ಮನೋರಂಜನೆ

ರಾಜಕುಮಾರನ ಬೆಡಗಿ ಈಗ ಗಣೇಶ್’ಗೆ ನಾಯಕಿ.

ರಾಜಕುಮಾರನ ಬೆಡಗಿ ಈಗ ಗಣೇಶ್’ಗೆ ನಾಯಕಿ.

 

 

ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿದ್ದ ‘ರಾಜಕುಮಾರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊತಿದ್ದ ನಟಿ ಪ್ರಿಯಾ ಆನಂದ್ ಅವರ ಮುಂದಿನ ಕನ್ನಡ ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಪ್ರಿಯಾ ಅವರ ಮುಂದಿನ ಕನ್ನಡ ಚಿತ್ರ ಯಾವುದೆಂಬ ವಿಚಾರ ಬಯಲಾಗಿದ್ದು ಗಣೇಶ್ ಮುಖ್ಯಭೂಮಿಕೆಯಲ್ಲಿ ತಯಾರಾಗಲಿರುವ ‘ಆರೆಂಜ್’ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

 

 

ಅಂದಹಾಗೆ ಈ ಹಿಂದೆ ಝೂಮ್ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಪ್ರಶಾಂತ್ ರಾಜ್ ಎರಡನೇ ಸಲ ಈ ಚಿತ್ರದ ಮೂಲಕ ಗಣೇಶ್ ಜೊತೆಯಾಗಿದ್ದಾರೆ. ಬಣ್ಣವೊಂದರ ಹೆಸರಿನ ಶೀರ್ಷಿಕೆ ಇರುವ ಈ ಚಿತ್ರದ ಬಗ್ಗೆ ಕುತೂಹಲ ಮೂಡಿದ್ದು, ಪ್ರೀತಿಯ ಹೊಸ ಬಣ್ಣ ಕಿತ್ತಳೆ ಆಗಲಿದೆ ಎನ್ನುತ್ತಾರೆ ನಿರ್ದೇಶಕ. ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದ್ದು ಸದ್ಯದಲ್ಲೇ ಪ್ರಿಯಾ ಆನಂದ್ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ.

ಸದಾ ವಿಭಿನ್ನ ಹೇರ್‌ಸ್ಟೈಲ್‌ ಮೂಲಕ ಗಮನ ಸೆಳೆಯುವ ಗಣೇಶ್ ಈ ಚಿತ್ರಕ್ಕಾಗಿ ವಿಶೇಷ ಹೇರ್‌ಸ್ಟೈಲ್‌ ಮಾಡಿಸಿದ್ದು ಕಲರ್‌ಫ‌ುಲ್‌ ಗೆಟಪ್‌’ನಲ್ಲಿ ಗಣೇಶ್ ಭರ್ಜರಿಯಾಗಿ ಮಿಂಚಲಿದ್ದಾರೆ.ಜೋಶ್ವ ಶ್ರೀಧರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದು ತೋಷ್ ರೈ ಪಾತಾಜೆ ಆರೆಂಜ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಲಿದ್ದಾರೆ. ರವಿ ವರ್ಮ ಸಾಹಸ ನಿರ್ದೇಶನ ಮಾಡಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top