ದೇವರು

ಕುಡಿತದ ಚಟ ಹತ್ತಿಸಿಕೊಂಡು ಎಷ್ಟೇ ಕಷ್ಟ ಪಟ್ಟರು ಬಿಡೋಕೆ ಆಗ್ತಿಲ್ಲ ಅನ್ನೋರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬಂದ್ರೆ ಜನ್ಮದಲ್ಲಿ ಎಣ್ಣೆ ಮತ್ತೆ ಮುಟ್ಟಲ್ಲ

ಕುಡಿತದ ಚಟ ಹತ್ತಿಸಿಕೊಂಡು ಅದನ್ನು ಬಿಡಲಾರದೆ ಬಹಳ ಕಷ್ಟ ಪಡುತ್ತಿದ್ದೀರಾ ಹಾಗಾದ್ರೆ ನೀವು ದೇವಸ್ಥಾನಕ್ಕೆ ಒಮ್ಮೆ ಹೋಗಿ ಬರಲೇಬೇಕು

 

ಶ್ರೀ ಕೃಷ್ಣನ ಅವತಾರವೇ ಆದ ಶ್ರೀ ಪಾಂಡುರಂಗಸ್ವಾಮಿ ಮಹತ್ವದ ಕಥೆಯನ್ನು ಕೇಳಿದರೇ ದುರ್ವ್ಯಸನ ಹಾಗೂ ರೋಗರುಜಿನಗಳಿಂದ ಬಳಲಿದವರಿಗೆ ಅನೇಕ ಪರಿಹಾರಗಳು ದೊರಕಿವೆ .

 

 

ಇನ್ನು ಕುಡಿತದ ಚಟವನ್ನು ಹೆಚ್ಚಾಗಿ ಹಚ್ಚಿಕೊಂಡು ಬಿಡಲಾರದೆ ನೊಂದು ಕಷ್ಟಪಡುತ್ತಿರುವವರಿಗೆ ಆಂಧ್ರಪ್ರದೇಶದ ಗುಂತಕಲ್ ನಲ್ಲಿರುವ ಪಾಂಡುರಂಗಸ್ವಾಮಿ ದೇವಾಲಯ ಒಂದು ವರವಾಗಿ ಪರಿಣಮಿಸಿದೆ

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬೊಮ್ಮನ ಮಹಲ್ ಎಂಬ ಸ್ಥಳದಲ್ಲಿ ಈ ಪಾಂಡುರಂಗ ಸ್ವಾಮಿಯ ದೇವಾಲಯವಿದೆ , ಅನೇಕ ಪವಾಡಗಳಿಂದ ಈ ಊರಿನಲ್ಲಿರುವ ಜನರನ್ನು ಮೂಕ ವಿಸ್ಮಿತ ಗೊಳಿಸುತ್ತಿದ್ದಾರೆ ಇಲ್ಲಿನ ಪಾಂಡುರಂಗಸ್ವಾಮಿ ಈ ಊರಿನಲ್ಲಿ ಇರುವವರೆಲ್ಲ ಪಾಂಡುರಂಗ ಸ್ವಾಮಿಯ ಭಕ್ತರು .

ಗುಂತಕಲ್ ನಲ್ಲಿರುವ ಊರಿನ ಮುಖ್ಯಸ್ಥರೊಬ್ಬರು ಪಾಂಡುರಂಗನ ಮೂಲಸ್ಥಳವಾದ ಪಂಡರಿ ಪುರಕ್ಕೆ ಹೋಗಿದ್ದರಂತೆ ಇದಾದ ನಂತರ ಅವರ ಕನಸಿನಲ್ಲಿ ಪಾಂಡುರಂಗ ಸ್ವಾಮಿಯ ದರ್ಶನವಾಯಿತಂತೆ ಇದಾದ ಬಳಿಕ ಅವರು ಸಂಕಲ್ಪ ಮಾಡಿ ಪಾಂಡುರಂಗ ಸ್ವಾಮಿಯ ದೇವಾಲಯವನ್ನು ತಮ್ಮ ಊರಿನಲ್ಲಿ ಕಟ್ಟಿಸಿದ್ದಾರೆ.

 

 

ಇನ್ನು ಕುಡಿತದ ಚಟವನ್ನು ಬಿಡುವುದಕ್ಕಾಗಿ ಪಾಂಡುರಂಗ ಸ್ವಾಮಿಯ ಮಾಲೆಯನ್ನು ಹಾಕಿಕೊಳ್ಳ ಬೇಕಂತೆ ಇದು ಸಹ ಯಾವಾಗೆಂದರೆ ಆವಾಗ ಹಾಕಿಕೊಳ್ಳಬಾರದು ತಿಂಗಳಿಗೆ ಕೇವಲ ಎರಡು ದಿನ ಮಾತ್ರ ಇದಕ್ಕೆ ಸೂಕ್ತ ಒಂದು ಶುಕ್ಲ ಏಕಾದಶಿ ಮತ್ತೊಂದು ಕೃಷ್ಣ ಏಕಾದಶಿ .

ಮಾಲೆ ಹಾಕಲು ಇಚ್ಛಿಸುವವರು ಹಿಂದಿನ ದಿನ ರಾತ್ರಿಯಿಂದಲೇ ದೇವರ ಧ್ಯಾನವನ್ನು ಮಾಡಬೇಕು ಮಾರನೆಯ ದಿನ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದಲ್ಲಿ ಸೇವಾ ಕಾಣಿಕೆಯನ್ನು ಕಟ್ಟಿ ದೇವಸ್ಥಾನದಲ್ಲಿ ಅರ್ಚಕರು ದೇವರ ಮುಂದೆ ಇರಿಸಿದ ಜಪಮಾಲೆಯನ್ನು ಭಕ್ತರಿಗೆ ನೀಡುತ್ತಾರೆ ಇದನ್ನು ಧರಿಸಿ ವ್ರತವನ್ನು ಸ್ವೀಕಾರ ಮಾಡಬೇಕು .

 

 

ಇನ್ನು ಮಾಲೆ ಹಾಕಿದ ನಂತರ ಅರ್ಚಕರು ಹೇಳುವ ಹಾಗೆ ವಿಧಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಆ ನಂತರ ಮೂರು ಏಕಾದಶಿಗಳು ತೀರಿದ ಮೇಲೆ ಮಾಲೆಯನ್ನು ಬಿಚ್ಚ ಬೇಕಾಗುತ್ತದೆ ವ್ರತದಲ್ಲಿ ಇರುವಾಗ ಪ್ರತಿ ಏಕಾದಶಿಗೆ ಗುಂತಕಲ್ ದೇವಸ್ಥಾನಕ್ಕೆ ಬಂದು ಪೂಜೆ ಮಾಡಬೇಕು ಹಾಗೂ ಅಲ್ಲಿಯೇ ನಿದ್ರೆ ಮಾಡಬೇಕು .

ಹೀಗೆ ವ್ರತವನ್ನು ಪೂರ್ತಿ ಮನಸ್ಸಿಂದ ಮಾಡಿದವರು ಮತ್ತೆ ಕುಡಿತದ ದಾಸರಾಗುವುದಿಲ್ಲವಂತೆ ಹಾಗೆ ಆದ ಉದಾಹರಣೆಗಳು ಇಲ್ಲ ಎಂದು ಇಲ್ಲಿನ ಅರ್ಚಕರು ಹೇಳುತ್ತಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top