ಸಿನಿಮಾ

ದರ್ಶನ್ ಗಿಗಾ ಮೂರು ಜನ ಖಡಕ್ ವಿಲನ್ ಗಳು

 

ಈ ಹಿಂದೆ ಟಗರು ಚಿತ್ರದಲ್ಲಿ ನೆಗೆಟಿವ್ ರೋಲ್ ಒಪ್ಪಿಕೊಳ್ಳುವ ಮೂಲಕ ನಟ ಧನಂಜಯ ಆಶ್ಚರ್ಯ ಉಂಟುಮಾಡಿದ್ದರು. ಇನ್ನೇನು ಕೆಲವು ದಿನಗಳಲ್ಲಿ ಟಗರು ಚಿತ್ರ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ ಈ ಹಂತದಲ್ಲಿ ನಟ ಧನಂಜಯ ಟಗರು ಚಿತ್ರದಲ್ಲಿ ಮಾಡಿದ ರೀತಿಯದ್ದೇ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಧನಂಜಯ ಅವರು ಇನ್ನೂ ಹೆಸರಿಸದ ದರ್ಶನ್ ಅವರ 51 ನೇ ಚಿತ್ರದಲ್ಲಿ ವಿಲನ್ ಪಾತ್ರ ವಹಿಸಲಿದ್ದಾರೆ.

 

 

ನಾಲ್ಕು ವರ್ಷಗಳ ಹಿಂದೆ ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯವಾಗಿದ್ದ ಧನಂಜಯ ಅನಂತರ ಅನೇಕ ಮಹತ್ವಾಕಾಂಕ್ಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಎ.ಪಿ ಅರ್ಜುನ್, ಪ್ರೆತಮ್ ಗುಬ್ಬಿ, ಪವನ್ ವಾಡೇಯರ್ ಮತ್ತು ಟಿ.ಎಸ್. ನಾಗಭರಣ ಸೇರಿದಂತೆ ಸ್ಯಾಂಡಲ್ವುಡ್ನ ಕೆಲವು ಉತ್ತಮ ನಿರ್ದೇಶಕರಡಿ ಕೆಲಸ ಮಾಡಿದ್ದರೂ ತಮ್ಮ ಒಲವನ್ನು ವಿಶೇಷ ರೀತಿಯ ಪಾತ್ರಗಳ ಕಡೆ ಹರಿಸುತ್ತಿದ್ದಾರೆ.

 

 

ತನ್ನ ವೃತ್ತಿಜೀವನದಲ್ಲಿ ಟಗರು ಒಂದು ಮಹತ್ವದ ತಿರುವು ಪಡೆಯಲಿದೆ ಎಂದು ಹೇಳಿಕೊಂಡಿದ್ದ ಧನಂಜಯ ಮತ್ತೊಮ್ಮೆ ವಿರೋಧಿ ಪಾತ್ರಧಾರಿಗಳನ್ನು ನಿರ್ವಹಿಸಲು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆರೆಯೂರಲು ಮುಂದಾಗುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ ಅವರ ಪಾತ್ರದ ಅಧಿಕೃತ ಘೋಷಣೆ ಫೆಬ್ರವರಿ 16 ರಂದು ದರ್ಶನದ ಹುಟ್ಟುಹಬ್ಬದಂದು ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ ದರ್ಶನ್ ಅವರ 51ನೇ ಚಿತ್ರವನ್ನ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದು, ವಿಷ್ಣುವರ್ಧನ ಖ್ಯಾತಿಯ ಪಿ.ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ದರ್ಶನ್’ಗೆ ನಾಯಕಿಯಾಗಿ ನಟಿಸಲಿದ್ದಾರೆ.

 

 

ಇನ್ನಿಬ್ಬರು ವಿಲನ್ಗಳಾಗಿ ಆರ್ಮುಗಂ ಖ್ಯಾತಿಯ ರವಿಶಂಕರ್

 

 

ಹಾಗೂ ತಮಿಳಿನ ಸಿಂಗಂ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಠಾಕೂರ್ ಅನೂಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top