ಮನೋರಂಜನೆ

ಎಸ್ನಾಣಿ ಚಿತ್ರದಲ್ಲಿ ನಾಯಕಿಯಾಗುತ್ತಿಲ್ಲವಂತೆ ಶ್ರುತಿ ಪ್ರಕಾಶ್!

ಎಸ್ನಾಣಿ ಚಿತ್ರದಲ್ಲಿ ನಾಯಕಿಯಾಗುತ್ತಿಲ್ಲವಂತೆ ಶ್ರುತಿ ಪ್ರಕಾಶ್!

 

 

ಬಿಗ್‌ಬಾಸ್ ಸೀಸನ್ ಐದರ ಕಡೇ ತನಕ ನಿರೀಕ್ಷೆ ಹುಟ್ಟಿಸಿದ್ದಾಕೆ ಶ್ರುತಿ ಪ್ರಕಾಶ್. ಅತ್ಯಂತ ಸಹಜವಾದ ವರ್ತನೆ, ಸೂಕ್ಷ್ಮ ಮನಸ್ಥಿತಿಯಿಂದ ಬಿಗ್‌ಬಾಸ್ ಪ್ರೇಕ್ಷಕರ ಮನ ಗೆದ್ದಿದ್ದ ಶ್ರುತಿ ಬಿಗ್‌ಬಾಸ್ ಶೋನಲ್ಲಿ ಗೆಲ್ಲದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಗೆದ್ದಿದ್ದಾಳೆ. ಆಕೆ ಬಿಗ್‌ಬಾಸ್ ಶೋನಿಂದ ಹೊರ ಬರುತ್ತಲೇ ಅವಕಾಶಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಕಳೆದ ಒಂದು ವಾರದಿಂದ ಈಕೆಯ ಕುರಿತು ಹರಡಿದ್ದ ರೂಮರ್ ಗಳಿಗೆ ಈಗ ಈಕೆಯೇ ತೆರೆ ಎಳೆದಿದ್ದಾರೆ.

 

 

ಎಸ್.ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಶ್ರುತಿ ಪ್ರಕಾಶ್ ನಾಯಕಿಯಾಗುತ್ತಿದ್ದಾರೆ ಎನ್ನುವ ವದಂತಿ ಕಳೆದ ಒಂದು ವಾರದಿಂದ ಕೇಳಿಬರುತ್ತಿದ್ದು ಈಗ ಈ ಬಗ್ಗೆ ಸ್ವತಃ ಶ್ರುತಿಯವರೇ ಪ್ರತಿಕ್ರಿಯೆ ನೀಡಿದ್ದು ಎಸ್.ನಾರಾಯಣ್ ಚಿತ್ರದಲ್ಲಿ ನಟಿಸುವ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶ್ರುತಿ “ನಾನು ಎಸ್. ನಾರಾಯಣ್ ಚಿತ್ರದಲ್ಲಿ ನಟಿಸುತ್ತಿಲ್ಲ, ಚಿತ್ರದ ಕುರಿತು ನನ್ನ ಜೊತೆ ಯಾವುದೇ ಮಾತುಕತೆ ನಡೆದಿಲ್ಲ., ಭವಿಷ್ಯದಲ್ಲಿ ಅವರ ಚಿತ್ರದಲ್ಲಿ ನಟಿಸುವ ಆಸೆಯಿದೆ, ನಾನು ನಟಿಸುತ್ತಿರುವ ಚಿತ್ರಗಳ ಬಗ್ಗೆ ಶೀಘ್ರದಲ್ಲೇ ಅಪ್’ಡೇಟ್ ಮಾಡುತ್ತೇನೆ., ನಿಮ್ಮೆಲ್ಲಾ ಗೊಂದಲಗಳಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸುತ್ತೇನೆ ” ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top