ಮನೋರಂಜನೆ

ಸೆಕ್ಸ್ ವರ್ಕರ್ಸ್ ಬೇಕು ಎಂದು ನಟಿ ದೀಪ್ತಿ ಕಾಪ್ಸೆಗೆ ನೇರವಾಗಿ ಕೇಳಿದ ಯುವಕ! ಆ ಕಾಮುಕನಿಗೆ ನಟಿ ಮಾಡಿದ್ದೇನು ಗೊತ್ತಾ?

 ಸೆಕ್ಸ್ ವರ್ಕರ್ಸ್ ಬೇಕು ಎಂದು ನಟಿ ದೀಪ್ತಿ ಕಾಪ್ಸೆಗೆ ನೇರವಾಗಿ ಕೇಳಿದ ಯುವಕ! ಆ ಕಾಮುಕನಿಗೆ ನಟಿ ಮಾಡಿದ್ದೇನು ಗೊತ್ತಾ?

 

 

ಇತ್ತೀಚಿಗೆ ಸಿನಿಮಾ ನಟಿಯ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿದ್ದು ಒಂದೊಂದೇ ಕೇಸ್ ಗಳು ಆಚೆಬರುತ್ತಿವೆ. ಸ್ಯಾಂಡಲ್ ವುಡ್ ನಟಿ ದೀಪ್ತಿ ಕಾಪ್ಸೆಗೆ ಅನಾಮಿಕ ಯುವಕೊಬ್ಬನು “ಲೈಂಗಿಕ ಕ್ರಿಯೆ ನಡೆಸಲು ಯಾರಾದರೂ ಹಾಟ್ ಹುಡುಗಿಯರು ಬೇಕಾಗಿದ್ದಾರೆ. ಅದಕ್ಕೆ ತಕ್ಕಂತೆ ಹಣ ನೀಡುವುದಾಗಿ” ವಾಟ್ಸ್​ಆ್ಯಪ್ ಮೂಲಕ ಅಸಭ್ಯವಾಗಿ ಮೆಸೇಜ್ ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮೊನ್ನೆ ಸಾಯಂಕಾಲ ಈ ಮೆಸೇಜ್ ದೀಪ್ತಿ ಅವರ ಕಣ್ಣಿಗೆ ಬಿದ್ದಿದ್ದು ಆ ಕೂಡಲೇ ಆ ಕಾಮುಕನಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡ ದೀಪ್ತಿ ಕಾಪ್ಸೆ “ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಅವರಿಗೆ ದುಡ್ಡು ನೀಡುವ ಅಗತ್ಯವಿಲ್ಲ ಹೋಗಿ ಅವರನ್ನ ಕೇಳು” ಎಂದು ಖಡಕ್ಕಾಗಿ  ಉತ್ತರಿಸಿದ್ದಾರೆ.. ಸಾಲದಕ್ಕೆ ಆತನ ಆ ಅಶ್ಲೀಲಾ ಸಂದೇಶವನ್ನ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುವುದಾಗಿಯೂ ತಿಳಿಸಿದ್ದಾರೆ. ದೀಪ್ತಿ ಹೇಳಿದಂತೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪ್ತಿ “ಈ ರೀತಿಯ ಘಟನೆಗಳು ಯಾವಾಗಲು ನಡೆಯುತ್ತಲೇ ಇರುತ್ತವೆ… ಇಂಥವರಿಗೆ ಪಾಠವಾಗಬೇಕು ಅಂತಲೇ ಈತನಿಗೆ ಈ ರೀತಿ ಮಾಡಿದ್ದೇನೆ. ಅವನ ಕೆಟ್ಟ ಮೆಸೇಜ್ ಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಹೇಳಿದ ಕೂಡಲೇ, ತನ್ನ ವಾಟ್ಸ್​ಆ್ಯಪ್​ ಖಾತೆ ಹ್ಯಾಕ್ ಆಗಿದೆ, ಯಾರೋ ಅದನ್ನ ದುರ್ಬಕೆ ಮಾಡಿಕೊಂಡಿದ್ದಾರೆ ಎಂದು ನಾಟಕವಾಡುತ್ತಾ ನನ್ನ ವಾಟ್ಸಾಪ್ ಅಕೌಂಟ್ ಅನ್ನು ಬ್ಲಾಕ್​ ಮಾಡಿದ್ದಾನೆ” ಎಂದು ಹೇಳಿದ್ದಾರೆ.

ಹನಿ ಹನಿ ಇಬ್ಬನಿ, ಜ್ವಲಂತಂ, ಮಾಲ್ಗುಡಿ ಡೇಸ್, ಕಿರೀಟ ಮತ್ತು ಉಪೇಂದ್ರ ಮತ್ತೆ ಬಾ ಸಿನಿಮಾಗಳಲ್ಲಿ ನಟಿಸಿರುವ ದೀಪ್ತಿ ತಮ್ಮ ನ್ಯಾಚುರಲ್ ನಟನೆ ಮೂಲಕ ಸಿನಿರಸಿಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top