ಮನೋರಂಜನೆ

ಪ್ರೇಮಿಗಳ ದಿನಕ್ಕೆ ಕಿಚ್ಚನಿಗೆ ಸಿಕ್ಕಿದ ವಿಶೇಷವಾದ ಗಿಫ್ಟ್ ಏನು ಗೊತ್ತಾ?

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪ್ರೇಮಿಗಳ ದಿನಕ್ಕೆ ಕಿಚ್ಚನಿಗೆ ಸಿಕ್ಕಿದ ಗಿಫ್ಟ್ ಏನು ಗೊತ್ತಾ?

 

 

ನೆನ್ನೆ (ಫೆಬ್ರವರಿ 14) ಪ್ರೇಮಿಗಳ ದಿನ, ಪ್ರತಿ ಪ್ರೇಮಿಗಳು, ದಂಪತಿಗಳು ಸೇರಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಇದು ಪಾಶ್ಚಾತ್ಯ ದೇಶದ ಆಚರಣೆಯಾದರೂ ಈಗ ಪ್ರೇಮಿಗಳ ದಿನಾಚರಣೆಯನ್ನು ವಿಶ್ವಾದ್ಯಂತ ಪ್ರತಿಯೊಬ್ಬ ಜನಾಂಗದವರೂ ಮಾಡುವಂತಹ ಆಚರಣೆಯಾಗಿ ಪರಿಣಮಿಸಿದೆ. ತಮ್ಮ ಸಂಗಾತಿಗೆ ಅಂದು ಸರ್ಪ್ರೈಸ್ ಗಿಫ್ಟ್ ಇರಬಹುದು, ಹೂವಿರಬಹುದು, ಚಾಕೋಲೇಟ್​ಗಳಿರಬಹುದು ಹೀಗೆ ತಮಗಿಷ್ಟವಾದ ಮನಸಿಗೆ ಹತ್ತಿರದ ಉಡುಗೊರೆಗಳನ್ನ ನೆಡುತ್ತಾರೆ. ಇಡೀ ರೀತಿ ಚಂದನವನದ ಸ್ಮಾರ್ಟ್ ಜೋಡಿ ಎಂದೆನಿಸಿಕೊಂಡಿರುವ ಪ್ರಿಯಾ ಮತ್ತು ಸುದೀಪ್ ಕೂಡ ವಿಶೇಷವಾಗಿ ಆಚರಿಸಿದ್ದಾರೆ.

 

 

ಸುದೀಪ್ ಅವರದ್ದು ಪ್ರೇಮವಿವಾಹ ಎಂಬ ವಿಚಾರ ಎಲ್ಲರಿಗೂ ಗೊತ್ತು, ನೆನ್ನೆ ಪ್ರೇಮಿಗಳ ದಿನದ ಅಂಗವಾಗಿ ಪ್ರಿಯಾ ಅವರು ಎರಡು ಜೋಡಿ ವಿಶೇಷ ಕಾಫಿ ಕಪ್’ಗಳನ್ನೂ ತಮ್ಮ ಪತಿ ಸುದೀಪ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಹೇಳಿ ಕೇಳಿ ಸುದೀಪ್ ಕಾಫಿ ಪ್ರಿಯಾ ಹಾಗಾಗಿ ಮನಸಿಗೆ ಹತ್ತಿರವಾಗುವಂತೆ ಕಾಫಿ ಕಪ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಶೇಷವೆಂದರೆ ಈ ಕಪ್ ಗಳ ಮೇಲೆ ವಿಶೇಷವಾದ ಸಾಲುಗಳನ್ನು ಬರೆಸಲಾಗಿದ್ದು ಆಕರ್ಷಕವಾಗಿ ಕಾಣುವಂತಿವೆ.

ಎರಡು ಕಪ್ ಮೇಲೆ ಸುದೀಪ್ ಮತ್ತು ಪ್ರಿಯಾ ಎಂದು ಹೆಸರು ಬರೆಯಲಾಗಿದ್ದು ಮತ್ತೆರಡರಲ್ಲಿ ‘ಕ್ವೀನ್ ಆಫ್ ಎವರಿಥಿಂಗ್’ ಮತ್ತು ‘ಕಿಂಗ್ ಆಫ್ ವಾಟ್ ಎವರ್ ಲೆಫ್ಟ್’ ಎಂದು ಬರೆಯಲಾಗಿದೆ. ಪ್ರಿಯಸುದೀಪ್ ಅವರು ತಮ್ಮ ಟ್ವಿಟರ್ ಅಕೌಂಟ್’ನಲ್ಲಿ ಸುದೀಪ್’ಗೆ ಪ್ರೇಮಿಗಳ ದಿನದ ಶುಭಕೋರಿ ಈ ಕಾಫಿ ಕಪ್ ಫೋಟೋಗಳನ್ನ ಪೋಸ್ಟ್ ಮಾಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top