ಜ್ಯೋತಿಷ್ಯ

ವೃಷಭ ರಾಶಿಯವರ ಗುಣ ಮತ್ತು ಸ್ವಭಾವ ಹೇಗಿರುತ್ತೆ ? ಅದೃಷ್ಟ ಸಂಖ್ಯೆ,ಬಣ್ಣ,ದಿನ ಮತ್ತು ರತ್ನ ಯಾವುದು ತಿಳ್ಕೊಳ್ಳಿ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವೃಷಭ ರಾಶಿಯವರ ಗುಣ ಲಕ್ಷಣಗಳು, ಆದೃಷ್ಟ ಸಂಖ್ಯೆ,ದಿನ,ರತ್ನ,ದೇವತೆ, ಬಣ್ಣ, ದಿನಾಂಕ, ಮಿತ್ರ ರಾಶಿ ಮತ್ತು ಶತ್ರು ರಾಶಿ.
ನಿಮ್ಮದು ವೃಷಭ ರಾಶಿಯೇ ಹಾಗಾದರೆ ವೃಷಭ ರಾಶಿಯವರು ಗುಣಲಕ್ಷಣಗಳನ್ನು ತಿಳಿಯಿರಿ.

ಗುಣ ಲಕ್ಷಣಗಳು.

ಈ ರಾಶಿಯಲ್ಲಿ ಜನಿಸಿದವರು ಸಾಧಾರಣ ಎತ್ತರ ಉಳ್ಳವರಾಗಿರುತ್ತಾರೆ ಹಾಗೂ ಸಾಧಾರಣ ಬಣ್ಣದವರಾಗಿರುತ್ತಾರೆ,ಎತ್ತು ದುಡಿಯುವ ಹಾಗೆ ದುಡಿಯುತ್ತಾರೆ,ಸಂಗೀತ ಪ್ರಿಯರು,ಕಲೆಯನ್ನು ಇಷ್ಟ ಪಡುತ್ತಾರೆ,ಪರಿಶ್ರಮ ಜೀವಿಗಳು, ಸಾಮಾನ್ಯವಾಗಿ ಎಲ್ಲರಲ್ಲೂ ವಿಶ್ವಾಸ ಹೊಂದಿರುತ್ತಾರೆ, ಇವರು ಬಹಳ ನಂಬಿಕಸ್ತರು, ಯಾವಾಗಲೂ ಉದ್ರೇಕ ಹೊಂದುವುದಿಲ್ಲ, ಯಾವುದೇ ಸಂಕಲ್ಪ ಮಾಡಿದರೆ ಅದನ್ನು ಬದಲಾಯಿಸುವುದಿಲ್ಲ, ಆಕರ್ಷಕ ವ್ಯಕ್ತಿತ್ವ ಹೊಂದಿರುವವರಾಗಿರುತ್ತಾರೆ, ಸಮಾಜ ಸೇವೆಯಲ್ಲಿ ಆಸಕ್ತಿ ಇರುತ್ತದೆ, ಮುಂದೆ ನಡೆಯುವುದನ್ನು ಮೊದಲೇ ಗ್ರಹಿಸುವ ಶಕ್ತಿ ಇವರದ್ದು, ಆತ್ಮವಿಶ್ವಾಸ ಹೆಚ್ಚಾಗಿರುತ್ತೆ ಎಂಥಹ ಕಠಿಣ ಸಮಸ್ಯೆ ಬಂದರೂ ತಕ್ಷಣ ಪರಿಹಾರ ಮಾಡಿಕೊಳ್ಳುತ್ತಾರೆ.

 

 

ಸಮಯಕ್ಕೆ ತಕ್ಕ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ, ಕೀರ್ತಿ ಮತ್ತು ಪ್ರತಿಷ್ಠೆ ಬಯಸುವವರು, ಅಧಿಕ ಖರ್ಚು ಮಾಡುವವರೂ ಆಗಿರುತ್ತಾರೆ, ಆತುರದ ನಿರ್ಧಾರ ತೆಗೆದುಕೊಳ್ಳುವವರಲ್ಲ , ತಮ್ಮನ್ನು ಕೆಣಕಿದರೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ, ಉದ್ದಂಡವಾದ ಮೊಂಡು ಸ್ವಭಾವ, ಜಿಗುಟುತನ ಇವು ಇವರ ಹುಟ್ಟು ಗುಣಗಳು, ಇವರಿಗೆ ರೋಗ ಕಾಡದೆ ಬಿಡುವುದಿಲ್ಲ,ಕುತ್ತಿಗೆ ನೋವು,ಗಂಟಲು ನೋವು ಸಾಮಾನ್ಯವಾಗಿ ಇರುತ್ತದೆ.

ಆದೃಷ್ಟ ರತ್ನ.

ಇವರ ಅದೃಷ್ಟ ರತ್ನ ವಜ್ರ.

 

ಆದೃಷ್ಟ ಬಣ್ಣ.

ಅದೃಷ್ಟ ಬಣ್ಣ ಬಿಳಿ ಮತ್ತು ನೀಲಿ .

ಆದೃಷ್ಟ ದಿನ.

ಅದೃಷ್ಟ ದಿನ ಶುಕ್ರವಾರ ಮತ್ತು ಬುಧುವಾರ ಯಾಕೆಂದರೆ ಬುಧ ಮತ್ತು ಶುಕ್ರ ಇಬ್ಬರು ಸ್ನೇಹಿತರು.

ಅದೃಷ್ಟ ಮತ್ತು ದುರಾದೃಷ್ಟ ಸ0ಖ್ಯೆ.

ಆದೃಷ್ಟ ಸಂಖ್ಯೆ 5,14,23,6,9.ದುರಾದೃಷ್ಟ ಸಂಖ್ಯೆ 4 ಮತ್ತು 8.

 

 

ಅದೃಷ್ಟ ದೇವತೆ.

ಅದೃಷ್ಟ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಯಾಕೆಂದರೆ ಶುಕ್ರನ ಅಧಿದೇವತೆ ಲಕ್ಷ್ಮೀ ದೇವಿ.

ಆದೃಷ್ಟ ದಿನಾಂಕ.

ಆದೃಷ್ಟ ದಿನಾಂಕ ಆರು, ಹದಿನೈದು ಮತ್ತು 24.

ಮಿತ್ರ ರಾಶಿಗಳು.

ಇವರ ಮಿತ್ರ ರಾಶಿಗಳು ಕನ್ಯಾ ರಾಶಿ, ಮಕರ ರಾಶಿ ಮತ್ತು ಕುಂಭ.

 

 

ಶತ್ರು ರಾಶಿಗಳು.

ಸಿಂಹ , ಧನಸ್ಸು ಮತ್ತು ಮೀನ ರಾಶಿ.

ವೃಷಭ ರಾಶಿಯವರ ವಿಶೇಷ ಗುಣವನೆಂದರೇ ಅವರು ಬಹಳ ದಯಾಮಯಿಗಳು. ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರನ ಮಂತ್ರವನ್ನು ತಪ್ಪದೆ ಪಠಿಸುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಶುಕ್ರನ ಮಂತ್ರ ಹೀಗಿದೆ

“ ಓ0 ಬೃಗುಸುತಾಯ ವಿದ್ಮಹೇ,
ಶಿಷ್ಯ ವತ್ಸಲಾಯ ಧೀಮಹಿ,
ತನ್ನೊ ಶುಕ್ರ ಪ್ರಚೋದಯಾತ್”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top