ಮನೋರಂಜನೆ

ಹುಡುಕಿದರೂ ಸಿಗುತ್ತಿಲ್ಲ ಗೂಗಲ್ ಕಥೆಯ ಜಾಡು!

ಕವಿರತ್ನ ಡಾ. ವಿ. ನಾಗೇಂದ್ರಪ್ರಸಾದ್ ನಿರ್ದೇಶಿಸಿ ನಟಿಸಿರುವ ಗೂಗಲ್ ಚಿತ್ರ ತೆರೆ ಕಾಣಲು ಕ್ಷಣಗಣನೆ ಶುರುವಾಗಿದೆ. ನಾಗೇಂದ್ರ ಪ್ರಸಾದ್ ಅವರದ್ದು ಬಹುಮುಖ ಪ್ರತಿಭೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾಕೆಂದರೆ ಗೀತರಚನೆಕಾರರಾಗಿ ಗುರುತಿಸಿಕೊಂಡಿರೋ ಅವರು ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಅವರು ನಾನಾ ವಿಭಾಗಗಳನ್ನು ತಾವೊಬ್ಬರೇ ನಿರ್ವಹಿಸಿ ಬಹುಪಾತ್ರಾಭಿನಯ ಮಾಡಿರೋ ಕಾರಣದಿಂದಲೂ ಗೂಗಲ್ ಚಿತ್ರದೆಡೆಗೊಂದು ತೀವ್ರ ಕುತೂಹಲ ಹುಟ್ಟಿಕೊಂಡಿದೆ!

 

 

ಗೂಗಲ್ ಚಿತ್ರಕ್ಕೆ ನಿರ್ದೇಶನ ಮಾಡಿರೋ ನಾಗೇಂದ್ರ ಪ್ರಸಾದ್ ತಾವೇ ನಾಯಕನಾಗಿ ನಟಿಸಿ ತಮ್ಮದೇ ಉತ್ಸವ್ ಪ್ರಡಕ್ಷನ್ ಸಂಸ್ಥೆಯ ಮೂಲಕ ನಿರ್ಮಾಣವನ್ನೂ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಹುಟ್ಟುಹಾಕಿದ್ದ ಮ್ಯೂಸಿಕ್ ಬಜಾರ್ ಎಂಬ ಆಡಿಯೋ ಕಂಪೆನಿ ಮೂಲಕವೇ ಈ ಚಿತ್ರದ ಹಾಡುಗಳೂ ಬಿಡುಗಡೆಯಾಗಿವೆ. ಈ ಹಾಡುಗಳು ಹುಟ್ಟುಹಾಕಿರೋ ಕ್ರೇಜ್‌ನಲ್ಲಿಯೇ ಗೂಗಲ್ ಗೆಲುವು ಪ್ರತಿಫಲಿಸಿದಂತೆ ಭಾಸವಾಗುತ್ತಿದೆ.

 

 

ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಮಡದಿ ವಾಣಿ ಹರಿಕೃಷ್ಣ ಅವರು ಹಾಡಿರೋ ಹಾಡೂ ಕೂಡಾ ಈ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬಲು ಜನಪ್ರಿಯತೆ ಗಳಿಸಿತ್ತು. `ತುಂಬಾ ತುಂಬ’ ಎಂಬ ಹಾಡಂತೂ ವೈರಲ್ ಆಗಿದೆ. ಸ್ವತಃ ಗೀತಸಾಹಿತಿಯಾಗಿರೋ ನಾಗೇಂದ್ರ ಪ್ರಸಾದ್ ಅತ್ಯಂತ ಶ್ರದ್ಧೆಯಿಂದ, ಪ್ರೀತಿಯಿಂದ ಬರೆದಿರೋ ಸಾಲುಗಳು ಎಲ್ಲರೂ ಗುನುಗುನಿಸುವಂತಿವೆ.

 

 

ಇನ್ನುಳಿದಂತೆ ಈಗ ಪ್ರೇಕ್ಷಕರ ನಡುವೆ ಭಾರೀ ಚರ್ಚೆಯಲ್ಲಿರೋ ಏಕೈಕ ವಿಚಾರವೆಂದರೆ ಗೂಗಲ್ ಚಿತ್ರದ ಕಥಾ ಹಂದರ ಏನೆಂಬುದು. ಆದರೆ ಈ ವಿಚಾರದಲ್ಲಿ ನಾಗೇಂದ್ರಪ್ರಸಾದ್ ಈ ವರೆಗೂ ಸಣ್ಣದೊಂದು ಕಥಾ ಎಳೆಯನ್ನೂ ಬಿಟ್ಟುಕೊಡದೇ ಸಾಗಿ ಬಂದಿದ್ದಾರೆ. ಗೂಗಲ್ ಅಂದರೆ ವಿವಿಧ ವಿಚಾರಗಳ ಹುಡುಕಾಟಕ್ಕೆ ಫೇಮಸ್ಸು. ಈ ನಿಟ್ಟಿನಲ್ಲಿ ನೋಡ ಹೋದರೆ ಗೂಗಲ್ ಚಿತ್ರವೂ ಏನೋ ಹುಡುಕಾಟದ್ದೊಂದು ಕಥೆ ಹೊಂದಿದೆ ಎಂಬುದು ಪಕ್ಕಾ. ಆದರೆ ಆ ಹುಡುಕಾಟ ಯಾವುದರ ಬಗೆಗಿನದ್ದೆಂಬುದು ಮಾತ್ರ ಚಿತ್ರಮಂದಿರದಲ್ಲೇ ತಣಿಯಬಹುದಾದ ವಿಚಾರ!

ಒಟ್ಟಾರೆಯಾಗಿ ಗೂಗಲ್ ಚಿತ್ರದ ಕಥೆ ಪ್ರತಿಯೊಬ್ಬರ ಬದುಕಿಗೂ ಒಂದಲ್ಲ ಒಂದು ಕಾರಣಕ್ಕಾಗಿ ನೇರಾ ನೇರ ಕನೆಕ್ಟಾಗುವಂಥಾ ಅದ್ಭುತ ಕಥೆ ಹೊಂದಿದೆ ಎಂಬ ಮಾತು ಮಾತ್ರ ನಿಖರವಾಗಿಯೇ ಎಲ್ಲೆಡೆ ಹರಿದಾಡುತ್ತಿದೆ. ಅಂತೂ ಗೂಗಲ್ ಕಮಾಲ್ ಎಂಥಾದ್ದೆಂಬುದನ್ನು ತಿಳಿಯಲು ಕೆಲವೇ ಘಂಟೆಗಳು ಮಾತ್ರ ಬಾಕಿ ಉಳಿದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top