ಮನೋರಂಜನೆ

ಟಗರು ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಸಿಕ್ತು A ಸರ್ಟಿಫಿಕೇಟ್.

ಟಗರು ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಸಿಕ್ತು A ಸರ್ಟಿಫಿಕೇಟ್.

 

 

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಬಹು ನಿರೀಕ್ಷಿತ ಚಿತ್ರ ಟಗರು ಸೇನಾರ್ ಮುಗಿಸಿದ್ದು ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ 23ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು ಭರ್ಜರಿ ಪ್ರತಿಕ್ರಿಯೆ ಮಡೆದುಕೊಂಡಿದೆ. ಈಗ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿರುವುದು ಚಿತ್ರದಲ್ಲಿ ಎಂಥೆಂಥಾ ರಗಡ್ ಸೀನ್ ಗಳು ಇರುತ್ತೇವೆಯೋ ಎಂದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ.

 

 

ಸುಮಾರು ಐನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಟಗರು ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ಚಿತ್ರತಂಡ ಬೆಂಗಳೂರಿನ ಕೆ.ಜಿ.ರಸ್ತೆಯ್ಲಲಿರುವ ಸಂತೋಷ್ ಚಿತ್ರಮಂದಿರ ಮೇನ್ ಥಿಯೇಟರ್ ಆಗಿ ಮಾಡಿಕೊಳ್ಳಲು ನಿರ್ಧರಿಸಿದೆ. ತಾರಾಬಳಗದಿಂದಲೇ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿರುವ ಟಗರು ಚಿತ್ರವನ್ನು ಯಾವಾಗ ಕಣ್ತುಂಬಿಕೊಳ್ಳುತ್ತೀವೋ ಎಂದು ಸಿನಿ ರಸಿಕರು ಕಾದು ಕುಳಿತಿದ್ದಾರೆ.

ಕಡ್ಡಿಪುಡಿ ಸಿನಿಮಾದ ನಂತರ ಶಿವಣ್ಣ ದುನಿಯಾ ಸೂರಿ ಡೈರೆಕ್ಷನ್ ನಲ್ಲಿ ಅಭಿನಯಿಸುತ್ತಿರುವ ಟಗರು ಚಿತ್ರದಲ್ಲಿ ವಿಲನ್‌ಗಳಾಗಿ ಧನಂಜಯ್‌ ಮತ್ತು ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ ಮಾನ್ವಿತಾ ಮತ್ತು ಭಾವನಾ ಶಿವರಾಜಕುಮಾರ್’ಗೆ ನಾಯಕಿಯರಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top