ಹೆಚ್ಚಿನ

ಮನೆಗೆ ಬಾಗಿಲಿಗೆ ಬರುವ ಈ ನಾಲ್ಕು ನಿರ್ದಿಷ್ಟ ವ್ಯಕ್ತಿಗಳನ್ನು ಯಾವತ್ತಿಗೂ ಸಹ ಬರೀ ಕೈಯಲ್ಲಿ ಕಳುಹಿಸಬಾರದು

ಮನೆಗೆ ಬಾಗಿಲಿಗೆ ಬರುವ ಈ ನಾಲ್ಕು ನಿರ್ದಿಷ್ಟ ವ್ಯಕ್ತಿಗಳನ್ನು ಯಾವತ್ತಿಗೂ ಸಹ ಬರೀ ಕೈಯಲ್ಲಿ ಕಳುಹಿಸಬಾರದು

ನಿಮ್ಮ ಮನೆ ಬಾಗಿಲಿಗೆ ಬಂದ ಬಡ ಮತ್ತು ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಎಂದಿಗೂ ಸಹ ಬರಿ ಕೈಯಲ್ಲಿ ವಾಪಸ್ ಕಳುಹಿಸಬೇಡಿ .ಇಂತಹ ವ್ಯಕ್ತಿಗಳಿಗೆ ದಾನ ಮಾಡಿದರೆ ನಿಮ್ಮ ಪಾಪ ಕರ್ಮಗಳು ಕಳೆಯುತ್ತವೆ.
ಪಂಚತಂತ್ರ ಮಿತ್ರ ಲಾಭದ ಪ್ರಕಾರ ಕೆಲವು ನಿರ್ದಿಷ್ಟವಾದ ಜನರಿಗೆ ದಾನ ಮಾಡಿದರೆ ಇದು ಅತ್ಯಂತ ಲಾಭಕಾರಿಯಾಗಿದ್ದು. ನಮ್ಮ ಹಣ ಮತ್ತು ಧನ ಸಂಪತ್ತನ್ನು ಹೆಚ್ಚಿಸುತ್ತದೆ.
ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಮರ್ಥವಿರುವ ವ್ಯಕ್ತಿಗಳು ಅಗತ್ಯವಿರುವವರಿಗೆ ಅವಶ್ಯವಾಗಿ ದಾನ ಮಾಡಬೇಕು.

ಅದರಲ್ಲೂ ಮನೆಗೆ ಬರುವ ಈ ನಾಲ್ಕು ನಿರ್ದಿಷ್ಟ ವ್ಯಕ್ತಿಗಳನ್ನು ಎಂದಿಗೂ ಸಹ ಬರೀ ಕೈಯಲ್ಲಿ ಕಳುಹಿಸಬಾರದು.

1. ಭಿಕ್ಷುಕರು.

ಮನೆಯ ಬಾಗಿಲಿಗೆ ಬರುವ ಭಿಕ್ಷುಕರನ್ನು ಎಂದು ಖಾಲಿ ಕೈಯಲ್ಲಿ ಕಳುಹಿಸಬಾರದು. ಖಾಲಿ ಕೈನಲ್ಲಿ ಭಿಕ್ಷುಕರು ಮನೆಯಿಂದ ಹೋದರೆ ಆ ಮನೆಗೆ ದರಿದ್ರ ನಾರಾಯಣನು ಪ್ರವೇಶ ಮಾಡಿದ ಎಂದೇ ಅರ್ಥ.

 

 

2. ಮಂಗಳಮುಖಿಯರು.

ಮಂಗಳಮುಖಿಯರನ್ನು ಬುಧ ಗ್ರಹವೆಂದು ಪರಿಗಣಿಸಲಾಗಿದೆ. ಅವರು ಮಾಡಿದ ಆಶೀರ್ವಾದವೂ ಬೇಗನೆ ಫಲ ನೀಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಮನೆಗೆ ಮಂಗಳಮುಖಿಯರು ಬಂದರೆ ಅವರನ್ನು ಎಂದಿಗೂ ಸಹ ಖಾಲಿ ಕೈಯಲ್ಲಿ ತಿರುಗಿ ಕಳುಹಿಸಬೇಡಿ .

 

 

3.ರೋಗಿಗಳು.

ಮನೆಗೆ ಬರುವ ರೋಗಿಗಳನ್ನು ಖಾಲಿ ಕೈಯಲ್ಲಿ ಕಳುಹಿಸಬಾರದು . ರೋಗಿಗಳನ್ನು ಶನಿ ಹಾಗೂ ರಾಹುವಿಗೆ ಹೋಲಿಕೆ ಮಾಡಲಾಗುತ್ತದೆ. ರೋಗಿಗಳಿಗೆ ದಾನ ಮಾಡಿದರೆ ಶುಭ ಫಲವು ಪ್ರಾಪ್ತಿಯಾಗುತ್ತದೆ.

4.ವೃದ್ಧ ಭಿಕ್ಷುಕರು.

ವೃದ್ಧ ಭಿಕ್ಷುಕರಿಗೆ ಎಂದು ದಾನ ನೀಡದೆ ಖಾಲಿ ಕೈಯಲ್ಲಿ ಕಳುಹಿಸಬೇಡಿ. ವೃದ್ಧರು ಆಶೀರ್ವಾದವನ್ನು ಮಾಡಿದರೆ ಗುರುವಿನ ಅಶುಭ ಪ್ರಭಾವವೂ ದೂರವಾಗುತ್ತದೆ.
ಆದ್ದರಿಂದ ಮನೆಗೆ ಬರುವ ಭಿಕ್ಷುಕರು, ರೋಗಿಗಳು ,ಮಂಗಳಮುಖಿಯರನ್ನು, ಅವಶ್ಯಕವಾಗಿ ಏನಾದರೂ ಒಂದು ವಸ್ತುವನ್ನಾಗಲಿ ಅಥವಾ ಹಣವನ್ನಾಗಲಿ ಕೊಟ್ಟು ಕಳುಹಿಸಿ ಎಂದಿಗೂ ಸಹ ಬರಿಗೈಯಲ್ಲಿ ಕಳಿಸಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top