ಮನೋರಂಜನೆ

ಕೆಟ್ಟಾ ಕೊಳಕು ಕಮೆಂಟ್ ಮಾಡಿದರೆ ಇದೇ ಗತಿ!

 

 

ಒಂದು ವಿಚಾರದ ಬಗ್ಗೆ ತಲೆ ಬುಡ ಗೊತ್ತಿಲ್ಲದ, ಬರೆದದ್ದನ್ನು ಅರಗಿಸಿಕೊಳ್ಳುವ ಯೋಗ್ಯತೆಯೂ ಇಲ್ಲದ ಅಯೋಗ್ಯರ ಗುಂಪೊಂದು ಆನ್‌ಲೈನ್ ಅನ್ನೇ ಅಡ್ಡಾ ಮಾಡಿಕೊಂಡಿದೆ. ಪಥ್ಯವಾಗದ ವಿಚಾರವೊಂದರ ಬಗ್ಗೆ ಸಾತ್ವಿಕವಾದ ತಕರಾರು ತೆಗೆದು ಸಂವಹನ ನಡೆಸುವವರೂ ಇಲ್ಲಿದ್ದಾರೆ. ಅಂಥವರ ಎಲ್ಲ ವಿಚಾರಗಳನ್ನೂ ಸಿನಿಬಜ್ ತಂಡ ಸಕಾರಾತ್ಮಕವಾಗಿ ಸ್ವೀಕರಿಸಿದೆ; ಆತ್ಮೀಯವಾದ ಸಂವಹನವನ್ನೂ ನಡೆಸಿದೆ. ಆದರೆ ಇವರೆಲ್ಲರ ನಡುವಿಂದ ಆಗಾಗ ಯಾವುದೋ ಗಟಾರದಲ್ಲಿ ಬಿದ್ದು ಹೊರಳಾಡಿ ಬಂದು ಹೊಟ್ಟೆ ಸೇರಿದ ಹೊಲಸನ್ನೆಲ್ಲ ಕಮೆಂಟ್ ಮೂಲಕ ಕಾರಿಕೊಳ್ಳುವ ಇವನ್ಯಾರೋ ಸ್ವಾಮಿ ಶೆಟ್ಟಿಗೆರೆಯಂಥಾ ತೊಟ್ಟಿ ಗಿರಾಕಿಗಳೂ ಆಗಾಗ ಆಮಶಂಕೆಯಿಂದ ಬಳಲುತ್ತಾರೆ!

 

 

ಚಂದನ್ ಶೆಟ್ಟಿ ಬಗ್ಗೆ ಅರ್ಜುನ್ ಸರ್ಜಾ ಸೋದರ ಸಂಬಂಧಿ ವಿಜೇತ್ ಮಾಡಿದ್ದ ಆರೋಪದ ಬಗ್ಗೆ ವರದಿ ಮಾಡಿದ್ದೆವಲ್ಲಾ? ಆ ಬಗ್ಗೆ ಅರಚಿಕೊಂಡಿರುವ ಸ್ವಾಮಿ ಶೆಟ್ಟಿಗೆರೆ ಎಂಬ ಹಲಾಲುಕೋರ ಉಪಯೋಗಿಸಿರುವ ಭಾಷೆ ನೋಡಿದರೇನೇ ಆತನ ಸಂಸ್ಕೃತಿ ಏನು, ಆತನ ಕೊಳೆತು ನಾರುವ ಮನಸ್ಥಿತಿ ಏನೆಂದು ಯಾರಿಗಾದರೂ ಅರ್ಥವಾಗುತ್ತದೆ.

ಈ ಹಾದರದವನಿಗೆ ಸಿನಿಬಜ್ ಎಂಬುದೊಂದು ಫೇಸ್ ಬುಕ್ ಪೇಜಲ್ಲ, ಇದೊಂದು ವೆಬ್ ಮ್ಯಾಗಜ಼ಿನ್ ಎಂಬ ಕನಿಷ್ಠ ಜ್ಞಾನವೂ ಇದ್ದಂತಿಲ್ಲ. ಅಷ್ಟಕ್ಕೂ ಇಂಥಾ ಅನಿಷ್ಟ ಸಂತತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಸಮಯವೂ ನಮಗಿಲ್ಲ. ಆದರೆ ಈತ ಬಳಸಿರೋ ಭಾಷೆ ಇದೆಯಲ್ಲಾ? ಅದು ಇವನ ಮೇಲೆ ಕಾನೂನಿನ ಹಾದಿಯಲ್ಲೇ ಕ್ರಮ ಜರುಗುವಂತೆ ಮಾಡಿ, ಇವನಂಥಾದ್ದೇ ಕೊಳಚೆ ಕ್ಯಾಟಗರಿಯವರಿಗೂ ಒಂದು ಪಾಠವಾಗುವಂಥಾ ನಿಟ್ಟಿನಲ್ಲಿ ಮುಂದಡಿ ಇಡುವಂತೆ ಮಾಡಿದೆ..

 


ನಾಳೆ ಈ ಸ್ವಾಮಿ ಶೆಟ್ಟಿಗೆರೆ ಎಂಬ ಶನಿಸಂತಾನಿಯ ಮೇಲೆ ಸಿನಿಬಜ್ ತಂಡ ಸೈಬರ್ ಕ್ರೈಂಗೆ ದೂರು ದಾಖಲಿಸಲಿದೆ. ಅದೆಲ್ಲಾ ಹಾಗಿರಲಿ. ಈ ಕೊಳಕುಮಂಡಲದ ಮೂಲ ಯಾವುದು? ಇದರ ಹಿನ್ನೆಲೆ ಏನೆಂಬ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಿದ್ದೇವೆ. ಶತಮಾನಗಳಿಂದ ಕೊಳೆತು ನಾರುತ್ತಿದ್ದ ಗಟಾರವೊಂದರಿಂದ ಡೈರೆಕ್ಟಾಗಿ ಫೇಸ್‌ಬುಕ್ಕಿಗೆ ನುಗ್ಗಿ ಬಂದಂತಿರೋ ಈ ಪ್ರಾಣಿ ಕಲರ‍್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿ ತಂಡದ ಸದಸ್ಯನಂತೆ. ಇಂಥಾ ಬರಗೆಟ್ಟ ಅಸಹ್ಯವನ್ನು ಒಳ್ಳೆ ಹೆಸರಿರುವ ಅಗ್ನಿಸಾಕ್ಷಿ ತಂಡವರು ಯಾಕೆ ಜೊತೆಗಿಟ್ಟುಕೊಂಡಿದ್ದಾರೋ… ಕಮೆಂಟಿನ ಮೂಲಕವೇ ಅಸಹ್ಯ ಹುಟ್ಟಿಸುವ ಈ ಮಹಾಸ್ವಾಮಿ ಅದ್ಯಾವ ಘನಂಧಾರಿ ಕೆಲಸ ಮಾಡುತ್ತಾನೋ…

 


ಇನ್ನುಳಿದಂತೆ ನಾಳೆ ಸ್ವಾಮಿ ಶೆಟ್ಟಿಗೆರೆ ಎಂಬ ಬರಗೆಟ್ಟವನ ಮೇಲೆ ಜರುಗಲಿರೋ ಕಾನೂನು ಕ್ರಮವೇ ಸಭ್ಯತೆಯ ಎಲ್ಲೆ ಮೀರಿ ವರ್ತಿಸುವ ಇತರೇ ಜನರಿಗೂ ಅನ್ವಯವಾಗುತ್ತದೆ. ಅಷ್ಟಕ್ಕೂ ಆನ್‌ಲೈನ್ ಪತ್ರಿಕೆ ಎಂದಾಕ್ಷಣ ಯಾರೋ ಅರೆಬರೆ ಆಸಾಮಿಗಳು ಅದೇನೇನೋ ಬರೆಯುತ್ತಾರೆಂದುಕೊಂಡರೆ ಅದು ಈ ತೊಟ್ಟಿ ಗಿರಾಕಿಯಂಥವರ ಕರ್ಮ. ಸಿನಿಬಜ್ ಹತ್ತಾರು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಪಳಗಿದ ಕಟ್ಟುಮಸ್ತಾದೊಂದು ತಂಡದಿಂದ ರೂಪುಗೊಳ್ಳುತ್ತಿದೆ. ಇದರ ಹಿಂದೆ ಸ್ಪಷ್ಟವಾದ ರೂಪುರೇಷೆಗಳಿದ್ದಾವೆ. ಸಭ್ಯತೆಯ ಹಾದಿಯನ್ನು ಹೊರತಾಗಿಸಿ ಸ್ವಾಮಿಯಂಥಾ ‘ತುಕಾಲಿ’ಗಳಿಂದ ಪಾಠ ಹೇಳಿಸಿಕೊಳ್ಳುವ ಯಾವ ದರ್ದೂ ನಮಗಿಲ್ಲ. ಇಂಥವರಿಂದ ಕನ್ನಡತನ ಸೇರಿದಂತೆ ಯಾವ ಪ್ರವಚನಗಳನ್ನೂ ಕೇಳಲು ನಮಗೆ ಪುರಸೊತ್ತಿಲ್ಲ.

ಹೀಗೆ ಕೊಳಕು ಕಮೆಂಟ್ ಮಾಡಿದವರಿಗೆ ಅಲ್ಲೇ ಉತ್ತರಿಸಿದ್ದೇವೆ. ತಿಳಿಹೇಳಿದ್ದೇವೆ. ಆದರೆ ನಮ್ಮ ಸಂಯಮದ ವ್ಯಾಲಿಡಿಟಿ ಈಗ ಮುಗಿದಿದೆ. ಅಂದಹಾಗೆ ನಾಳೆ ಸೈಬರ್ ಕ್ರೈಂನಲ್ಲಿ ಶೆಟ್ಟಿಗೆರೆಯ ತೊಟ್ಟಿಯ ವಿರುದ್ಧ ಕೇಸು ಜಡಿದುಕೊಳ್ಳಲಿದೆ. ನುರಿತ ಅಧಿಕಾರಿಗಳು ಅವನ ಅಂಡಿಗೊದ್ದಾಗ ತುಬತುಬನೆ ಉದುರುತ್ತದಲ್ಲಾ ಬಕೀಟು ಬುದ್ಧಿಯ ತೊಪ್ಪೆ? ಅದನ್ನು ಗುಡಿಸಿ ಸಾರಿಸಲು ಸಹಕರಿಸೋ ಮನಸಿರುವವರು ಧಾರಾಳವಾಗಿ ಇನ್ನು ಮುಂದೆಯೂ ಇಂಥಾ ಕೆಟ್ಟಾ ಕೊಳಕು ಕಮೆಂಟ್‌ಗಳನ್ನು ಕೆತ್ತುತ್ತಿರಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top