ಮನೋರಂಜನೆ

ತನ್ನ ವ್ಯಾಲಂಟೈನ್ ಯಾರು ಎಂಬುದನ್ನು ಹೇಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್!

ತನ್ನ ವ್ಯಾಲಂಟೈನ್ ಯಾರು ಎಂಬುದನ್ನು ಹೇಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್!

ಮುಂಬೈ : ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡ ಭಾರತದ ಬೆಡಗಿ ಮಾನುಷಿ ಚಿಲ್ಲರ್ ತನ್ನ ವ್ಯಾಲಂಟೈನ್ ಯಾರು ಎಂದು ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ವ್ಯಾಲಂಟೈನ್ ತನ್ನ ತಾಯಿ ಎಂದು ಹೇಳಿದ್ದಾರೆ.

ತನ್ನ ಮೊದಲ ವ್ಯಾಲಂಟೈನ್ ನನ್ನ ತಾಯಿ ಎಂದು ತಮ್ಮ ತಾಯಿ ಜೊತೆಯಲ್ಲಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಮಾನುಷಿ ತಮ್ಮ ತಾಯಿಯ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, ‘Happy Valentine’s Day to my constant’. ಪ್ರತಿ ವರ್ಷ ವ್ಯಾಲಂಟೈನ್ ಗೆ ನಾನು ಹಾಗೂ ನನ್ನ ತಾಯಿ ಒಬ್ಬರಿಗೊಬ್ಬರು ವಿಶ್ ಮಾಡುತ್ತೇವೆ. ಫೆ.14 ರಂದು ನನಗೆ ಚಾಕಲೇಟ್ಸ್ ಹಾಗೂ ಗುಲಾಬಿ ಹೂಗಳು ಸಿಕ್ಕುತ್ತಿರುವುದು ನನಗೆ ನೆನಪಿದೆ. ನಾನು ಮನೆಗೆ ಬಂದ ತಕ್ಷಣ ಅದನ್ನು ನನ್ನ ತಾಯಿಗೆ ಕೊಟ್ಟು ನೀನು ನನ್ನ ಮೊದಲ ವ್ಯಾಲಂಟೈನ್ ಎಂದು ಹೇಳುತ್ತಿದ್ದೆ. ಅತ್ಯಂತ ಸುಂದರ ಹಾಗೂ ಸಹಾನುಭೂತಿ ಮಹಿಳೆ ಆಗಿ ನೀನು ಇರುವುದಕ್ಕೆ ನನ್ನ ಧನ್ಯವಾದಗಳು ಎಂದು ಬರೆದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ಈ ಬಗ್ಗೆ ಇಸ್ಟಾಗ್ರಾಮಲ್ಲಿ ಹ್ಯಾಪಿ ವ್ಯಾಲಂಟೈನ್ಸ್ ಡೇ ಎಂದು ತಾಯಿ ಫೊಟೊ ಹಾಕಿ ಬರೆದುಕೊಂಡಿದ್ದಾರೆ.

2000ರಲ್ಲಿ ಪ್ರಿಯಾಂಕ ಚೋಪ್ರಾ ಬಳಿಕ ಕಳೆದ ವರ್ಷ ಮಾನುಷಿ ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಿದ್ದರು. 17 ವರ್ಷಗಳ ಬಳಿಕ ಭಾರತದ ಮುಡಿಗೆ ಈ ಪ್ರಶಸ್ತಿ ಗರಿ ದೊರಕಿತ್ತು.

 

Happy Valentine’s Day to my constant ❤️ Me and ma make sure that we are the first ones to wish each other every year! I remember getting roses and chocolates on February 14th and I would come home and give it to her telling her that she is my first love ❤️ Thank you ma for being the most beautiful, kind and compassionate woman that you are!

Feb 14, 2018 at 5:12am PST

ನವೆಂಬರ್ 18, 2018ರಲ್ಲಿ ವಿಶ್ವಸುಂದರಿ ಸ್ಪರ್ಧೆ ಗೆದ್ದು ಮಾನುಷಿ ಭಾರತದ 6ನೇ ವಿಶ್ವಸುಂದರಿ ಆಗಿದ್ದಾರೆ. ಅಷ್ಟೇ ಅಲ್ಲದೇ ಏಸ್ ಫೋಟೋಗ್ರಾಫರ್ ಆದ ಡಾಬೋ ರತ್ನಾನಿ ನಡೆಸಿದ 2018ರ ಕ್ಯಾಲೆಂಡರ್ ಫೋಟೋಶೂಟ್‍ನಲ್ಲಿ ಮಾನುಷಿ ಕೂಡ ಪಾಲ್ಗೊಂಡಿದ್ದರು. ಆ ಫೋಟೋಶೂಟ್‍ನಲ್ಲಿ ನಟ ಅಮಿತಾಬ್ ಬಚ್ಚನ್, ಶಾರೂಕ್ ಖಾನ್, ಐಶರ್ಯ ರೈ ಬಚ್ಚನ್, ಅಲಿಯಾ ಭಟ್, ಶ್ರದ್ಧ ಕಪೂರ್, ಫರಾನ್ ಅಖ್ತರ್ ಹಾಗೂ ಅರ್ಜುನ್ ರಾಮ್‍ಪಾಲ್ ಕೂಡ ಫೋಟೋಶೂಟ್ ಮಾಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top