ಮನೋರಂಜನೆ

ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ರು ನಿರ್ಮಾಪಕ ಮುನಿರತ್ನ.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಂದನ್ ಶೆಟ್ಟಿಗೆ ಬಂಪರ್ ಆಫರ್ ಕೊಟ್ರು ನಿರ್ಮಾಪಕ ಮುನಿರತ್ನ.

 

 

ಬಿಗ್‌ಬಾಸ್ ಮನೆಯೊಳಗೆ ಸಾದಾ ಸೀದಾ ವ್ಯಕ್ತಿತ್ವದಿಂದಲೇ ಪ್ರೇಕ್ಷಕರ ಮನಗೆದ್ದು ವಿನ್ನರ್ ಆಗಿಯೂ ಹೊರ ಹೊಮ್ಮಿದ್ದವನು ಚಂದನ್ ಶೆಟ್ಟಿ. .ಬಿಗ್ ಬಾಸ್ ಶೋ ವಿನ್ ಆದ ನಂತರ ರ್ಯಾಪರ್ ಚಂದನ್ ಶೆಟ್ಟಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಸಿನಿಮಾ, ಇವೆಂಟ್, ಟಿವಿ ಷೋ ಸೇರಿದಂತೆ ಸಿಕ್ಕಲ್ಲೆಲ್ಲ ಅವಕಾಶಗಳ ಸುರಿಮಳೆಯಾಗುತ್ತಿದೆ. ಇದೀಗ ಚಂದನ್’ಶೆಟ್ಟಿಗೆ ನಿರ್ಮಾಪಕ ದೊಡ್ಡ ಆಫರ್ ವೊಂದನ್ನ ನೀಡಿದ್ದಾರೆ.

 

 

ಕುರುಕ್ಷೇತ್ರ ಚಿತ್ರದ ನಂತರ ಮುನಿರತ್ನ ನಿರ್ಮಾಣ ಮುಂದಿನ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವಂತೆ ಚಂದನ್ ಶೆಟ್ಟಿಗೆ ಒಂದು ಅವಕಾಶ ನೀಡಿದ್ದಾರೆ. ಇತ್ತೀಚಿಗೆ ಶಿವರಾತ್ರಿಯ ಪ್ರಯುಕ್ತ ನಿರ್ಮಾಪಕ ಮುನಿರತ್ನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಚಂದನ್ ಕೂಡ ಭಾಗಿಯಾಗಿದ್ದರು.. ಈ ವೇಳೆ ವೇದಿಕೆಯ ಮೇಲೆ ಮೈಕ್ ಹಿಡಿದು ಚಂದನ್ ಗುಣಗಾನ ಮಾಡಿದ ಮುನಿರತ್ನ ಚಂದನ್’ಗೆ ತಮ್ಮ ನಿರ್ಮಾಣದಲ್ಲಿ ಮುಂಬರುವ ಒಂದು ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಅವಕಾಶ ನೀಡುವುದಾಗಿ ಹೇಳಿದು. ಇದಕ್ಕೆ ಚಂದನ್ ಕೂಡ ಖುಷಿಯಿಂದ ಈ ಆಫರ್’ಅನ್ನು ಒಪ್ಪಿಕೊಂಡಿದ್ದಾರೆ.

ಸದ್ಯ ಚಂದನ್ ಶೆಟ್ಟಿ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಮೂಡಿಬರುತ್ತಿರುವ ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಷೋನಲ್ಲಿ ಜಡ್ಜ್ ಆಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಮುಂದಿನ ಆಲ್ಬಮ್ ಸಾಂಗ್’ಗಳ ಕೆಲಸಗಳನ್ನೂ ಶುರು ಹಚ್ಚುಕೊಂಡಿದ್ದಾರೆ. ಈ ಮಧ್ಯೆ ಚಂದನ್ ಗೆ ಕೆಲವು ಚಿತ್ರಗಳಲ್ಲಿ ನಟಿಸುವ ಆಫರ್ ಕೂಡ ಬಂದಿದೆಯಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top