ಜಾಗೃತಿ

ಇಂತಹ ಹುಡುಗ ಸಿಕ್ರೆ ಯಾವ್ ಹುಡುಗಿ ಬೇಕಾದ್ರು ಮದುವೆ ಆಗ್ತಾಳಂತೆ ಅನ್ನುತ್ತೆ ಸಮುದ್ರಿಕ ಶಾಸ್ತ್ರ!

ಸಾಮುದ್ರಿಕ ಶಾಸ್ತ್ರ ದ ಪ್ರಕಾರ ವ್ಯಕ್ತಿಯ ವ್ಯಕ್ತಿಯ ಮುಖ, ವ್ಯಕ್ತಿತ್ವ, ಮತ್ತು ಇಡೀ ದೇಹದ ಒಂದು ವೈದಿಕ ಅಧ್ಯಯನವಾಗಿದೆ
ಈ ಅಧ್ಯಯನಗಳ ಸೂಚನೆಗಳನ್ನು ಆಧರಿಸಿ, ಜೀವನದಲ್ಲಿ ಸಹಚರರನ್ನು ಆರಿಸುವ ಮೊದಲು ಈ

20 ಲಕ್ಷಣಗಳನ್ನ ನೋಡಿ ಆರಿಸಬೇಕು.

1 ಧೈರ್ಯ ಹೊಂದಿರಬೇಕು ಮತ್ತು ಸಹಿಷ್ಣುತೆ ಹೊಂದಿರಬೇಕು. ವ್ಯಕ್ತಿಯಲ್ಲಿ ಸಿಂಹದ ಚೈತನ್ಯವಿರಬೇಕು ದೊಡ್ಡ ಅಥವಾ ಸಣ್ಣ ಕೆಲಸ ಎಂದು ಅನ್ನದೆ ಎಲ್ಲವನ್ನುಮಾಡಬೇಕು.

೨. ಗಂಡು ಅವನ ಜೀವನದಲ್ಲಿ ಅತ್ಯಂತ ಜಾಗರೂಕನಾಗಿರಬೇಕು ಮುಖ್ಯವಾಗಿ ತಾನು ಪ್ರೀತಿಸುವ ವ್ಯಕ್ತಿಗಳ ಬಗ್ಗೆ ಹೆಚ್ಚು ಜಾಗರೂಕನಾಗಿರಬೇಕು. ಒಳ್ಳೆಯ ತಂತ್ರಗಾರನಾಗಿರದಿದ್ದರು ಸಹ ಎಲ್ಲ ವಿಷಯ ಬಗ್ಗೆ ಎಚ್ಚರವಿರಬೇಕು.

೩. ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ಹೊಂದಿರಬೇಕು ಇದು ಆರೋಗ್ಯಕರ ಅಭ್ಯಾಸದ ಲಕ್ಷಣಗಳು ಇಂತವರು ಇತರರನ್ನು ಪ್ರೇರೆಪಿಸುತ್ತಾರೆ .

೪. ದೃಢನಿಶ್ಚಯ ಅಥವಾ ದೃಢತೆಯನ್ನು ಹೊಂದಿರಬೇಕು ಕಷ್ಟ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಹೆದರಬಾರದು.

೫. ವ್ಯಕ್ತಿಯು ತನ್ನ ಕುಟುಂಬ ಮತ್ತು ಸ್ನೇಹಿತರು ನಡುವೆ ಸಮಾನವಾಗಿ ಹಂಚಿ ತಿನ್ನುವ, ನಂಬಿಕಸ್ತ ಗುಣಗಳನ್ನು ಹೊಂದಿರಬೇಕು.


೬. ತನ್ನ ಹೆಂಡತಿ ಅಥವಾ ಪ್ರೇಯಸಿಯ ಮನಸಿನ ಆಸೆಯನ್ನು ಅರಿತು ಅದನ್ನು ಈಡೇರಿಸುವ ಗುಣಗಳನ್ನು ಹೊಂದಿರಬೇಕು.

೭. ವ್ಯಕ್ತಿಯು ತನ್ನ ಕೆಲಸ ವೈಯಕ್ತಿಕ ಜೀವನವನ್ನು ಸರಿಯಾಗಿ ತೂಗಿಸಿಕೊಂಡು ಹೋಗಬೇಕು.

೮. ತನ್ನ ವೈಯಕ್ತಿಕ ಜೀವನವನ್ನು ಇತರರೊಡನೆ ಹಂಚಿಕೊಳ್ಳಬಾರದು .
೯. ಜೀವನದ ಎಲ್ಲಾ ವ್ಯವಹಾರದಲ್ಲಿ ತಾಳ್ಮೆ ಮತ್ತು ಪರಿಶ್ರಮ ಹೊಂದಿರಬೇಕು.

೧೦.ಅನಗತ್ಯ ವಿಷಯಗಳನ್ನು ಜೀವನದಲ್ಲಿ ಸಂಗ್ರಹಿಸುವ ,ಅನಗತ್ಯ ವಸ್ತುಗಳನ್ನು , ಅನಗತ್ಯ ಜನರು ಮತ್ತು ಅನಗತ್ಯ ನೆನಪುಗಳನ್ನು ಜೀವನದಲ್ಲಿ ಇಟ್ಟುಕೊಂಡಿರಬಾರದು.

೧೧. ಆಡಂಬರರಿಂದ ದೂರವಿರಬೇಕು ತನ್ನ ಸಂಪತ್ತು ಮತ್ತು ಯಶಸ್ಸು ಇವುಗಳಿಗೆ ಹೆಚ್ಚು ಬೆಲೆಕೊಡಬಾರದು.

೧೨. ಮಹತ್ವಾಕಾಂಕ್ಷಿ ಮತ್ತು ವಿನಮ್ರನಾಗಿರಬೇಕು, ಆಶಾವಾದ, ಒಳ್ಳೆಯತನ,ತನ್ನ ಕನಸುಗಳನ್ನು ಯಶಸ್ಸಿನ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು.

೧೩. ಜೀವನದಲ್ಲಿ ಇಲ್ಲದ್ದರ ಬಗ್ಗೆ ಚಿಂತೆಮಾಡದೆ ಯಶಸ್ಸುಗಳಿಸಲು ಯೋಚನೆ ಮಾಡಬೇಕು.

೧೪. ಉತ್ತಮ ಆಹಾರ ಸೇವನೆ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಹೊಂದಿರಬೇಕು.

೧೫. ಹೆಚ್ಚು ನಿದ್ರೆ ಮಾಡಬಾರದು , ಸೋಮಾರಿಯಾಗಿರಬಾರದು.

೧೬. ತನ್ನ ನೌಕರರು, ಮಾಲೀಕರು, ಮತ್ತು ಸಹೋದ್ಯೋಗಿಗಳೊಂದಿಗೆ ವಿನಮ್ರತಯಿಂದ ನಡೆದುಕೊಳ್ಳಬೇಕು.

೧೭. ಕಳ್ಳ ಕಾಕರಿಂದ ತನ್ನವರನ್ನು ತನ್ನನ್ನು ರಕ್ಷಿಸಿಕೊಳ್ಳಬೇಕು ಹೇಡಿಯಾಗಿರಬಾರದು.

೧೮. ವಾತಾವರಣದ ಏರಿಳಿತದ ನಡುವೆಯೂ ತನ್ನ ಕೆಲಸ ಮಾಡಿಕೊಳ್ಳಬೇಕು .

೧೯. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೋರಾಟದ ಸಂದರ್ಭದಲ್ಲಿ ಹಿಂಸಾತ್ಮಕ ಕ್ರಿಯೆಗಳನ್ನು ಮಾಡಬಾರದು.

೨೦. ಅನುಮಾನಪಡುವವನಾಗಿರಬಾರದು , ತನ್ನ ಹೆಂಡತಿಯ ಕುಟುಂಬವನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top