ಮನೋರಂಜನೆ

ದರ್ಶನ್ ಐವತ್ತೊಂದನೇ ಚಿತ್ರಕ್ಕೆ ರಗಡ್ ವಿಲನ್ ಫಿಕ್ಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತೊಂದನೇ ಚಿತ್ರದ ಬಗ್ಗೆ ಮೊದಲು ಸವಿವರವಾದ ವರದಿ ನೀಡಿದ್ದು ಸಿನಿಬಜ್. ಇದೀಗ ಈ ಚಿತ್ರಕ್ಕೆ ತಯಾರಿ ಬಿರುಸಾಗಿದೆ. ನಿರ್ದೇಶಕ ಬಿ.ಸುರೇಶ್ ನಿರ್ಮಾಣದ ಈ ಚಿತ್ರದ ಬಗ್ಗೆ ಒಂದೊಂದೇ ಅಚ್ಚರಿಯ ಮಾಹಿತಿಗಳೂ ಜಾಹೀರಾಗುತ್ತಿವೆ.

 

 

ಈ ಚಿತ್ರದಲ್ಲಿ ಮೂವರು ಖಳನಟರು ದರ್ಶನ್ ಅವರಿಗೆ ಮುಖಾಮುಖಿಯಾಗಿರಲಿದ್ದಾರೆಂಬ ಸುದ್ದಿ ಆರಂಭಿಕವಾಗಿಯೇ ಹರಡಿಕೊಂಡಿತ್ತು. ಆ ನಂತರ ಧನಂಜಯ್ ಮತ್ತು ರವಿಶಂಕರ್ ಎಂಬ ಎರಡು ಹೆಸರುಗಳು ಫೈನಲ್ ಆದೇಟಿಗೆ ಮೂರನೆಯವರ್‍ಯಾರೆಂಬ ಕುತೂಹಲ ಏರಿಕೊಂಡಿತ್ತು.

ಇದೀಗ ಅದೂ ಕೂಡಾ ಜಾಹೀರಾಗಿದೆ. ಸಿಂಗಂ-೩ ಖ್ಯಾತಿಯ ಖಡಕ್ ಲುಕ್ಕಿನ ಖಳನಟ ಠಾಕೂರ್ ಅನೂಪ್ ಸಿಂಗ್ ಮೂರನೇ ಖಳನಟನಾಗಿ ಫಿಕ್ಸಾಗಿದ್ದಾರೆ!

 

 

ದರ್ಶನ್ ಅವರಷ್ಟೇ ಎತ್ತರದ, ಕಟೆದಿಟ್ಟಂಥಾ ಕಟ್ಟುಮಸ್ತಾದ ದೇಹದ ಠಾಕೂರ್ ಅನೂಪ್ ಸಿಂಗ್ ಈಗಾಗಲೇ ಬಾಲಿವುಡ್ ಮಟ್ಟದಲ್ಲಿಯೂ ಗಮನ ಸೆಳೆದಿರೋ ನಟ. ದರ್ಶನ್ ಅವರ ಐವತ್ತೊಂದನೇ ಸಿನಿಮಾ ಮೂಲಕ ಅನೂಪ್ ಎರಡನೇ ಬಾರಿ ಕನ್ನಡ ಚಿತ್ರ ರಂಗಕ್ಕೆ ಅಡಿಯಿರಿಸಿದ್ದಾರೆ. ಈ ಹಿಂದೆ ರೋಗ್ ಎಂಬ ಚಿತ್ರದಲ್ಲಿ ಅವರು ಮೊದಲ ಸಲ ಕನ್ನಡದಲ್ಲಿ ಖಳ ನಟನಾಗಿ ನಟಿಸಿದ್ದರು.

ಈವರೆಗೆ ದರ್ಶನ್ ಅವರು ಅಭಿನಯಿಸಿರೋ ಚಿತ್ರಗಳ ಕಥೆಗಿಂಥಾ ಪಕ್ಕಾ ಭಿನ್ನವಾದ ಕಥೆಯನ್ನು ಸದರಿ ಚಿತ್ರ ಹೊಂದಿದೆಯಂತೆ. ದರ್ಶನ್ ಈ ಹಿಂದೆಂದಿಗಿಂತಲೂ ಕಟ್ಟುಮಸ್ತಾದ ದೇಹವನ್ನು ಅಣಿಗೊಳಿಸಿಕೊಂಡು ಈ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಇವರಿಗೆ ಎದುರಾಗಿ ಬರುವ ಮೂವರು ಖಳ ನಟರ ಪಾತ್ರಗಳಲ್ಲ್ಲಿ ಎರಡಕ್ಕೆ ಆಯಾ ಪಾತ್ರಗಳಿಗೆ ಪಕ್ಕಾ ಸೂಟ್ ಆಗುವಂಥಾ ಧನಂಜಯ್ ಮತ್ತು ರವಿಶಶಂಕರ್ ಅವರನ್ನು ಚಿತ್ರತಂಂಡ ಆರಿಸಿತ್ತು. ಆದರೆ ದೈಹಿಕವಾಗಿಯೂ ಕಟ್ಟುಮಸ್ತಾದ ಮೂರನೇ ಖಳ ನನಟನಿಗಾಗಿ ಭಾರೀ ತಲಾಷು ನಡೆದಿತ್ತು. ಕಡೆಗೂ ಆ ಪಾತ್ರಕ್ಕೆ ಠಾಕೂರ್ ಅನೂಪ್ ಸಿಂಗ್ ಫಿಕ್ಸಾಗಿದ್ದಾರೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top