ಮನೋರಂಜನೆ

ಕಿಚ್ಚ ಪೈಲ್ವಾನ್ ಆಗುತ್ತಿರುವುದಕ್ಕೆ ಕಾರಣವಾದ ವ್ಯಕ್ತಿ ಇವರೇ ಅಂತೇ ನೋಡಿ!

ಕಿಚ್ಚ ಪೈಲ್ವಾನ್ ಆಗುತ್ತಿರುವುದಕ್ಕೆ ಕಾರಣವಾದ ವ್ಯಕ್ತಿ ಇವರೇ ಅಂತೇ ನೋಡಿ!

 

 

 

ಸುದೀಪ್ ಕನ್ನಡ ಚಿತ್ರರಂಗದ ಚೆಂದದ ನಟ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆಸುಪಾಸಿನ ನಟರು ಜಿಮ್ಮು ಸೇರಿಕೊಂಡು ಬೆವರಿಳಿಸಿ ಅಂಗಸೌಷ್ಠವ ವೃದ್ಧಿಸಿಕೊಳ್ಳುತ್ತಿದ್ದರೂ ಸುದೀಪ್ ಮಾತ್ರ ಅಷ್ಟಾಗಿ ಬಾಡಿ ಟ್ಯೂನಿಂಗ್‌ನತ್ತ ಗಮನ ಹರಿಸಿದವರಲ್ಲ. ಆದರೆ, ಇತ್ತೀಚೆಗೆ ಅವರ ದೇಹಾಕಾರದಲ್ಲಿ ಅದ್ಭುತ ಎಂಬಂಥಾ ಬದಲಾವಣೆಗಳಾಗಿವೆ. ಇದು ಕನ್ನಡ ಮೀಡಿಯಂ ರಾಜು ಮೂಲಕ ಎಲ್ಲರ ಗಮನಕ್ಕೂ ಬಂದಿದೆ. ಇದೀಗ ಅವರು ಮೊದಲ ಬಾರಿ ಸೀರಿಯಸ್ಸಾಗಿಯೇ ಜಿಮ್‌ನತ್ತ ಮುಖ ಮಾಡಿದ್ದಾರೆ!

 

 

ಆದರೆ, ಈ ದೈಹಿಕ ಬದಲಾವಣೆಗಳ ಮೂಲಕ ಸುದೀಪ್ ಪೈಲ್ವಾನ್ ಚಿತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆಂಬುದು ಅಸಲೀ ಸಂಗತಿ! ಈವರೆಗೆ ಸುದೀಪ್ ಥರ ಥರದ ಪಾತ್ರ ಮಾಡಿದ್ದರೂ ಮೊದಲ ಸಲ ಹೆಸರಿಗೆ ತಕ್ಕಂತೆ ಈ ಚಿತ್ರದಲ್ಲಿ ಪೈಲ್ವಾನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಕ್ಗಸಿಂಗ್‌ಗೆ ಪ್ರಧಾನ್ಯತೆ ಇದೆ. ಆದ್ದರಿಂದಲೇ ಬಾಡಿ ಶೋ ಮಾಡಲೇ ಬೇಕಾದ ಅನಿವಾರ್ಯವೂ ಎದುರಾಗಿದೆ. ಆದ್ದರಿಂದಲೇ ಸುದೀಪ್ ಬಹುಕಾಲದಿಂದ ಮಾಡುತ್ತಿದ್ದ ಪವರ್ ಯೋಗವನ್ನು ಮತ್ತಷ್ಟು ಶ್ರದ್ಧೆಯಿಂದ ಮಾಡುತ್ತಿದ್ದಾರಂತೆ.

 

 

ಹೊಸಾ ವಿಚಾರವೇನೆಂದರೆ, ಇದೀಗ ಪೈಲ್ವಾನ್ ಚಿತ್ರಕ್ಕಾಗಿಗೇ ದೇಹವನ್ನು ಮತ್ತಷ್ಟು ಹುರಿಗೊಳಿಸಿಕೊಳ್ಳಲು ಸುದೀಪ್ ಜಿಮ್ ಸೇರಿಕೊಂಡಿದ್ದಾರೆ. ಪವರ್ ಯೋಗದಿಂದ ದೇಹವನ್ನು ಒಂದಷ್ಟು ಸಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯಾದರೂ ದೇಹಾಕಾರವನ್ನು ಟ್ಯೂನ್ ಮಾಡಿಕೊಳ್ಳೋದು ಕಷ್ಟ. ಆದ್ದರಿಂದ ಪೈಲ್ವಾನ್ ಚಿತ್ರಕ್ಕೆಂದೇ ಮೊದಲ ಸಲ ಸುದೀಪ್ ವರ್ಕೌಟ್‌ನತ್ತ ಮುಖ ಮಾಡಿದ್ದಾರೆ. ಅಲ್ಲದೆ ತಾವು ಜಿಮ್ ಕಡೆ ಮುಖ ಮಾಡಿರುವುದಕ್ಕೆ ಕಾರಣ ರಾದವರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ “ತಮ್ಮ ಜಿಮ್ ತರಬೇತುದಾರ ಜೀತ್ ದೇವಯ್ಯ ಅವರೊಂದಿಗಿನ ಫೋಟೋ ಹಾಕಿ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದು ಅವರನ್ನು ಗುಣಗಾನ ಮಾಡಿದ್ದಾರೆ.. ತಾನು ಜಿಮ್’ಗೆ ಹೋಗಿ ವರ್ಕ್ ಔಟ್ ಮಾಡುತ್ತಿರುವ ಫುಲ್ ಕ್ರೆಡಿಟ್ ತಮ್ಮನ್ನು ಜಿಮ್’ನತ್ತ ತಳ್ಳುತ್ತಿರುವ ತಮ್ಮ ಪತ್ನಿ ಪ್ರಿಯಾ ಅವರಿಗೆ ಸಲ್ಲಬೇಕು ಎಂದು ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top