ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಫ್ ಚೇಂಜ್ ಮಾಡಿದ್ದ ಮೆಜೆಸ್ಟಿಕ್ ಗೆ 16 ನೇ ವರ್ಷದ ಹುಟ್ಟುಹಬ್ಬ

ಫೆಬ್ರವರಿ 8 2002 ರಂದು ದರ್ಶನ್ ಗಷ್ಟೇ ಅಲ್ಲ ಮುಂತಾದ ಅನೇಕ ಕಲಾವಿದರಿಗೆ ಜೀವನ ಕೊಟ್ಟ ಚಿತ್ರವಾಗಿ ಮೆಜೆಸ್ಟಿಕ್ ಬಿಡುಗಡೆಯಾಗಿತ್ತು

ಮೆಜೆಸ್ಟಿಕ್ ಬಿಡುಗಡೆಯಾಗಿ ಸತತ ಹದಿನಾರು ವರ್ಷಗಳು ಕಳೆದಿವೆ ಅಂಡರ್ ವರ್ಲ್ಡ್ ಕಥಾ ಹಂದರವನ್ನು ಹೊಂದಿದ್ದ ಅನೇಕರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿತ್ತು ಮೆಜೆಸ್ಟಿಕ್ ಈ ಚಿತ್ರದ ಹದಿನಾರನೇ ವರ್ಷದ ಸವಿನೆನಪಿಗಾಗಿ ನಿರ್ಮಾಪಕ ಎಂಜಿ ರಾಮಮೂರ್ತಿ ಖಾಸಗಿ ಕಾರ್ಯಕ್ರಮವೊಂದನ್ನು ನೆಲಮಂಗಲದ ರೆಸಾರ್ಟ್ವೊಂದರಲ್ಲಿ ಆಯೋಜನೆ ಮಾಡಿದ್ದರು.

 

 

ಮೆಜೆಸ್ಟಿಕ್ ಚಿತ್ರದ ಏಳಿಗೆಗಾಗಿ ದುಡಿದ ಕಲಾವಿದರು ತಂತ್ರಜ್ಞರನ್ನು ಈ ಸಮಯದಲ್ಲಿ ಗೌರವಿಸಲಾಯಿತು ,ಕಲಾವಿದರು ಹಾಗೂ ತಂತ್ರಜ್ಞರಿಗೆ ಹಾರ ಹಾಕಿ ಶಾಲು ವನ್ನು ಹಾಕಿ ಸನ್ಮಾನ ಮಾಡಿ ಹಣ್ಣಿನ ಬುಟ್ಟಿಯನ್ನು ಹಾಗೂ ನೆನಪಿನ ಫಲಕಗಳನ್ನು ನೀಡಲಾಯಿತು

 

ಮೆಜೆಸ್ಟಿಕ್ ಚಿತ್ರದ ನಿರ್ದೇಶಕರಾದ ಪಿ ಎನ್ ಸತ್ಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಮಾದೇಶ್ ಸುರೇಶ್ ಗೋಸ್ವಾಮಿ

 

 

 

 

ಛಾಯಾಗ್ರಹಣ ಮಾಡಿದ್ದ ಅಣಜಿ ನಾಗರಾಜ್ ಹಾಗೂ ಸೀನು , ಸ್ಟಿಲ್ ಫೋಟೋಗ್ರಾಫರ್ ಆಗಿದ್ದ ರಮೇಶ್ , ಮ್ಯಾನೇಜರ್ ರಾಮು ,ಸಹ ಕಲಾವಿದರಾದ ಹರೀಶ್ ರಾಯ್ ಜೈಜಗದೀಶ್ ನಿರ್ಮಾಪಕರಾದ ಭೋಜರಾಜ ರೈ ಹಾಗೂ ಇನ್ನೂರಕ್ಕಿಂತಲೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ಗೌರವಿಸಲಾಯಿತು.

 

 

ಇತ್ತೀಚೆಗಷ್ಟೇ ಕೋಟಿ ಕೋಟಿ ದುಡ್ಡನ್ನು ಖರ್ಚು ಮಾಡಿ ಲಂಬೋರ್ಗಿನಿ ಕಾರನ್ನು ಕೊಂಡುಕೊಂಡರು ದರ್ಶನ್ ಹಾಗಿದ್ದರೂ ಮಾರುತಿ 800 ಮೇಲಿನ ಅವರ ಪ್ರೀತಿ ಕಡಿಮೆಯಾಗಿಲ್ಲ

ದರ್ಶನ್ ಅವರ ಬಳಿ ದುಬಾರಿ ಬೆಲೆಯ ಕಾರುಗಳು ಬೈಕ್ಗಳು ಹಾಗೆ ಸಾಕುಪ್ರಾಣಿಗಳ ದೊಡ್ಡ ದೊಡ್ಡ ಹಿಂಡೇ ಇದೆ ಹೀಗಿರುವಾಗ ದಾಸನಿಗೆ ಮಾರುತಿ ೮೦೦ ಕಾರಿನ ಮೇಲೇಕೆ ಮೋಹ

ಅಂದು ನಿರ್ಮಾಪಕ ಎಂಜಿ ರಾಮಮೂರ್ತಿಯವರು ಈ ಕಾರಿನ ಮಾಲೀಕರಾಗಿದ್ದರು ಆಗ ಇನ್ನೂ ನಾಯಕನಾಗಿ ಗುರುತಿಸಿಕೊಳ್ಳಬೇಕಿದೆ ದರ್ಶನ್ ಆ ಮಾರುತಿ 800 ಕಾರನ್ನು ಇಷ್ಟಪಟ್ಟಿದ್ದರೂ.

 

 

ಈ ಹಿಂದೆ ದರ್ಶನ್ ಅವರ ಜೊತೆ ಮೆಜೆಸ್ಟಿಕ್ ಹಾಗೂ ಧರ್ಮ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಎಂಜಿ ರಾಮಮೂರ್ತಿ ಅವರು ಈ ಕಾರನ್ನು ಮೆಜೆಸ್ಟಿಕ್ ಹದಿನಾರು ನೇ ವರ್ಷದ ಸವಿನೆನಪಿಗಾಗಿ ದರ್ಶನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top