ಹೆಚ್ಚಿನ

ತನ್ನ ನಾಲಿಗೆ ಕತ್ತರಿಸಿ ಶಿವನಿಗೆ ಸಮರ್ಪಣೆ ಮಾಡಿದ ಶಿವಭಕ್ತೆ.

ತನ್ನ ನಾಲಿಗೆ ಕತ್ತರಿಸಿ ಶಿವನಿಗೆ ಸಮರ್ಪಣೆ ಮಾಡಿದ ಶಿವಭಕ್ತೆ.

ಮಹಾಶಿವರಾತ್ರಿ ದಿನದಂದು 28 ವರ್ಷದ ಭಕ್ತೆಯೊಬ್ಬಳು ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯು ಛತ್ತೀಸಘಡ್ ರಾಜ್ಯದ ರಾಯ್‍ಪುರದ ಪಾಲಿ ಅಭಿವೃದ್ಧಿಯ ಬ್ಲಾಕ್ನ ಅಡಿಯಲ್ಲಿ ನುನೆರಾ ಗ್ರಾಮದ ಶಿವ ದೇವಾಲಯದಲ್ಲಿ ನಿನ್ನೆ ಬೆಳಗ್ಗೆ ನಡೆದಿದ್ದು, ಕೊರ್ಬಾ ಜಿಲ್ಲೆಯ ಕೇಂದ್ರ ಕಚೇರಿಯಿಂದ 60 ಕಿ.ಮೀ ದೂರದಲ್ಲಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

ಮೂಲಗಳ ಪ್ರಕಾರ ಫರ್ತು ರಾಮ್ ಗೊಂಡ್ ಅವರ ಪತ್ನಿ ಸೀಮಾ ಬಾಯ್ ಗೊಂಡ್ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಶಿವಲಿಂಗ ಮುಂದೆ ಚಾಕುವಿನಿಂದ ತನ್ನ ನಾಲಗೆಯನ್ನು ಕತ್ತರಿಸಿ ಅರ್ಪಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿದ್ದ ಗ್ರಾಮದ ಜನರು ಕೂಡಲೇ ದೇವಸ್ಥಾನದಲ್ಲಿ ರಕ್ತಸ್ರಾವದಿಂದ ಬಿದ್ದಿದ್ದ ಮಹಿಳೆಯನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯು ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

 

ಈ ಘಟನೆಯ ಹಿಂದೆ ಇರುವ ನಿಖರವಾದ ಕಾರಣವನ್ನು ಇನ್ನು ಕಂಡುಹಿಡಿಯಲು ಆಗಿಲ್ಲ ಎಂದು ತಿಳಿದು ಬಂದಿದೆ. ಮಹಿಳೆ ಈಗ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top