ಮನೋರಂಜನೆ

ದರ್ಶನ್ 52ನೇ ಚಿತ್ರಕ್ಕೆ ಎಂ.ಡಿ.ಶ್ರೀಧರ್ ನಿರ್ದೇಶನ! ಟೈಟಲ್ ಏನು ಗೊತ್ತಾ?

ದರ್ಶನ್ 52ನೇ ಚಿತ್ರಕ್ಕೆ ಎಂ.ಡಿ.ಶ್ರೀಧರ್ ನಿರ್ದೇಶನ!

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿರುವಾಗಲೇ ಹೊಸಾ ಚಿತ್ರಗಳ ಬಗೆಗಿನ ಕುತೂಹಲ ಕಾವೇರಲಾರಂಭಿಸಿವೆ. ಈಗಾಗಲೇ ಅವರ 51 ಚಿತ್ರಕ್ಕೆ ಯಜಮಾನ ಎಂಬ ಟೈಟಲ್ ಫಿಕ್ಸ್ ಆಗಿದ್ದು ಚಿತ್ರದ ಶೂಟಿಂಗ್ ಇನ್ನೇನು ಶುರುವಾಗಲಿದೆ. ಯಜಮಾನ ಚಿತ್ರದ ನಂತರ ದರ್ಶನ್ ನಟಿಸಲಿರುವ 52ನೇ ಚಿತ್ರದ ಬಗ್ಗೆ ಈಗಾಗಲೇ ತರತರನಾದ ಸುದ್ದಿಗಳು ಹರಿದಾಡ ತೊಡಗಿವೆ.

 

 

ಈ ಹಿಂದೆ ದರ್ಶನ್ ಅವರ 52ನೆ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಾರೆ ಅದಕ್ಕೆ ಒಡೆಯರ್ ಎಂಬ ಟೈಟಲ್ ಇಡಲಾಗಿದೆ ಎಂಬ ಸುದ್ದಿಯಾಗಿತ್ತು.. ಇದರ ಜೊತೆಗೆ ತಮಿಳಿನ ‘ವೀರಂ’ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟಿಸುತ್ತಿದ್ದು ಅದನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸುತ್ತಾರೆ ಎಂಬ ಮಾತುಗಳೂ ಕೂಡ ಕೇಳಿಬಂದಿದ್ದವು. ಆದರೆ ಈಗ ದರ್ಶನ್ ಅವರ 52ನೇ ಚಿತ್ರಕ್ಕೆ ಸಂಭಂದಿಸಿದಂತೆ ಹೊಸ ಸುದ್ದಿಯೊಂದು ಹೊರಬಂದಿದೆ.

ಯಜಮಾನ ಚಿತ್ರ ಮುಗಿದ ನಂತರ ದರ್ಶನ್ ಅವರ 52ನೇ ಚಿತ್ರಕ್ಕೆ ‘ಒಡೆಯರ್’ ಎಂಬ ಟೈಟಲ್ ಪಕ್ಕಾ ಆಗಿದು ಆ ಚಿತ್ರವನ್ನು ಪವನ್ ಒಡೆಯರ್ ಬದಲು ಎಂ.ಡಿ ಶ್ರೀಧರ್ ನಿರ್ದೇಶನ ಮಾಡುತ್ತಾರೆ ಎಂದು ತಿಳಿದುಬಂದಿದೆ., ಆದರೆ ಈ ಚಿತ್ರ ವೀರಂ ರೀಮೇಕೋ ಅಥವಾ ಸ್ವಮೇಕ್ ಚಿತ್ರವೋ ಎಂಬ ವಿಷಯ ತಿಳಿದುಬಂದಿಲ್ಲ. ಈ ಹಿಂದೆ ಎಂ.ಡಿ. ಶ್ರೀಧರ್ ದರ್ಶನ್ ಜೊತೆ `ಪೊರ್ಕಿ’ ಹಾಗೂ `ಬುಲ್‍ಬುಲ್’ ಸಿನಿಮಾಗಳನ್ನ ಮಾಡಿ ಮೋಡಿ ಮಾಡಿದ್ದರು. ನಾಳೆ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಂಗವಾಗಿ ಈ ಎಲ್ಲಾ ಗಾಳಿಸುದ್ದಿಗಳಿಗೆ ತೆರೆ ಬೀಳುವ ನಿರೀಕ್ಷೆಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top