ಸಿನಿಮಾ

ಲಾಂಗೆಷ್ಟು ದೂರದಲ್ಲಿ ಮತ್ತೆ ಒಂದಾದ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ

ತೆರೆಯ ಮೇಲೆ ಮಾತ್ರವಲ್ಲ ತಮ್ಮ ನೈಜ ಜೀವನದಲ್ಲಿ ಪ್ರೀತಿ ಮಾಡಿ ವಿವಾಹ ಆದವರು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಎಂದು ರಾಜ್ಯಾದ್ಯಂತ ಹೆಸರು ವಾಸಿಯಾಗಿದ್ದರೆ. ಮದುವೆ ಆದ ಬಳಿಕ ಅನೇಕ ಸಮಾಜಮುಖಿ ಕೆಲಸಗಳ ಮೂಲಕ ಈ ದಂಪತಿಗಳು ಜನರ ಮನಸ್ಸು ಗೆದ್ದಿದ್ದಾರೆ.

 

 

ಇತ್ತೀಚಿಗೆ ವಿದೇಶಕ್ಕೆ ರಾಧಿಕಾ ಪಂಡಿತ್ ತೆರಳಿದ್ದರು ಈಗ ಯಶ್ ಕೂಡ ಪತ್ನಿ ಜೊತೆ ಸುತ್ತಾಡಲು ವಿದೇಶಕ್ಕೆ ತೆರಳಿದ್ದಾರೆ. ಈ ಸಂಧರ್ಬದ ಭಾವಚಿತ್ರಗಳನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ರಾಧಿಕಾ ಅವರು ಯಶ್ ಅವರ ಜೊತೆಗಿದ್ದ ತಮ್ಮ ಹಳೆಯ ಚಿತ್ರವನ್ನು ಹಂಚಿಕೊಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

 

 

ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಬರೆದಿರುವ ರಾಧಿಕಾ ಪಂಡಿತ ” ಈ ಪ್ರೇಮಿಗಳ ದಿನಾಚರಣೆಯಂದು ನಾನು ಈ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು 2006 ರಲ್ಲಿ ತೆಗೆಸಿಕೊಂಡಿದ್ದು. ನಾವಿಬ್ಬರು ಆಗ ಒಲೆಯ ಸ್ನೇಹಿತರಾಗಿದ್ದೇವೆ. ಆದರೆ ಈ ಚಿತ್ರವನ್ನು ನಾನು ನೋಡಿದಾಗ ನಮ್ಮಿಬ್ಬರ ನಡುವೆ ಆಳವಾದ ಪ್ರೀತಿ ಇತ್ತು ಎಂದು ನನಗೆ ಅನಿಸುತ್ತಿದೆ ಎಂದು ಹೇಳಿದರು” ಎಲ್ಲರಿಗು ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು ಎಂದು ಅವರು ತಿಳಿಸಿದರು.

 

ಚಿಕಾಗೋದಲ್ಲಿರುವ ತಮ್ಮಅಣ್ಣನ ಮಗುವನ್ನು ನೋಡಲು ಅವರ ಮನೆಗೆ ತೆರಳಿದ್ದರು ರಾಧಿಕಾ ಈ ಸಂದರ್ಭದಲ್ಲಿ ನನ್ನ ವಾಲೆಂಟೈನ್ ನೋಡಲು ಕಾತುರಳಾಗಿದ್ದೇನೆ ಎಂದು ಹೇಳಿದ್ದರು .

 

 

ಕೊನೆಗೂ ಚಿಕಾಗೋ ತಲುಪಿದ ಯಶ್ ರಾಧಿಕಾ ರವರನ್ನು ಪ್ರೇಮಿಗಳ ದಿನ ಭೇಟಿ ಮಾಡಿ ಉಡುಗೊರೆ ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top