ಸಮಾಚಾರ

ಜೈಲೂಟ ಬೇಡ ಎಂದು ದರ್ಪ ತೋರಿದ ವಿವಿಐಪಿ ಕೂಸು ನಲಪಾಡ್

ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಬಹುಕೋಟಿ ಉದ್ಯಮಿಯ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸ್ನೇಹಿತರರಿಗೆ ನಗರ ಸಿವಿಲ್ ಕೋರ್ಟ್ ಜಾಮೀನು ಅರ್ಜಿ ನಿರಾಕರಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನದ ವಶಕ್ಕೆ ನೀಡಲಾಗಿದ್ದು ನೆನ್ನೆ ಸಂಜೆಯಿಂದ ಗೂಂಡಾ ನಳಪಾದ್ ಮತ್ತು ಅವರ ಸಹಚರರು ಪರಪ್ಪನ ಅಗ್ರಹಾರದ ಜೈಲಿಗೆ ಶಿಫ್ಟ್ ಆಗಿದ್ದಾರೆ.

 

 

ಆದರೀಗ ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು ಸದ್ಯ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್​ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರ ಅಥವಾ ಮುಂಬೈಗೆ ಶಿಫ್ಟ್​ ಮಾಡಬೇಕೇಂಬ ಮಾತುಕತೆ ನಡೆದಿದೆ..ಆದರೆ ಯಾವುದು ಇನ್ನೂ ತೀರ್ಮಾನನವಾಗಿಲ್ಲ. ಅಂಗಾಂಗಗಳಿಗೆ ಪೆಟ್ಟುಬಿದ್ದಿರುವುದರಿಂದ ಎಲ್ಲಾ ಸಮಸ್ಯೆಗಳಿಗೂ ಸರಿಯಾದ ಚಿಕಿತ್ಸೆ ನೀಡುವ ಸೌಲಭ್ಯದ ಕೊರತೆ ಮಲ್ಯ ಆಸ್ಪತ್ರೆಯಲ್ಲಿ ಇರುವುದರಿಂದ ವಿದ್ವತ್ ಆರೋಗ್ಯದಲ್ಲಿ​​ ಚೇತರಿಸಿಕೊಳ್ಳದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ಕರೆದೊಯ್ಯಲು ಕುಟುಂಬದವರು ತಿರ್ಮಾನಿಸಿದ್ದಾರೆ…

 

ಇಂದು ನಲಪಾಡ್ ಸಲ್ಲಿಸಿದ್ದ ಬೆಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ನಲಪಾಡ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಇದರಿಂದ ಮನನೊಂದ ನಲಪಾಡ್ ಕೋರ್ಟ್ ನಲ್ಲಿ ಕಣ್ಣೀರಿಟ್ಟ

ಆ ನಂತರ ಪರಪ್ಪನ ಅಗ್ರಹಾರಕ್ಕೆ ಮರಳಿದ ವಿ ವಿ ಐ ಪಿ ನಲಪಾಡ್ ರಾತ್ರಿ ಊಟ ಮಾಡಲು ದರ್ಪ ತೋರಿಸಿದ್ದಾನೆ , ಜೈಲೂಟ ಬೇಡ ನನಗೆ ಮನೆಯೂಟ ಬೇಕು ಎಂದಿದ್ದಾನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top