ಮನೋರಂಜನೆ

ಪ್ರಿಯಾ ವಾರಿಯರ್ ಕಣ್ಣ ಝಲಕಿನ ಮುಂದೆ ಸಪ್ಪೆಯಾದಳು ಸನ್ನಿ!

ಇದು ಆನ್‌ಲೈನ್ ಯುಗದ ಅಸಲೀ ಚಮತ್ಕಾರ. ಬಹುಶಃ ಈಗಷ್ಟೇ ಒಂದು ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಅಡಿಯಿರಿಸಿರುವ ಪ್ರಿಯಾ ವಾರಿಯರ್ ಎಂಬ ಹುಡುಗಿ ಇಪ್ಪತೈದು ಚಿತ್ರಗಳಲ್ಲಿ ನಟಿಸಿದರೂ ಸಿಗಲಾರದ ಪ್ರಚಾರವನ್ನು ಇಪ್ಪತ್ತು ಸೆಕೆಂಡುಗದ್ದೊಂದು ವೀಡಿಯೋ ಮೂಲಕವೇ ಪಡೆದುಕೊಂಡಿದ್ದಾಳೆ. ಒಂದು ಹಗಲು ಮತ್ತು ರಾತ್ರಿ ಸರಿಯುವಷ್ಟರಲ್ಲೇ ಈ ಹುಡುಗಿ ಪಡೆದ ಪಬ್ಲಿಸಿಟಿ ಕಂಡು ಎಲ್ಲರೂ ದಂಗೆದ್ದು ಹೋಗಿರೋದಂತೂ ಸತ್ಯ!

 

 

ಗೂಗಲ್ ಸರ್ಚ್‌ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದ ಸನ್ನಿ ಲಿಯೋನ್‌ಳನ್ನೇ ಪ್ರಿಯಾ ವಾರಿಯರ್ ಸಪ್ಪೆಯಾಗುವಂತೆ ಮಾಡಿದ್ದಾಳೆಂದರೆ ಈಕೆ ಸೃಷ್ಟಿಸಿರೋ ಹವಾ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತದೆ!

ಒಂದೆರಡು ದಿನಗಳಿಂದ ಪ್ರತಿಯೊಬ್ಬರ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲೂ ಪ್ರಿಯಾ ವಾರಿಯರ್‌ಳದ್ದೇ ಸದ್ದು. ಬಹುತೇಕರ ಶಾಲಾ ಕಾಲೇಜು ದಿನಗಳಲ್ಲಿ ಸಂಭವಿಸೋ ಕುಡಿ ನೋಟದ ಕಣ್ಣಾ ಮುಚ್ಚಾಲೆಯಾಟ, ಅದರ ನವಿರಾದ ಪುಳಕಗಳ ಹಸಿ ಹಸೀ ನೆನಪುಗಳನ್ನು ಮನಸಿಗಂಟಿಸುವಂತಿರೋ ಆ ವೀಡಿಯೋದ ಪ್ರಧಾನ ಆಕರ್ಷಣೆಯಾಗಿದ್ದವಳು ಪ್ರಿಯಾ ವಾರಿಯರ್. ಬಹುಶಃ ಮನಸೊಳಗಿನ ಸುಪ್ತ ಭಾವನೆಗಳನ್ನೆ ಕೆರಳಿಸುವಂಥಾ ಸಾಹಿತ್ಯ, ಹಾಡು, ದೃಷ್ಯಗಳು ಮಾತ್ರವೇ ಇಂಥಾ ಮ್ಯಾಜಿಕ್ಕು ಮಾಡುತ್ತವೇನೋ… ಆದ್ದರಿಂದಲೇ ಕಣ್ಣ ಪಾಪೆಗಳಿಂದಲೇ ಯಾವುದೋ ಸುಪ್ತ ಪದರುಗಳನ್ನು ಮೀಟಿದ ಈ ಹುಡುಗಿಯ ಬಗ್ಗೆ ಹುಡುಗರು, ನಡುವಯಸಿನ ಹುಡುಗರು ಮತ್ತು ವಯಸಾದ ಹುಡುಗರಿಗೂ ಅತೀವ ಕುತೂಹಲ ಮೂಡಿಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ!

 

 

ಪ್ರಿಯಾ ವಾರಿಯರ್ ಬಗ್ಗೆ ದಿನ ಮಾತ್ರದಲ್ಲಿಯೇ ಹುಟ್ಟಿಕೊಂಡ ಕುತೂಹಲ ಎಂಥಾದ್ದಿತ್ತೆಂದರೆ ಮಿಲಿಯಗಟ್ಟಲೆ ಜನ ಈಕೆಯ ಬಗ್ಗೆ ವಿವರ ಕಲೆ ಹಾಕಲು ಗೂಗಲ್ ಮೊರೆ ಹೋಗಿದ್ದರು. ಅದರ ವೇಗ ಯಾವ ಪರಿಯದ್ದೆಂದರೆ, ಅದುವರೆಗೂ ಗೂಗಲ್ ಸರ್ಚ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಸನ್ನಿ ಲಿಯೋನ್ ಕೂಡಾ ಪ್ರಿಯಾ ವಾರಿಯರ್ ಮುಂದೆ ಸಪ್ಪೆಯಾಗಿದ್ದಳು!

ಈಗಷ್ಟೇ ಕಾಲೇಜು ಕಲಿಯುತ್ತಿರೋ ಪ್ರಿಯಾ ವಾರಿಯರ್ `ಒರು ಅಡಾರ್ ಲವ್’ ಚಿತ್ರದ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದವಳು. ಕಾಲೇಜಿನಲ್ಲಿ ನಡೆಯುವ ಲವ್‌ಸ್ಟೋರಿ ಹೊಂದಿರೋ ಈ ಚಿತ್ರದ ಮೂಲಕವಷ್ಟೇ ಈಕೆ ಪರಿಚಯವಾಗಿದ್ದಳಾದರೂ ಅಷ್ಟೇನೂ ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ ಆ ಚಿತ್ರದ ಇಪ್ಪತ್ತು ಸೆಕೆಂಡುಗಳ ವೀಡಿಯೋವನ್ನು ಧನುಷ್ ಅಭಿನಯದ ಥ್ರೀ ಚಿತ್ರದ ಹಿನ್ನೆಲೆ ಸಂಗೀತದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದೇ ಅದು ಸಖತ್ ಫೇಮಸ್ ಆಗಿತ್ತು. ಆ ವೀಡಿಯೋ ಶರ ವೇಗದಲ್ಲಿ ಮಾಲಿವುಡ್ ದಾಟಿ ಎಲ್ಲಾ ಭಾಷೆಗಳನ್ನೂ ಆವರಿಸಿಕೊಂಡಿದ್ದು ನಿಜಕ್ಕೂ ಆನ್‌ಲೈನ್ ಯುಗದ ಮಹಾ ಮಾಯೆ.

 

 

ಹೀಗೆ ಈ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಪ್ರಿಯಾ ವಾರಿಯರ್ ಸಂಪಾದಿಸಿಕೊಂಡಿದ್ದಾಳೆ. ಅದೂ ಒಂದೇ ದಿನದಲ್ಲಿ. ಹೀಗೆ ಹಠಾತ್ತನೆ ಈ ಹುಡುಗಿಗೆ ಸಿಕ್ಕಿರೋ ಪಬ್ಲಿಸಿಟಿ ಕಂಡು ಪ್ರಸಿದ್ಧ ನಟ ನಟಿಯರೇ ಕರುಬಲಾರಂಭಿಸಿದ್ದರೂ ಅಚ್ಚರಿಯೇನಿಲ್ಲ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top