ

 

ಗರುಗ (ಭೃಂಗರಾಜ) -100 ಗ್ರಾಂ

 

 

ಬೆಟ್ಟದ ನೆಲ್ಲಿ ಪುಡಿ – 50 ಗ್ರಾಂ


ನಿಂಬೆ ಹಣ್ಣು – ಎರಡು (ಮಧ್ಯಮ ಗಾತ್ರ )

ಸುತ್ತಿನ ಕೆಂಪು ದಾಸವಾಳ ಹೂವು – 4

 

ಬಿಳಿ ದಾಸವಾಳ ಹೂವು – 4 ಮತ್ತು ಸ್ವಲ್ಪ ಎಲೆ

 

ಗೋರಂಟಿ ಎಲೆ -100 ಗ್ರಾಂ


ಕರಿ ಬೇವು -25 ಗ್ರಾಂ

 

ಪಚ್ಚ ಕರ್ಪೂರ -15 ಗ್ರಾಂ

 

 

** ಸೂಚನೆ : ನೀವು ತೆಗೆದುಕೊಳ್ಳುವ ಎಣ್ಣೆಯ ಪ್ರಮಾಣದ ಮೇಲೆ ಇತರ ಪದಾರ್ಥಗಳ ಪ್ರಮಾಣ ನಿಗದಿಸಬೇಕು ,
ಉ .ದಾ: ಅರ್ಧ ಲೀಟರ್ ಎಣ್ಣೆ ತೆಗೆದುಕೊಂಡರೆ ಎಲ್ಲ ಪದಾರ್ಥಗಳು ಮೇಲೆ ತಿಳಿಸಿದ ಪ್ರಮಾಣಕ್ಕಿಂತ ಅರ್ಧ ಇರಬೇಕು .

 

ಮೂಲಿಕಾ ಕೇಶ ತೈಲ ತಯಾರಿಸುವ ವಿಧಾನ :

 

ಮೊದಲಿಗೆ ಒಂದೆಲಗ (ಬ್ರಾಂಹಿ ), ಗರುಗ (ಭೃಂಗರಾಜ) , ಬೆಟ್ಟದ ನೆಲ್ಲಿ ಪುಡಿ, ಗೋರಂಟಿ ಎಲೆ, ಬಿಳಿ ದಾಸವಾಳ ಎಲೆ, ಗೋರಂಟಿ ಎಲೆ, ಕರಿ ಬೇವು ಎಲ್ಲವನ್ನು ನೀರು ಹಾಕದೆ ಚೆನ್ನಾಗಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ .

ಆನಂತರ ಒಂದು ಲೀಟರ್ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸುತ್ತಾ ಇರಿ , ಎಣ್ಣೆ ಸ್ವಲ್ಪ ಕಾದ ಮೇಲೆ ಅದಕ್ಕೆ ಮೇಲೆ ಕುಟ್ಟಿ ಪುಡಿಮಾಡಿಟ್ಟುಕೊಂಡ
ಮಿಶ್ರಣವನ್ನು ಹಾಕಿ ಸೌಟಿನಲ್ಲಿ ತಿರುಗಿಸುತ್ತಾ ಇರಿ .

ಆನಂತರ ಸುತ್ತಿನ ಕೆಂಪು ದಾಸವಾಳ ಹೂವು, ಬಿಳಿ ದಾಸವಾಳ ಹೂವು ಸೇರಿಸಿ ಮತ್ತೆ ಸೌಟಿನಲ್ಲಿ ತಿರುಗಿಸುತ್ತಾ ಇರಿ ,

ಮೊದಲೇ ಸಣ್ಣದಾಗಿ ಕತ್ತರಿಸಿದ ನಿಂಬೆ ಹಣ್ಣಿನ ತುಂಡುಗಳನ್ನು ಅದಕ್ಕೆ ಹಾಕಿ ನಿಧಾನ ಉರಿಯಲ್ಲಿ ಸೌಟಿನಲ್ಲಿ ತಿರುಗಿಸುತ್ತಾ ಇರಿ.

ಎಣ್ಣೆಯೊಳಗಿನ ಸೊಪ್ಪು ಮರಳು ಮರಳಿನ ರೀತಿಯಲ್ಲಿ ಆದ ತಕ್ಷಣ ಉರಿಯನ್ನು ಆರಿಸಿ ಪಾತ್ರೆಯನ್ನು ಕೆಳಗಿಳಿಸಿ .

ಎಣ್ಣೆ ತಣ್ಣಗಾಗಲು ಮುಚ್ಚಳ ಮುಚ್ಚದೇ ಹಾಗೆಯೇ ನೀರು ಬೀಳದ ಜಾಗದಲ್ಲಿ ಬಿಡಿ ,ಎಣ್ಣೆ ತಣ್ಣಗಾದ ಮೇಲೆ ಎಣ್ಣೆಯನ್ನು ಚೆನ್ನಾಗಿ ಹತ್ತಿ ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ

ಸೋಸಿಕೊಂಡ ಎಣ್ಣೆಗೆ ಸ್ವಲ್ಪ ಪಚ್ಚ ಕರ್ಪೂರ ಸೇರಿಸಿ ಒಂದು ಬಾಟಲಿಯಲ್ಲಿ ಹಾಕಿ ಮುಚ್ಚಳ ಮುಚ್ಚಿ ಇಟ್ಟುಕೊಳ್ಳಿ .

ವಾರಕ್ಕೆ ಎರಡರಿಂದ ಮೂರು ದಿನ ಈ ಎಣ್ಣೆ ಬಳಕೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top