ಮನೋರಂಜನೆ

ಡಿ ಉತ್ಸವಕ್ಕೆ ಕ್ಷಣಗಣನೆ : ಹೇಗಿದೆ ಗೊತ್ತಾ ದರ್ಶನ್ ಬರ್ತಡೇ ಆಚರಣೆಯ ತಯಾರಿ?

ಡಿ ಉತ್ಸವಕ್ಕೆ ಕ್ಷಣಗಣನೆ : ಹೇಗಿದೆ ಗೊತ್ತಾ ದರ್ಶನ್ ಬರ್ತಡೇ ಆಚರಣೆಯ ತಯಾರಿ?

 

 

ತಮ್ಮ ನೆಚ್ಚಿನ ನಟರು ಹುಟ್ಟಿದ ದಿನವೆಂಬುದು ಅಭಿಮಾನಿಗಳ ಪಾಲಿಗೆ ಅಕ್ಷರಶಃ ಹಬ್ಬ. ಈ ಬಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಟ್ಟುಹಬ್ಬವನ್ನು ಅಭಿಮಾನಿಗಳು ಉತ್ಸವದಂತೆ ಸಾರ್ಥಕವಾಗಿ ಆಚರಿಸಲು ಮುಂದಾಗಿದ್ದಾರೆ. ಅದಕ್ಕೆ ಅಭಿಮಾನಿಗಳೇ ಸೇರಿಕೊಂಡು ‘ಡಿ ಉತ್ಸವ’ ಎಂಬ ಹೆಸರನ್ನೂ ಫೈನಲ್ ಮಾಡಿಕೊಂಡು ಅದರ ಚೆಂದದ ಲೋಗೋವನ್ನೂ ಮಾಡಿಕೊಂಡಿದ್ದಾರೆ. ಜೊತೆಗೆ ಡಿ ಉತ್ಸವದ ಸಂಪೂರ್ಣವಾದ, ಅಚ್ಚುಕಟ್ಟಾದ ರೂಪುರೇಷೆಗಳನ್ನೂ ಸಿದ್ಧಪಡಿಸಿಕೊಂಡಿದ್ದಾರೆ.

 

 

ನಾಳೆ (ಫೆಬ್ರವರಿ 16) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 42ನೆ ಹುಟ್ಟುಹಬ್ಬ, ತಮ್ಮ ನೆಚ್ಚಿನ ನಟನ ಬರ್ತಡೇಯನ್ನು ವಿಜೃಂಭಣೆಯಿಂದ ಆಚರಿಸಲು ಯೋಜಿಸಿರುವ ಡಿ ಬಾಸ್ ಅಭಿಮಾನಿಗಳು ಈಗಾಗ್ಲೇ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯ ಬಳಿ ಜಾತ್ರೆ ರೀತಿಯ ಕಳೆ ಕಟ್ಟುವಂತೆ ಮಾಡಿದ್ದಾರೆ. ಏರಿ ತುಂಬೆಲ್ಲಾ ಪ್ಲೆಕ್ಸ್ ಗಳು,ಬ್ಯಾನೆರ್’ಗಳು, ಬಂಟಿಗ್ಸ್’ಗಳು, ರಾರಾಜಿಸುತ್ತಿದ್ದು ದರ್ಶನ್ ಬೃಹತ್ ಕಟೌಟ್ ಒಂದು ತಲೆಯೆತ್ತಿದೆ. ದರ್ಶನ್ ಮನೆಯಿರುವ ರಸ್ತೆಯ ಎಂಟ್ರನ್ಸ್‌ ಬಳಿ ದ್ವಾರ ಬಾಗಿಲು ರೀತಿಯಲ್ಲಿ ಚಂದದ ಸೆಟ್ ಹಾಕಲಾಗಿದೆ.

 

 

ಒಟ್ಟಾರೆಯಾಗಿ ದರ್ಶನ್ ಅವರ ಹುಟ್ಟುಹಬ್ಬವನ್ನು ಈ ಹಿಂದಿಗಿಂತಲೂ ಭಿನ್ನವಾಗಿ ಆಚರಿಸಲು ಅಭಿಮಾನಿಗಳು ಮತ್ತು ಡಿ ಕಂಪೆನಿಯ ಮುಖ್ಯಸ್ಥರು ಮುಂದಾಗಿದ್ದಾರೆ. ಅದಕ್ಕಾಗಿನ ತಯಾರಿಗಳು ರಾತ್ರಿ ಹಗಲಿನ ಬೇಧವಿಲ್ಲದೆ ನಡೆಯುತ್ತಿವೆ! ಕೇವಲ ಸಂಭ್ರಮ ಸಡಗರ ಮಾತ್ರವಲ್ಲದೆ ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳನ್ನೂ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top