ಸಿನಿಮಾ

ಗದ್ದೆಯಲ್ಲಿ ಬೆತ್ತಲಾದಳು ಸನ್ನಿ ಲಿಯೋನ್ ಯಾಕಂತೀರಾ ಮುಂದೆ ಓದಿ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂಡಕಿಂದಪಲ್ಲಿ ಗ್ರಾಮದ ನಿವಾಸಿ ಅಂಕಿನಪಲ್ಲಿ ಚೆಂಚು ರೆಡ್ಡಿ ಎಂಬುವವರು ತಮ್ಮ ತೋಟಕ್ಕೆ ದೃಷ್ಟಿ ತಾಗಬಾರದು ಎಂದು ಒಂದು ಒಳ್ಳೆಯ ಐನಾತಿ ಐಡಿಯಾ ಮಾಡಿ ಸನ್ನಿ ಲಿಯೋನ್ ನ ಬೆತ್ತಲೆ ಫೋಟೊವನ್ನು ಫ್ಲೆಕ್ಸ್ ಮಾಡಿ ಹಾಕಿದ್ದಾರೆ .

ಫ್ಲೆಕ್ಸ್ ಮೇಲೆ ನನ್ನ ನೋಡಿ ಅಳಬೇಡಿ ಅಥವಾ ಹೊಟ್ಟೆ ಹುರಿದುಕೊಳ್ಳಬೇಡಿ ಎಂಬ ಕ್ಯಾಪ್ಶನ್ ಕೂಡ ಇದೆ

 

 

ರೈತರುಗಳು ತಮ್ಮ ತೋಟ ಜಮೀನು ಹಾಗೂ ಹೊಲಗಳಿಗೆ ಬೆದರು ಬೊಂಬೆ ಅಥವಾ ದೃಷ್ಟಿ ಬೊಂಬೆಗಳನ್ನು ಇಡುವುದನ್ನು ನಾವು ಕಂಡಿದ್ದೇವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ  ತೆಂಗಿನಕಾಯಿ ಅಥವಾ ಬೂದುಗುಂಬಳಕಾಯಿಯನ್ನು ಕಟ್ಟುತ್ತಾರೆ ಆದರೆ ಈ ರೈತ ಬಹಳ ವಿಶಿಷ್ಟ

ಬೆಂಚು ರೆಡ್ಡಿ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಂಡೆಕಾಯಿ ಹೂಕೋಸು ಎಲೆಕೋಸು ಇತ್ಯಾದಿಗಳನ್ನು ಬೆಳೆಯುತ್ತಿದ್ದರಂತೆ .

ಆದರೆ ಕೆಲವಾರು ವರ್ಷಗಳಿಂದ ತಮ್ಮ ಜಮೀನಿಗೆ ಎಷ್ಟೇ ಮುತುವರ್ಜಿ ವಹಿಸಿ ಏನೇ ಮಾಡಿದರೂ ಬೆಲೆ ನಾಶವಾಗುತ್ತಲೇ ಇತ್ತಂತೆ ಇದರಿಂದ ಬೆಂಚು ರೆಡ್ಡಿಯವರಿಗೆ ಭಾರಿ ನಷ್ಟವಾಗಿದೆ.

 

 

ಮೊದ ಮೊದಲು ಜಮೀನಿನ ಭರ್ತಿಯಾಗಿ ಬೆಳೆ ಬರುತ್ತಿದ್ದು ಕಾಲಕ್ರಮೇಣವಾಗಿ ಇದು ಕಡಿಮೆಯಾಗುತ್ತಿದೆ ಬೆಂಚು ರೆಡ್ಡಿಯವರು ತಮ್ಮ ಹೊಲ ಅಥವಾ ಜಮೀನು ರಸ್ತೆ ಬದಿಯಲ್ಲಿ ಇರುವುದರಿಂದ ರಸ್ತೆಯಲ್ಲಿ ಹೋಗುವವರ ಕಣ್ಣೆಲ್ಲ ತಮ್ಮ ಹೊಲದ ಮೇಲೆ ಬೀಳುತ್ತದೆ ಎಂದು ಭಾವಿಸಿದ್ದರು ಈ ರೀತಿ ಜನರ ವಕ್ರ ದೃಷ್ಟಿಯಿಂದಲೇ ತಮ್ಮ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ಅಂದುಕೊಳ್ಳುತ್ತಾರೆ ರೆಡ್ಡಿಯವರು .

ಇದಕ್ಕೆ ಪರಿಹಾರವೇನು ಎಂದು ತಮ್ಮ ಸ್ನೇಹಿತರನ್ನು ಸಲಹೆ ಕೇಳಿದಾಗ ಅವರು ಸನ್ನಿ ಲಿಯೋನಿ ಯಾವೊಂದು ಫೋಟೋವನ್ನು ಫ್ಲೆಕ್ಸ್ ಮಾಡಿ ಜಮೀನಿನ ಮುಂಭಾಗದಲ್ಲಿ ಹಾಕಿಸಿ ಎಂದು ಹೇಳಿದರಂತೆ , ಈ ರೀತಿ ಮಾಡಿದಾಗಿನಿಂದ ಹಾದಿಬೀದಿಯಲ್ಲಿ ಹೋಗುವ ಜನರು ಸನ್ನಿ ಲಿಯೋನಿ ಫೋಟೋವನ್ನು ನೋಡುತ್ತಾರಂತೆ ಹೊರತು ಜಮೀನನಲ್ಲ .

 

 

ಈ ಐಡಿಯಾದಿಂದ ರೆಡ್ಡಿಯವರ ಜಮೀನಿಗೆ ಅಂಟಿದ್ದ ದೃಷ್ಟಿದೋಷ ನಿವಾರಣೆ ಆಗಿದೆಯಂತೆ ಹಾಗೂ ಜಮೀನಿನಲ್ಲಿ ಬೆಳೆದ ಬೆಳೆಗಳು ಸರಿಯಾಗಿ ಫಸಲು ನೀಡುತ್ತಿದೆಯಂತೆ ಇದಕ್ಕೆಲ್ಲಾ ರೆಡ್ಡಿಯವರು ಸನ್ನಿ ಲಿಯೋನ್ಗೆ ಥ್ಯಾಂಕ್ಸ್ ಹೇಳಲು ಮರೆಯುವುದಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top