ಸಮಾಚಾರ

ಪವರ್ ಮಿನಿಸ್ಟರ್’ಗೆ ಎದುರಾಯ್ತು ಬಂಧನದ ಭೀತಿ: ಡಿಕೆಶಿ ವಿರುದ್ಧ FIR ದಾಖಲು.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪವರ್ ಮಿನಿಸ್ಟರ್’ಗೆ ಎದುರಾಯ್ತು ಬಂಧನದ ಭೀತಿ: ಡಿಕೆಶಿ ವಿರುದ್ಧ FIR ದಾಖಲು.

 

 

ರಾಜ್ಯದ ಪವರ್ ಅಂಡ್ ಪವರ್ ಪುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ. ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡಿಸೋ ಉತ್ಸಾಹದಲ್ಲಿದ್ದ ಡಿಕೆ ಶಿವಕುಮಾರ್ ಮೇಲೆ FIR ದಾಖಲಾಗಿರುವುದರಿಂದ ಅವರಿಗೆ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಡಿಕೆಶಿ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ದಾಖಲೆಗಳನ್ನ ಹರಿದುಹಾಕಿದ ಆರೋಪದ ಮೇಲೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಮಾರ್ಚ್ 22ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಕೋರ್ಟ್‌ಗೆ ಹಾಜರಾಗದಿದ್ದರೆ ಡಿಕೆಶಿಯನ್ನು ಬಂಧನ ಮಾಡುವ ಸಾಧ್ಯತೆಯಿದೆ. ನ್ಯಾಯಾಧೀಶರೇ FIR ದಾಖಲಿಸಲು ಅನುಮತಿ ನೀಡಿರುವುದರಿಂದ ಸಚಿವರಿಗೆ ಇದೀಗ ಸಂಕಷ್ಟ ಎದುರಾಗಿದೆ

 

 

ಐಟಿ ದಾಳಿ ವೇಳೆ ಡಿಕೆಶಿ​ ಜೇಬಿನಲ್ಲಿ ಕೆಲವು ಸಣ್ಣ ಸಣ್ಣ ಕಾಗದದ ಚೂರು ಪತ್ತೆಯಾಗಿತ್ತು., ಆ ಕಾಗದದ ಚೂರುಗಳೆಲ್ಲವನ್ನೂ ಸಂಗ್ರಹಿಸಿದ್ದ ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿದರು. ಡಿಕೆಶಿ ಜೊತೆಗೆ ಸಾಕಷ್ಟು ಕಂಪನಿಗಳು ಹಾಗೂ ವ್ಯಕ್ತಿಗಳ ಹಣಕಾಸು ವ್ಯವಹಾರ ಇರೋದು ಈ ಹರಿದ ಚೀಟಿಗಳಿಂದ ಕಂಡು ಬಂದಿತ್ತು ಎಂದು ಹೇಳಲಾಗುತ್ತಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top