ಹೆಚ್ಚಿನ

ಕೊಲೆ, ಅತ್ಯಾಚಾರ ಮಾಡುವುದಕ್ಕಿಂತ ಹಸ್ತಮೈಥುನ ಒಳ್ಳೆಯದು: ತಸ್ಲೀಮಾ ನಸ್ರೀನ್

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೊಲೆ, ಅತ್ಯಾಚಾರ ಮಾಡುವುದಕ್ಕಿಂತ ಹಸ್ತಮೈಥುನ ಒಳ್ಳೆಯದು: ತಸ್ಲೀಮಾ ನಸ್ರೀನ್

ದೆಹಲಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವಾಗ ತನ್ನ ಪಕ್ಕದ ಆಸನದಲ್ಲಿ ಕುಳಿತ ವ್ಯಕ್ತಿ ಹಸ್ತ ಮೈಥುನ ಮಾಡುತ್ತಿರುವ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಲೇಖಕಿ ತಸ್ಲೀಮಾ ನಸ್ರೀನ್‌ ಹಸ್ತ ಮೈಥುನ ಮಾಡುವುದು ಅತ್ಯಾಚಾರ ಹಾಗು ಕೊಲೆ ಮಾಡುವುದಕ್ಕಿಂತ ಉತ್ತಮ ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಅವರು ಮಾಡಿರುವ ಟ್ವೀಟ್ ಈ ಕೆಳಗಿನಂತಿದೆ.

 

 

ಕಿಕ್ಕಿರಿದ ದೆಹಲಿ ಬಸ್ನಲ್ಲಿ ಒಬ್ಬ ವ್ಯಕ್ತಿ ಹಸ್ತಮೈಥುನ ಮಾಡಿದ್ದಾನೆ. ಇದು ಅತ್ಯಾಚಾರ ಸಂಸ್ಕೃತಿಯ ಯುಗದಲ್ಲಿ ದೊಡ್ಡ ಅಪರಾಧವೆಂದು ಪರಿಗಣಿಸಬಾರದು. ಪುರುಷರು ಅತ್ಯಾಚಾರ ಮತ್ತು ಕೊಲೆ ಮಾಡುವುದಕ್ಕಿಂತ ಹಸ್ತಮೈಥುನ ಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಹಸ್ತಮೈಥುನ ಮೌಡುವುದು ಒಂದು ಅಪರಾಧವೇ ? ಇದು ಕಡಿಮೆ ಅಪರಾಧ. ಎಂದು ತಸ್ಲೀಮಾ ಟ್ವೀಟ್ ಮಾಡಿದ್ದಾರೆ.

 

 

 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ್ ಎನ್ನುವವವರು “ನಿಮಗೆ ಹೇಳುವದರಲ್ಲಿ ಒಂದು ಅಂಶವಿದೆ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಸ್ಥಳದಲ್ಲಿ ತನ್ನ ಲೈಂಗಿಕ ಆಸೆಗಳನ್ನು ನಿಯಂತ್ರಣ ಮಾಡಲು ಆತನಿಗೆ ಸಾಧ್ಯವಿಲ್ಲವಾ?” ಎಂದು ಟ್ವೀಟ್ ಮಾಡಿದಾಗ. ತಸ್ಲೀಮಾ ಉತ್ತರವಾಗಿ “ಅವರು ನಿಯಂತ್ರಿಸಬೇಕು. ಅದು ಅಪರಾಧವಲ್ಲ ಎಂದು ನಾನು ಹೇಳಲಿಲ್ಲ. ಅದು ದೊಡ್ಡ ಅಪರಾಧವಲ್ಲ ಎಂದು ನಾನು ಹೇಳುತ್ತೇನೆ. ಅದು ಅಪರಾಧ, ಆದರೆ ಸಂತ್ರಸ್ತರಿಲ್ಲದ ಅಪರಾಧ” ಎಂದು ಹೇಳಿದರು.

ಇವರು ಮಾಡಿರುವ ಟ್ವೀಟ್ ಈಗ ದೇಶ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top