ಅರೋಗ್ಯ

ಅಶೋಕ ವೃಕ್ಷದ ಹೂಗಳ ಸೊಬಗಿಗೆ ಸಾಟಿಯಿಲ್ಲ ! ಇದರ ಔಷಧ ಸೇವನೆ ಮಾಡಿದ ಸ್ತ್ರೀಯರು ಆರೋಗ್ಯದಿಂದ, ಶೋಕರಹಿತರಾಗುವರು.

ಅಶೋಕ ವೃಕ್ಷದ ಹೂಗಳ ಸೊಬಗಿಗೆ ಸಾಟಿಯಿಲ್ಲ ! ಇದರ ಔಷಧ ಸೇವನೆ ಮಾಡಿದ ಸ್ತ್ರೀಯರು ಆರೋಗ್ಯದಿಂದ, ಶೋಕರಹಿತರಾಗುವರು.

ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳು ಒಣಗಿಸಿ, ತೊಗಟೆಯನ್ನು ಪುಡಿಮಾಡಿ, ಬಳಸುತ್ತಾರೆ. ‘ಅಶೋಕಾರಿಷ್ಟ’, ‘ಅಶೋಕಘೃತ’ ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ಬಂಗಾಲ ಹೆಣ್ಣುಮಕ್ಕಳು, ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರಂತೆ. ತೊಗಟೆಯಲ್ಲಿ “ಟ್ಯಾನಿನ್,” ಅಂಶವಿದೆ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚುವರಿ ಬರುವುದಂತೆ. ನಾವು ಈಗ ಅಲಂಕಾರಿಕವಾಗಿ ಬೆಳೆಸುವ ಎತ್ತರದ ಅಶೋಕ ಎಂದು ಹೆಸರಿಸುವ ಮರದಲ್ಲಿ ಒಂದು ಹೂ ಕಾಣಿಸುವುದಿಲ್ಲ. ಇದು ಅಶೋಕದ ಒಂದು ಜಾತಿ ಅಷ್ಟೆ.

Related image

*ಹೂಗಳು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗವಾಗುತ್ತವೆ. ಆದರೂ ಔಷಧವಾಗಿ ಹೆಚ್ಚು ಬಳಕೆಯಲ್ಲಿದೆ. ಇದರ ಹೂಗಳನ್ನು ಒಣಗಿಸಿ ಹುಡಿ ಮಾಡಿ ದಿನನಿತ್ಯ ಹಾಲಿನೊಂದಿಗೆ ಸೇವಿಸುತ್ತ ಬಂದಲ್ಲಿ ಸ್ತ್ರೀಯರ ಮಾಸಿಕ ಋತು ಸ್ರಾವದ ಏರುಪೇರುಗಳು ಮಾಯವಾಗುವುವು. ಉದರಶೂಲೆ, ತಲೆನೋವು ಕೂಡಾ ಮಾಯ.

Related image

*ಚೆನ್ನಾಗಿ ಬಲಿತ ಕಾಂಡದ ತೊಗಟೆಯನ್ನು ಆಯುರ್ವೇದ ಪದ್ಧತಿಯಲ್ಲಿ ಕಷಾಯ ತಯಾರಿಸುವ ಕ್ರಮವೂ ಇದೆ. ಅತಿಸಾರ, ಆಂತರಿಕ ಗೆಡ್ಡೆಗಳು, ಹುಣ್ಣುಗಳು, ಮೂತ್ರನಾಳ ಸಂಬಂಧೀ ಖಾಯಿಲೆಗಳು, ಸಿಫಿಲಿಸ್ , ಲೈಂಗಿಕ ರೋಗಗಳಿಗೆ ಇದು ರಾಮಬಾಣವಾಗಿದೆ.

Related image

*2 ತೊಲದಷ್ಟು ಇದರ ತೊಗಟೆಯನ್ನು 1 ಕುಡ್ತೆ ನೀರು, 1 ಕುಡ್ತೆ ಹಾಲು ಸೇರಿಸಿ ಕುದಿಸಿ ತಯಾರಿಸಿದ ಕಷಾಯ ದೇಹ ಯಥಾಸ್ಥಿತಿಗೆ ಮರಳಲು ಸಹಾಯಕ. ಜೀರಿಗೆ ಸೇರಿಸಿ ಇದರ ಎಲೆಗಳಿಂದ ಕಷಾಯ ತಯಾರಿಸಿದರೂ ರಕ್ತ ಶುದ್ಧೀಕರಣ ಆಗುತ್ತದೆ. ಅಶೋಕಾರಿಷ್ಟದ ನಿಯಮಿತ ಸೇವನೆಯನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ. ಅದರ ತಯಾರಿಯೂ ಇದೇ ಅಶೋಕ ವೃಕ್ಷದಿಂದ.

Image result for ರಕ್ತ ಶುದ್ಧೀಕರಣ

*ಮುಟ್ಟಿನಲ್ಲಿ ಅಧಿಕ ರಕ್ತಸ್ರಾವದ ತೊಂದರೆಯುಳ್ಳವರು ಹೂವುಗಳನ್ನು ಕಷಾಯ ಅಥವಾ ಪುಡಿ ರೂಪದಲ್ಲಿ ಹಾಲು, ನೀರು ಮತ್ತು ಜೇನಿನೊಂದಿಗೆ ಸೇವಿಸಬಹುದು. ಅಶೋಕಾರಿಷ್ಟ, ಅಶೋಕವಟಿ ಮುಂತಾದ ಔಷಧಗಳು ಔಷಧದ ಅಂಗಡಿಗಳಲ್ಲಿ ದೊರೆಯುತ್ತವೆಯಾದರೂ ನಾವೇ ತಯಾರಿಸಿಕೊಳ್ಳುವ  ಇದರ ಮನೆಮದ್ದು ಉತ್ತಮ.

Image result for ashoka  flower  tea

*ಈ ಗಿಡ ಜೀವನದ ಪ್ರತಿಯೊಂದು ದುಃಖವನ್ನೂ ದೂರ ಮಾಡುತ್ತದೆ. ಪ್ರತಿದಿನ ಅಶೋಕ ಮರಕ್ಕೆ ನೀರು ಹಾಕುವುದ್ರಿಂದ ದೇವರ ಕೃಪೆ ಪ್ರಾಪ್ತವಾಗುತ್ತದೆ.

Image result for ashoka tree juice

*ಸ್ತ್ರೀಯರ ಋತುಚಕ್ರ ಸರಿಯಿದ್ದು, ನಿರ್ಮಲ ಮನಸ್ಸಿನಿಂದ ಭಗವಂತನನ್ನು ನೆನೆಯುತ್ತಾ, ಆಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ, ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯುಂಟು.

Related image

*ಅಶೋಕ ಎಂದರೆ ಶೋಕವಿಲ್ಲದ್ದು ಎಂದರ್ಥ ! ವಸಂತ ಮಾಸದಲ್ಲಿ ಅರಳುವ ಈ ವೃಕ್ಷದ ಹೂಗಳ ಸೊಬಗಿಗೆ ಸಾಟಿಯಿಲ್ಲ ! ಇದರ ಔಷಧ ಸೇವನೆ ಮಾಡಿದ ಸ್ತ್ರೀಯರು ಆರೋಗ್ಯದಿಂದ, ಶೋಕರಹಿತರಾಗುವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top