ಮನೋರಂಜನೆ

ಅಜ್ಮಿಗೆ ಉಳಿಸುವ ಚಿಂತೆ-ಫಡ್ನವಿಸ್‌ಗೆ ಕತ್ತರಿಸುವ ಚಿಂತೆ!

ಇದೀಗ ಶಬನಾ ಅಜ್ಮಿಗೆ ಮರ ಉಳಿಸುವ ಚಿಂತೆ. ಆದರೆ ಮಹಾರಾಷ್ಟ್ರದ ಬಿಜೆಪಿ ಸಿಎಂ ದೇವೇಂದ್ರ ಫಡ್ನವಿಸ್‌ಗೆ ಅವುಗಳ ಹನನದ ಚಿಂತೆಯಾಗಿದೆ!

 

 

ಮುಂಬೈನ ಅರಾರೆ ಕಾಡಿನಲ್ಲಿ ಸುಮಾರು ೩,೫೦೦ಕ್ಕೂ ಹೆಚ್ಚು ಮರಗಳಿವೆ. ಇದನ್ನು ವಾಯುಮಾಲಿನ್ಯದಿಂದ ಗಿಜಿಗುಡುತ್ತಿರುವ ಮುಂಬೈಗೆ ಇದು ಶ್ವಾಸಕೋಶವಾಗಿದೆ. ಆಮ್ಲಜನಕದ ಕಾರ್ಖಾನೆಯಾಗಿದೆ. ಮಹಾರಾಷ್ಟ್ರದ ಬಿಜೆಪಿ ಸರ್ಕಾರಕ್ಕೆ ಮೆಟ್ರೋ ರೈಲು ಓಡಿಸುವ ಸಲುವಾಗಿ ಇಲ್ಲಿನ ಮರಗಳ ಹನನಕ್ಕೆ ಮುಂದಾಗಿದೆ.

ಇದರ ವಿರುದ್ಧ ಮಾಜಿ ಸಂಸದೆ, ನಿರಂತರ ಸಾಮಾಜಿಕ ಹೋರಾಟಗಾರ್ತಿ, ನಟಿ, ಶಬನಾ ಅಜ್ಮಿ ಧ್ವನಿ ಎತ್ತಿದ್ದಾರೆ. ಇವುಗಳ ಹನನ ಕೂಡದು ಎಂದು ಅಬ್ಬರಿಸಿದ್ದಾರೆ. ಸಿಎಂ ಫಡ್ನವಿಸ್ ಹಾಗೂ ಮೆಟ್ರೋ ಕಾರ್ಪೋರೇಷನ್‌ನ ಅಶ್ವಿನಿ ಭಿಡೆ ಅವರಿಗೆ ಮೆಟ್ರೋ ಕಾರ್ ಶೆಡ್‌ಗೆ ಬದಲಿ ಜಾಗ ಹುಡುಕುವಂತೆ ಸೂಚಿಸೋಣ… ಎಂದು ಟ್ವೀಟ್‌ಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ.

 

 

ಅಜ್ಮಿಯ ಕಾಳಜಿಗೆ ಜೈ ಹೋ ಎನ್ನಲೇಬೇಕು. ಆದರೆ ಭಾರತ ಮಾತೆ, ಪರಿಸರ ಮಾತೆ, ಗೋಮಾತೆ ಎಂದೆಲ್ಲಾ ಪುಂಗುವ ‘ದೇಶಭಕ್ತ’ ಬಿಜೆಪಿಗರಿಗೆ ಮರಗಳ ಕಾಳಜಿ ಬೇಕಿಲ್ಲ. ಅದರಲ್ಲೂ ಭ್ರಷ್ಟಾಚಾರದ ಲೇಪನ ಮೆತ್ತಿಕೊಂಡಿರುವ ದೇವೇಂದ್ರ ಫಡ್ನವಿಸ್‌ಗೆ ಅರಾರೆ ಕಾಡಿನಲ್ಲಿರುವ ಮರಗಳಿಗೆ ಬಂಗಾರದ ಬೆಲೆ ಇರುವುದು ಗೊತ್ತು. ಅಭಿವೃದ್ಧಿಯ ನೆಪದಲ್ಲಿ ಮರಗಳಿಂದಲೂ ಮನಿ ಎತ್ತುವ ಕಾರ್ಯ ಮಾಡಲು ಹೊರಟಿದ್ದಾರೆ.

ಅಜ್ಮಿಯ ಪ್ರಾಮಾಣಿಕ ಕಾಳಜಿಗೆ ಜಯವಾಗುತ್ತದೋ… ನಕಲಿ ದೇಶಭಕ್ತ ಫಡ್ನವಿಸ್‌ನ ಭ್ರಷ್ಟತೆಗೆ ಗೆಲುವು ದಕ್ಕುವುದೋ ಕಾದು ನೋಡಬೇಕು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top