ಸಿನಿಮಾ

ಕಿಚ್ಚ ಸುದೀಪ್ ಅವರಿಗಾಗಿ ಈ ಕೆಲಸ ಮಾಡಿದ್ರು ಬಿಗ್ ಬಾಸ್ ಶ್ರುತಿ ಪ್ರಕಾಶ್

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿ ಬಂದ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಭಾರಿ ಕುತೂಹಲ ಕೆರಳಿಸಿತ್ತು. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು

 

 

ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವ 11 ಜನ ಸೆಲೆಬ್ರೆಟಿಗಳ ಪೈಕಿ ಶ್ರುತಿ ಪ್ರಕಾಶ್ ಕೂಡ ಒಬ್ಬರು .ಸದ್ಯ ಪಡ್ಡೆ ಹುಡುಗರ ಫೆವೆರೆಟ್ ಆಗಿರುವ ಶ್ರುತಿ ಪ್ರಕಾಶ್ ಹೆಸರಿನಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಹತ್ತಾರು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ..ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ಖ್ಯಾತಿಗಳಿಸಿರುವ ಶ್ರುತಿ ಪ್ರಕಾಶ್ ದೊಡ್ಡ ಪರದೆಯ ಮೇಲೆ ಮಿಂಚುತ್ತಿರುವುದು ಸುಳ್ಳಲ್ಲ .

 

ಕನ್ನಡ ಭಾಷೆ ಅಷ್ಟು ಸ್ಪಷ್ಟವಾಗಿ ಬರದಿದ್ದರೂ ಆಗಾಗ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಕನ್ನಡ ಹಾಡಿನ ಸಾಲುಗಳನ್ನು ಹಾಡುತ್ತಿದ್ದ ಶ್ರುತಿ ಪ್ರಕಾಶ್ ಈಗ ಕನ್ನಡವನ್ನು ಚೆನ್ನಾಗಿ ಕಲಿತಿದ್ದಾರೆ.

 

ಜೆಕೆ ಯವರಿಂದ ಕಲಿತಿದ್ದ ಮುಂಜಾನೆ ಮಂಜಲ್ಲಿ ಹಾಡನ್ನು ಹಾಡಿ ಈ ಹಾಡನ್ನು ಸುದೀಪ್ ಅವರಿಗೆ ಅರ್ಪಿಸಿದ್ದಾರೆ ಶ್ರುತಿ

 

 

ಈ ಹಾಡು ಹೇಗಿದೆ ಎಂದು ಸುದೀಪ್ ಅವರನ್ನು ಕೃತಿ ಕೇಳಿಕೊಂಡಿದ್ದಾರೆ ಆಗ ಸುದೀಪ್ ಅವರು ನೀವು ಈ ಹಾಡನ್ನು ಹಾಡಿರುವುದನ್ನು ಕೇಳುವುದೇ ಒಂದು ಖುಷಿ ಎಂದು ಮರುತ್ತರ ಕೊಟ್ಟಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top