ಮನೋರಂಜನೆ

ಪವರ್ ಸ್ಟಾರ್ ಪುನೀತ್ ಅವರನ್ನು ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ಅವರನ್ನು ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ ಗೊತ್ತಾ?

 

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಭಾರತದಲ್ಲಿರುವ ಪೋಲೆಂಡ್ ದೇಶದ ರಾಯಭಾರಿ ಆಡಂ ಬುರಕೌಸ್ಕಿ ಎಂಬುವವರು ಭೇಟಿಮಾಡಿದ್ದಾರೆ. ಸ್ವತಃ ತಾವೇ ಪುನೀತ್ ನಿವಾಸಕ್ಕೆ ಹೋಗಿ, ಅಪ್ಪು ಜೊತೆ  ಸಂವಾದ ನಡೆಸಿರುವ ಆಡಂ ಬುರಕೌಸ್ಕಿ ತಮ್ಮ ದೇಶಕ್ಕೆ ಸಂಭಂದಿಸಿದ ವಿಷಯವೊಂದರ ಬಗ್ಗೆ ಪುನೀತ್ ಜೊತೆ ಮಾತುಕತೆ ನಡೆಸಿದ್ದಾರೆ! ಮುಂದೆ ಓದಿ.

ಮುಂಬರುವ ಪುನೀತ್ ಚಿತ್ರಗಳಲ್ಲಿ ವಿದೇಶಕ್ಕೆ ಹೋಗಿ ಶೂಟಿಂಗ್ ಮಾಡುವ ಸಂಧರ್ಭ ಬಂದರೆ ಪೋಲೆಂಡ್ ದೇಶಕ್ಕೆ ಹೋಗಿ ಚಿತ್ರಗಳ ಶೂಟಿಂಗ್ ಮಾಡುವಂತೆ ಆಡಂ ಬುರಕೌಸ್ಕಿ ಪುನೀತ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಆಡಂ ಬುರಕೌಸ್ಕಿ ಅವ್ರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಭೇಟಿ ವೇಳೆ ಆಡಂ ಬುರಕೌಸ್ಕಿ ಅವರಿಗೆ ತಮ್ಮ ತಂದೆ ಅವರ ಹೆಸರಿನಲ್ಲಿ ಪುನೀತ್ ರಾಜ್ ಕುಮಾರ್ ಬರೆದಿರುವ ಪುಸ್ತಕವನ್ನ ಉಡುಗೊರೆಯಾಗಿ ನೀಡಿದ್ದಾರೆ..

 


ಸದ್ಯ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ನಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜಕುಮಾರ್ ಷೋ ಮುಕ್ತಾಯವಾದ ಮೇಲೆ ಪವನ್ ಒಡೆಯರ್ ನಿರ್ದೇಶನದ ರಾಕ್ ಲೈನ್ ವೆಂಕಟ್ ನಿರ್ಮಾಣದ ಚಿತ್ರದಲ್ಲಿ ನಟಿಸಲಿದ್ದಾರೆ… ಮುಂದಿನ ದಿನಗಳಲ್ಲಿ ಬರುವ ಪುನೀತ್ ಚಿತ್ರಗಳಲ್ಲಿ ಪೋಲೆಂಡ್ ದೇಶದ ರಾಯಭಾರಿ ಆಡಂ ಬುರಕೌಸ್ಕಿ ಅವರ ಮನವಿಯ ಮೇರೆಗೆ ಪೋಲೆಂಡ್ ನಲ್ಲಿ ಶೂಟಿಂಗ್ ನಡೆಯುತ್ತವೆಯೇ ಎಂಬುದನ್ನು ಕಾದುನೋಡಬೇಕು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top