ಸಿನಿಮಾ

ಎಲೆಕ್ಷನ್ ಟೈಮ್ ಹತ್ರ ಬಂತು ಅಂತ ಸಿಕ್ ಸಿಕ್ಕಿದ್ ಹಾಡ್ಗೆ ಲಿರಿಕ್ಸ್ ಚೇಂಜ್ ಮಾಡ್ಕೊಂಡು ಮೈಕಾಕೊಂಡು ಓಡಾಡೋರಿಗೆ ಆಡಿಯೋ ಕಂಪನಿ ಏನ್ ಮಾಡ್ತಾರೆ ಗೊತ್ತಾ ?

ಇನ್ನು ಮುಂದೆ ದುಡ್ಡು ಕೊಡದೆ ಯಾವುದೋ ಆಡಿಯೊ ಕಂಪೆನಿಯ ಹಾಡುಗಳು ಧ್ವನಿಸುರುಳಿಗಳು ಅಥವಾ ಮ್ಯೂಸಿಕ್ ಬಳಸುವಂತಿಲ್ಲ.

 

ಚುನಾವಣೆಗಳು ಹತ್ತಿರ ಬರುತ್ತಿದ್ದರೆ ಸಾಕು ಚುನಾವಣೆಗೆ ನಿಂತ ನಾಯಕರನ್ನು , ಪಕ್ಷಗಳನ್ನು ಹೊಗಳಿ ಹೊಗಳಿ ಹಾಡುಗಳು ಬರುತ್ತಲೇ ಇರುತ್ತವೆ ಇನ್ನು ಯಾವುದೋ ಸಿನಿಮಾದ ಹಾಡುಗಳಿಗೆ ಸಾಹಿತ್ಯವನ್ನು ಬದಲಿಸಿ ರಾಜಕೀಯ ಮುಖಂಡರನ್ನು ಪಕ್ಷಗಳನ್ನು ಹೊಗಳುವ ಸಾಹಿತ್ಯವನ್ನು ಸೇರಿಸಿ ಪ್ರಚಾರಕ್ಕೆಂದು ಬಳಸುತ್ತಾರೆ.

 

 

ಇನ್ನು ಹೊಸದಾಗಿ ಶುರುವಾದ ನಾಯಕರನ್ನು ಹೊಗಳುವ ಈ ಹಾಡುಗಳು ರಸ್ತೆಗಳಲ್ಲಿ ಆಟೋಗಳಲ್ಲಿ ರಿಕ್ಷಾಗಳಲ್ಲಿ ಅಥವಾ ಯಾವುದೋ ಸಮಾವೇಶಗಳಲ್ಲಿ ಕೇಳಿಬರುತ್ತವೆ ,ಇದಕ್ಕೆ ಕಡಿವಾಣ ಹಾಕಲು ಆಡಿಯೊ ಕಂಪನಿಗಳು ಮುಂದಾಗಿದ್ದು ಇನ್ನು ಮುಂದೆ ರಾಯಲ್ಟಿ ನೀಡದೆ ತಮ್ಮ ಆಡಿಯೋ ಸಂಸ್ಥೆಯ ಯಾವುದಾದರೂ ಹಾಡನ್ನು ಅಥವಾ ಮ್ಯೂಸಿಕ್ ರಾಜಕೀಯ ಪಕ್ಷಗಳು ಬಳಸಿಕೊಂಡರೆ ಅಂಥವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top