ಸಿನಿಮಾ

ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಶ್ರದ್ದಾ ಶ್ರೀನಾಥ್.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಶ್ರದ್ದಾ ಶ್ರೀನಾಥ್.

 

ಯೂಟರ್ನ್ ಚಿತ್ರದ ಮುಖೇನ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮ ಅತ್ಯುತ್ತಮ ನಟನೆಯ ಮೂಲಖ ಅದ್ಬುತ ಯಶಸ್ಸು ಸಾಧಿಸುತ್ತಿರುವ ನಟಿ ಶ್ರದ್ಧಾ ಶ್ರೀನಾಥ್ ಹಿಂತಿರುಗಿ ವೃತ್ತಿಯಲ್ಲಿ ಲಾಯರ್ ಆಗಿದ್ದರೆ ಶ್ರದ್ಧಾ ಚಿತ್ರ ರಂಗ ಪ್ರವೇಶ ಮಾಡಿರುವು ಆಕಸ್ಮಿಕವಾಗಿದೆ. ಶ್ರದ್ಧಾ ಶ್ರೀನಾಥ್‌ ಈಗಾಗಲೇ ಕನ್ನಡ, ತಮಿಳು ಹಾಗು ತೆಲುಗಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಕನ್ನಡದ ಯುಟ್ಯೂರ್ನ್, ಆಪರೇಷನ್ ಅಲಮೇಲಮ್ಮ ಸೇರಿದಂತೆ, ಅನ್ಯ ಭಾಷೆಯ ವಿಕ್ರಂ ವೇದ, ಕಾಟ್ರಂ ವೆಳ್ಳಿಯಾಡು, ರಿಚ್ಚಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ವಿಜಯ್‌ ಅವರ ಮುಂದಿನ ಸಿನಿಮಾಗೆ ಅವರನ್ನು ಅಪ್ರೋಚ್‌ ಮಾಡಿದ್ದಾರಂತೆ.

 

 

ಯುವ ಪ್ರತಿಭೆ ಶ್ರದ್ಧಾ ಈಗ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆ, ಟಿಗ್ಮಾಂಶು ದುಲಿಯಾ ನಿರ್ದೇಶನ ಮಾಡಿರುವ ಮಿಲನ್ ಟಾಕೀಸ್ ಚಿತ್ರಕ್ಕೆ ಹಾಲಿವುಡ್ ನಟನಾಗಿರುವ ಅಲಿ ಪೈಜಲ್ ಜೊತೆ ಶ್ರದ್ಧಾ ನಾಯಕ ನಟಿಯಾಗಿ ಅಭಿನಯ ಮಾಡಲಿದ್ದಾರೆ. ಮಹಾ ಶಿವರಾತ್ರಿಯ ದಿನ ಶ್ರದ್ಧಾ ತಮ್ಮ ಈ ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಬಾಲಿವುಡ್ ನಿಂದ ಆಫರ್ ಸಿಕ್ಕಿರುವುದಕ್ಕೆ ಸಕತ್ ಖುಷಿಯಾಗಿರುವ ಶ್ರದ್ಧಾ ಶ್ರೀನಾಥ್ ಅವರು ತಮಗೆ ಈ ಆಫರ್ ಸಿಕ್ಕಿರಿವುದು ನಿಜವಾಗಿಯೂ ಅನಿರೀಕ್ಷಿತ ಏನು ಹೇಳಿಕೊಂಡಿದ್ದಾರೆ. ನಿರ್ದೇಶಕರೊಬ್ಬರ ಶಿಫಾರಸು ಮಾಡಿ ಅವರಿಗೆ ಆಡಿಷನ್ ಗೆ ಕಳುಹಿಸಿದ್ದರಂತೆ. ಅಡಿಷನಲ್ಲಿ ಉತ್ತಮವಾಗಿ ಪ್ರತಿಭೆ ತೋರಿದ್ದ ಶ್ರದ್ಧಾ ಈ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಸಿನಿಮಾದಲ್ಲಿ ಎರಡು ವರ್ಷಗಳ ಕಾಲ ಮಿಂಚಿರುವ ಕೆಲಸ ಮಾಡಿರುವ ಶ್ರದ್ಧಾ ಈಗ ಬಾಲಿವುಡ್ ನಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

 

 

ದಕ್ಷಿಣದ ಸಿನಿಮಾ ಗಳಲ್ಲಿ ನಟನೆ ಮಾಡಿದ್ದೂ ನನಗೆ ಅತುತ್ತಮ ಅನುಭವ ತಂದು ಕೊಟ್ಟಿದೆ ಇದರಿಂದ ನಾನು ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಶ್ರದ್ದಾ ಹೇಳಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಚಿತ್ರದ ಬಹುತೇಕ ಶೂಟಿಂಗ್ ನಡೆಯಲಿದೆ. ಇನ್ನು ಲಕ್ನೋ ಹಾಗು ಮಥುರಾ ದಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top