ಸಮಾಚಾರ

ಕರ್ನಾಟಕಕ್ಕೆ ಅಂತೂ ಇಂತೂ ಸಿಕ್ತು ಪ್ರತ್ಯೇಕ ನಾಡಧ್ವಜ: ಸಿಎಂ ಸಿದ್ದರಾಮಯ್ಯರಿಂದ ಅಧಿಕೃತ ಅನಾವರಣ

ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂದು ಇಚ್ಛಿಸಿದ್ದ ಕನ್ನಡಿಗರ ಕನಸು ಕೊನೆಗೂ ನನಸಾಗಿದ್ದು, ಇಂದು (ಗುರುವಾರ) ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕನ್ನಡನಾಡಿನ ನಾಡಧ್ವಜವನ್ನು ಅನಾವರಣಗೊಳಿಸಿದ್ದಾರೆ.

 

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ನೇತೃತ್ವದ ತಜ್ಞರ ಸಮಿತಿಯು ಈ ಧ್ವಜವನ್ನು ವಿನ್ಯಾಸಗೊಳಿಸಲಾಗಿದ್ದು ‘ಮೊದಲೇ ಇದ್ದ ಹಳದಿ ಕೆಂಪು ಬಣ್ಣಗಳ ಜೊತೆ ಬಿಳಿ ಬಣ್ಣವನ್ನೂ ಬಳಸಿಕೊಳ್ಳಲಾಗಿದ್ದು ಹಳದಿ, ಬಿಳಿ, ಕೆಂಪು ಬಣ್ಣದ ನಡುವೆ ಕರ್ನಾಟಕ ರಾಜ್ಯ ಸರ್ಕಾರದ ಲಾಂಛನವನ್ನು ಈ ನಾಡಧ್ವಜದಲ್ಲಿ ಮುದ್ರಿಸಲಾಗಿದೆ”

 

ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ನಾಡಧ್ವಜವನ್ನು ಅನಾವರಣಗೊಳಿಸಿದ್ದು ನಾಡಧ್ವಜ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರು, ರಾಜ್ಯ ಸಚಿವರು ಸೇರಿದಂತೆ ಪ್ರಮುಖ ಕನ್ನಡ ಸಾಹಿತಿಗಳು ಭಾಗವಹಿಸಿದ್ದರು. “ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಾಡಧ್ವಜ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದ್ದು ಈ ಧ್ವಜವನ್ನು ನಾಡಧ್ವಜವೆಂದು ಕೇಂದ್ರ ಸರಕಾರವೇ ಘೋಷಿಸಲಿದೆ” ಎಂದು ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top