ಮನೋರಂಜನೆ

ಎರಡು ವರ್ಷಗಳ ನಂತರ ದರ್ಶನ್ ಭೇಟಿ ಮಾಡಿದ ಬುಲೆಟ್ ಪ್ರಕಾಶ್!

ಎರಡು ವರ್ಷಗಳ ನಂತರ ದರ್ಶನ್ ಭೇಟಿ ಮಾಡಿದ ಬುಲೆಟ್ ಪ್ರಕಾಶ್!

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹಾಸ್ಯ ನಟ ಬುಲೆಟ್ ಪ್ರಕಾಶ್ ಮಧ್ಯೆ ಇದ್ದ ಸ್ನೇಹ ಸಂಬಂಧ ಎಂಥದ್ದು ಅಂತ ಎಲ್ರಿಗೂ ಗೊತ್ತಿರೋದೆ.. ದಚ್ಚು ಎಲ್ಲಿ ಇರ್ತಾರೊ ಅಲ್ಲಿ ಬುಲೆಟ್ ಇರ್ಲೇಬೇಕಿತ್ತು. ಹೀಗಾಗಿ ಇವ್ರನ್ನ ಸ್ಯಾಂಡಲ್‌ವುಡ್‌ನ ಕುಚ್ಚುಕ್ಕು ಗೆಳೆಯರು ಅಂತ ಹೇಳಲಾಗ್ತಿತ್ತು. ಇದೇ ಗೆಳೆತನಕ್ಕೆ ಸಾಕ್ಷಿಯಾಗಿ ಡಿ ಬಾಸ್ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಇರಲೇಬೇಕು ಅನ್ನುವಂತಿತ್ತು.

 

 

ಬುಲೆಟ್ ಪ್ರಕಾಶ್ ಗಾಗಿ ದರ್ಶನ್ ಮಾಡಲು ಮುಂದಾಗಿದ್ದ ಪೂಜೈ ರಿಮೇಕ್ ಸುಲ್ತಾನ್ ಪಬ್ಲಿಸಿಟಿ ಮಾಡಬಾರ್ದು ಅಂತ ದರ್ಶನ್ ತಮ್ಮ ದಿನಕರ್ ಬುಲೆಟ್’ಗೆ ಹೇಳಿದ್ದೇ ರಾದ್ದಾಂತವಾಗಿತ್ತು. ಇಬ್ಬರ ನಡುವೆ ರಾತ್ರೋ ರಾತ್ರಿ ಆದ ಜಗಳದಿಂದ ದರ್ಶನ್ ಜೊತೆಗಿನ ಸ್ನೇಹ ಮುರಿದು ಬಿದ್ದಿತ್ತು ಎಂದು ಎಲ್ಲರು ಮಾತನಾಡಿಕೊಂಡಿದ್ದರು.. ನಂತರ ಬುಲೆಟ್ ಪ್ರಕಾಶ್ ಡಿ ಕಂಪೆನಿ ಅಡ್ಡಾದಿಂದ ಹೊರಬಂದಿದ್ರು ಅನ್ನೋದಕ್ಕಿಂತ ಹೆಚ್ಚಾಗಿ ದರ್ಶನ್ ಬುಲೆಟ್‌ನ ದೂರ ಇಟ್ಟಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದಲ್ಲಿ ಹರಿದಾಡಿದ್ವು.

 

 

ಆದರೀಗ ಇದ್ದಕ್ಕಿದ್ದ ಹಾಗೇ ಇತ್ತೀಚೆಗೆ ಇಬ್ರು ಒಂದೇ ಕಡೆ ದರ್ಶನ ಕೊಟ್ಟು ಎಲ್ರಿಗೂ ಶಾಕ್ ಕೊಟ್ಟಿದ್ದಾರೆ, ಹೌದು ಆದರೆ ಈಗ ನಡೆದಿರುವ ಅಚ್ಚರಿಯ ಬೆಳವಣಿಗೆಯೆಂದರೆ ಬುಲೆಟ್ ಪ್ರಕಾಶ್ ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಬುಲೆಟ್ ಪ್ರಕಾಶ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ “” ಪೋಸ್ಟ್ ಮಾಡಿದ್ದಾರೆ. ನಾಳೆ ದರ್ಶನ್ ಅವರ ಹುಟ್ಟುಹಬ್ಬವಿರುವುದರಿಂದ ವಿಶ್ ಮಾಡಲು ಹೋಗಿದ್ದಾರೆ ಎಂದು ಮಾತು ಕೇಳಿಬಂದಿದೆ.

ದರ್ಶನ್ ಹಾಗೂ ಬುಲೆಟ್ ಪ್ರಕಾಶ್ ಮತ್ತೆ ಒಂದಾಗಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿತ್ತು, ಬುಲೆಟ್ ಪ್ರಕಾಶ್ ಮಾಡಿರುವ ಪೋಸ್ಟ್ ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top