ಹೆಚ್ಚಿನ

ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದು ಏನನ್ನು ಸೂಚಿಸುತ್ತದೆ ಬನ್ನಿ ತಿಳಿಯೋಣ

ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದು ಏನನ್ನು ಸೂಚಿಸುತ್ತದೆ ಬನ್ನಿ ತಿಳಿಯೋಣ

 

ಹಸಿರು ಹಾವು – ಹಸಿರು ಹಾವು ಗರ್ಭಿಣಿ ಮಹಿಳೆಯರಿಗೆ ತಮ್ಮ ಕನಸಿನಲ್ಲಿ ಕಂಡು ಬಂದರೆ ಗರ್ಭದಲ್ಲಿರುವ ಭ್ರೂಣವು ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ ಎಂದು ತಿಳಿದುಕೊಳ್ಳಬಹುದು. ನೀವು ಇದರಿಂದ ತುಂಬಾ ಸಂತೋಷವಾಗಿರಬಹುದು.

 

 

ಕೆಂಪು ಹಾವು – ಕೆಂಪು ಹಾವು ಗರ್ಭಿಣಿಯರ ಕನಸಿನಲ್ಲಿ ಬರುವುದು ಕಂಡು ಬಂದರೆ ಮುಂಬರುವ ದಿನಗಳಲ್ಲಿ ಸ್ನೇಹಿತರು ಅಥವಾ ಸಂಬಂಧಿಗಳು ಮದುವೆಯಾಗಲಿದ್ದಾರೆ ಎಂದು ಅರ್ಥ. ಇದನ್ನು ಸ್ವಲ್ಪ ವಿಸ್ತಾರವಾಗಿ ನೋಡಿದರೆ ಇದು ಗರ್ಭಿಣಿ ಮಹಿಳೆಯರಿಗೆ ತುಂಬಾ ಅದೃಷ್ಟವೆಂದು ಪರಿಗಣಿಸಲಾಗಿದೆ.

 

 

ಕಪ್ಪು ಹಾವು – ಗರ್ಭಿಣಿ ಮಹಿಳೆಯರಿಗೆ ಕಪ್ಪು ಹಾವು ಅಥವಾ ದೊಡ್ಡದಾದ ಹಾವು ಕನಸಿನಲ್ಲಿ ಬಂದರೆ ಆಗ ಆಕೆಗೆ ಗಂಡು ಮಗು ಆಗುವ ಸೂಚನೆಯಾಗಿದೆ.
ಬಾವಿಯೊಳಗೆ ಹಾವು – ಬಾವಿಯೊಳಗೆ ಹಾವು ಇರುವುದು ಕನಸಿನಲ್ಲಿ ಕಂಡು ಬಂದರೆ ಆಗ ಮಗು ದೇವರ ಸಂಪೂರ್ಣ ಆಶೀರ್ವಾದವನ್ನು ಪಡೆದಿದೆ ಎಂದರ್ಥ.

 

 

ಬಿಳಿ ಹಾವು – ಗರ್ಭಿಣಿ ಮಹಿಳೆಯರಿಗೆ ತಮ್ಮ ಕನಸಿನಲ್ಲಿ ತಮ್ಮ ಕೈಯಲ್ಲಿ ಬಿಳಿ ಹಾವು ಇರುವ ಹಾಗೆ ಕನಸು ಬಿದ್ದರೆ, ಆಗ ಆಕೆಗೆ ಹೆಣ್ಣು ಮಗು ಆಗುತ್ತದೆ ಎಂದು ಅರ್ಥ ಕಲ್ಪಿಸಬಹುದು. ಇದು ವಿಚಿತ್ರವಾಗಿದೆ ಆದರೆ ಜನರು ಇಂತಹ ಸಂಕೇತಗಳನ್ನು ನಂಬುವರು.

 

ಹಾವು ಕಡಿದರೆ – ಕನಸಿನಲ್ಲಿ ಮಹಿಳೆಗೆ ಹಾವು ಕಡಿಯುವುದು ಕಂಡು ಬಂದರೆ, ಇದು ತುಂಬಾ ಫಲಪ್ರದವಾಗಿದ್ದು ಮತ್ತು ಸಂತೋಷನ್ನು ತರುವುದೆಂದು ನಂಬಲಾಗಿದೆ ಮತ್ತು ಹಾವು ಕಡಿಯುವುದು ತುಂಬಾ ಶುಭವೆಂದು ನಂಬಬಹುದು ಇದು ಅಪರೂಪದಲ್ಲಿ ಅಪರೂಪದ ಘಟನೆ ಎಂದು ಹೇಳಲಾಗಿದೆ.

ಲೈಂಗಿಕ ಶಕ್ತಿಗಿಂತ ಹೆಚ್ಚುವುದು – ಹಾವುಗಳು ಕನಸಿನಲ್ಲಿ ಬಂದರೆ ಅದು ಲೈಂಗಿಕ ಶಕ್ತಿಯ ಪ್ರತೀಕವೆಂದು ನಂಬಲಾಗುತ್ತದೆ. ಕನಸಿನಲ್ಲಿ ನಿಮ್ಮ ಜತೆ ಹಾವು ಹೊರಳಾಡಿದರೆ, ಅಥವಾ ಉದ್ರೇಕಿಸುವಂಥಹ ಭಂಗಿಯಲ್ಲಿ ಕಂಡು ಬಂದರೆ, ಇದಕ್ಕೆ ಬೇರೆ ಹಲವಾರು ರೀತಿಯ ಕಾರಣಗಳು ಇವೆ. ಅದು ಯಾವುದೆಂದು ನೀವು ತಿಳಿದುಕೊಳ್ಳಿ.

ಹೊಸ ದಾರಿ – ಶತಮಾನಗಳಿಂದಲೂ ಹಾವುಗಳಿಗೆ ಬುದ್ಧಿವಂತಿಕೆ ಮತ್ತು ಚಿಕಿತ್ಸೆಗೆ ಸಂಬಂಧ ಕಲ್ಪಿಸಲಾಗಿದೆ. ಕನಸಿನಲ್ಲಿ ಹಾವುಗಳು ಬರುವುದು ವೈಯಕ್ತಿಕ ಬದಲಾವಣೆಗೆ ಬಲವಾದ ಸೂಚನೆಯಾಗಿದೆ. ಚಿಕಿತ್ಸೆಯೂ ಒಂದು ಆರಂಭವಷ್ಟೇ , ಹಾವಿನ ಕನಸುಗಳು ನಿಮಗೆ ತುಂಬಾ ಆತಂಕವನ್ನು ಉಂಟು ಮಾಡಬಹುದು. ಆದರೆ ನಿಮ್ಮ ಕಷ್ಟ ಹಾಗೂ ಕೆಲವೊಂದು ಕಟ್ಟುಪಾಡುಗಳನ್ನು ಬಿಟ್ಟು ಮುಂದೆ ಸಾಗಲು ಇದು ಸೂಚನೆಯಾಗಿದೆ.

 

 

ಹುಲ್ಲಿನ ಮೇಲೆ ಹಾವು ನಿಮಗೆ ಎಚ್ಚರಿಕೆ ನೀಡುತ್ತಿರಬಹುದು – ಹಾವುಗಳು ನಿಮಗೆ ಕೆಲವೊಂದು ಸಲ ಅಚ್ಚರಿಯನ್ನು ಉಂಟು ಮಾಡಬಹುದು. ಯಾಕೆಂದರೆ ಅವು ರಹಸ್ಯಗಳಿಗೆ ಸಂಬಂಧಿಸಿದ್ದಾಗಿದೆ. ಹುಲ್ಲಿನಲ್ಲಿ ಹಾವು ಕಂಡು ಬಂದರೆ ನೀವು ಯಾರನ್ನು ನಂಬಬಾರದು. ಆತ ನಿಮಗೆ ಮೋಸ ಮಾಡಬಹುದು ಅಥವಾ ಕೆಲವನ್ನು ರಹಸ್ಯ ಮುಚ್ಚಿಡಬಹುದು ಎನ್ನುವುದರ ಸೂಚನೆಯಾಗಿದೆ. ಇದು ಬೇರೆ ಯಾರೂ ಆಗಿರಲಿಕ್ಕಿಲ್ಲ. ನಿಮಗೆ ಸತ್ಯ ಗೊತ್ತಿರಬಹುದು. ಆದರೆ ಅದನ್ನು ಕಡೆಗಣಿ ಸುತ್ತಿರಬಹುದು .

ಗೌಪ್ಯವಾದ ಆಕಾಂಕ್ಷೆಗಳಿವೆಯಾ – ಕನಸಿನಲ್ಲಿ ಹಾವು ಕಂಡು ಬಂದರೆ ಭಯಭೀತರಾಗುವುದು ಸಹಜ. ಯಾಕೆಂದರೆ ಅವುಗಳು ಉಂಟು ಮಾಡುವ ಬದಲಾವಣೆ ಹಾಗೂ ಅವುಗಳಲ್ಲಿರುವ ಶಕ್ತಿ ಮೇಲೆದ್ದು ಬರುವಂತಹ ಹಾವು, ಮಲಗಿದ್ದ ಹಾವು ಎದ್ದು ಬರುವುದು. ಇವುಗಳು ನಿಮ್ಮ ಜೀವನದಲ್ಲಿ ಮತ್ತೆ ಶಕ್ತಿಯು ಹರಿದು ಬರಲಿದೆ. ನಿಮ್ಮ ಆಕಾಂಕ್ಷಿಗಳಿಗೆ ಪ್ರೇರಣೆಯಾಗಲಿದೆ ಎಂದರ್ಥ.

ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತ – ಕನಸಿನಲ್ಲಿ ಹಾವು ಕಂಡುಬಂದರೆ ಅದು ಕುಂಡಲಿನಿ ಶಕ್ತಿಯು ಜಾಗೃತವಾದ ಸಂಕೇತವೆಂದು ಪಾಶ್ಚಿಮಾತ್ಯರು ನಂಬಿದ್ದಾರೆ. ಶಕ್ತಿಯು ನಿಮ್ಮ ಬೆನ್ನು ಮೂಳೆಯ ಮೂಲಕ ತಲೆಗೆ ಹೋಗುವುದು. ಇದರಿಂದ ಆಧ್ಯಾತ್ಮಿಕತೆಯ ಶಕ್ತಿ ಎಚ್ಚರವಾಗುವುದು ಎನ್ನಲಾಗುತ್ತದೆ. ಕನಸಿನಲ್ಲಿ ಹಾವು ಬಂದರೆ ಅದು ನಿಮ್ಮನ್ನು ನಾಶ ಮಾಡುವುದಕ್ಕಿಂತ ಹೆಚ್ಚು ಒಳ್ಳೆಯದನ್ನು ಮಾಡಲಿದೆ. ಆದರೆ ಆಯ್ಕೆ ನಿಮಗೆ ಬಿಟ್ಟಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top