ಹೆಚ್ಚಿನ

ಭರ್ಜರಿ ಸೆಂಚುರಿ ಬಾರಿಸಿ ಮಾಧ್ಯಮಕ್ಕೆ ತಿರುಗೇಟು ನೀಡಿದ ರೋಹಿತ್ ಶರ್ಮ.

ಭರ್ಜರಿ ಸೆಂಚುರಿ ಬಾರಿಸಿ ಮಾಧ್ಯಮಕ್ಕೆ ತಿರುಗೇಟು ನೀಡಿದ ರೋಹಿತ್ ಶರ್ಮ.

ದಕ್ಷಿಣ ಆಫ್ರಿಕಾದ ಪೋರ್ಟ್‌ ಎಲಿಜಬೆತ್‌’ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಗೆಲುವು ಸಾದಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ. 73 ರನ್‌ಗಳ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 4-1ರ ಅಂತರದಲ್ಲಿ ವಶಪಡಿಸಿಕೊಂಡಿತ್ತು. ಸರಣಿಯನ್ನು ಗೆಲ್ಲುವ ಮೂಲಕ 25 ವರ್ಷಗಳ ಬಳಿಕ ಆಫ್ರಿಕಾ ನೆಲದಲ್ಲಿ ವಶಪಡಿಸಿಕೊಂಡ ಕೀರ್ತಿಗೆ ಪಾತ್ರವಾಗಿದೆ.

 

 

ಐದನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ರೋಹಿತ್ ಭಾರತದ ಗೆಲುವಿನಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು. ರೋಹಿತ್ ಮೊದಲ ನಾಲ್ಕು ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆದಾಗ ಕೆಲವು ಮಾಧ್ಯಮಗಳು ರೋಹಿತ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ವರದಿ ಮಾಡಿದ್ದವು ಇದಕ್ಕೆ ತಮ್ಮ ಬ್ಯಾಟ್ ಮುಖಾಂತರವೇ ಉತ್ತರ ನೀಡಿದ ರೋಹಿತ್ ಭರ್ಜರಿ ಶತಕ ಸಿಡಿಸಿದರು.

 

 

ಈ ಬಗ್ಗೆ ಮಾತನಾಡಿದ ರೋಹಿತ್, ಸರಣಿಯ ಆರಂಭದಲ್ಲಿ ಎಲ್ಲ ಆಟಗಾರರಿಗೆ ಒಳ್ಳೆಯ ಆರಂಭ ಲಭಿಸುವುದಿಲ್ಲ. ಕೇವಲ 2 -3 ಪಂದ್ಯದಲ್ಲಿ ಒಬ್ಬ ಆಟಗಾರನ ಸಾಮರ್ಥ್ಯವನ್ನು ನಿರ್ಧಾರ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಪಂದ್ಯದ ಸೆಂಚುರಿ ನನ್ನ ಮನೋಬಲ ವೃದ್ಧಿ ಮಾಡಿದೆ, ಶತಕ ಬಾರಿಸಿದ ಖುಷಿಯಲ್ಲಿ ನಾನು ಮೈ ಮರೆಯುದಿಲ್ಲ ಮುಂದಿನ ಪಂದ್ಯದ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದರು.

 

 

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಭಾರತವನ್ನು ಬ್ಯಾಟಿಂಗ್ ಗೆ ಕಳುಹಿಸಿತು ಇದರಿಂದಾಗಿ ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿಗದಿತ ಐವತ್ತು ಓವರ್ಗಳಲ್ಲಿ 274 ರನ್ ಗಳನ್ನು ಪೇರಿಸಿದ್ದು ಆಫ್ರಿಕಾಗೆ ಗೆಲ್ಲಲು 275 ರನ್ ಗುರಿ ನೀಡಿತ್ತು. 275 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡ ಕೇವಲ 201 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು ಸರ್ವಪತನ ಕಾಣುವ ಮೂಲಕ ಭಾರತಕ್ಕೆ ಶರಣಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top