ಸಿನಿಮಾ

ತಾಯಿ ಶ್ರೀದೇವಿ ಅಗಲಿದ ಕೆಲವೇ ದಿನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್

ಕೆಲ ದಿನಗಳ ಹಿಂದೆ ದುಬೈನಲ್ಲಿ ಸಾವನಪ್ಪಿದ ಪ್ರಖ್ಯಾತ ಬಾಲಿವುಡ್ ನಟಿ ಶ್ರೀದೇವಿ ಅವರಿಗೆ ಅಪಾರ ಅಭಿಮಾನಿ ಬಳಗ ಕಂಬನಿ ಮಿಡಿದಿತ್ತು. ಕುಟುಂಬದೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ ವಾಪಸು ಭಾರತಕ್ಕೆ ಮರಳಿದ್ದು ಮಾತ್ರ ಶವವಾಗಿ ಎಂಬುದು ಅತ್ಯಂತ ನೋವಿನ ಸಂಗತಿ. ಇವರ ಸಾವಿನ ನೋವಿಂದ ಇನ್ನು ಕುಟುಂಬದ ಜನ ಹೊರಬಂದಿಲ್ಲ.

 

 

ಶ್ರೀದೇವಿ ಸಾವನಪ್ಪಿದ 11 ನೆಯ ದಿನಕ್ಕೆ ಮಗಳ ಜಾಹ್ನವಿ ಕಪೂರ್ ಅವರ ಹುಟ್ಟುಹಬ್ಬ ಇತ್ತು. ಜಾಹ್ನವಿ ಕಪೂರ್ 21 ನೇ ವರ್ಷದ ಹುಟ್ಟುಹಬ್ಬವನ್ನು ತಾಯಿಯ ಅನುಪಸ್ಥಿತಿಯಲ್ಲಿ ಕುಟುಂಬಸ್ಥರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ತಾಯಿ ತೀರಿಕೊಂಡ ಕೆಲವೇ ದಿನಗಳಲ್ಲಿ ಹುಟ್ಟುಹಬ್ಬವ ಆಚರಣೆ ಮಾಡಿಕೊಂಡ ಜಾಹ್ನವಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಗಳು ಶುರು ಆಗಿವೆ ಅಂತೆ. ತಾಯಿ ಸಾವನಪ್ಪಿದ ದುಃಖ ನಿಮಗೆ ಇಲ್ಲವೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಜನರು ಕೇಳಲು ಪ್ರಾರಂಭ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿರುವ ಯಾವ ಪ್ರಶ್ನೆಗಳಿಗೆ ಕುಟುಂಬವರು ಉತ್ತರವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಜಾಹ್ನವಿ ಅವರು ಹುಟ್ಟುಹಬ್ಬದಂದು ಸರಳ ಉಡುಗೆಯಲ್ಲಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅವರ ಜೊತೆ ಕಾಲ ಕಳೆದಿದ್ದರು, ಆದರೆ ಈ ವಿಷಯ ಟ್ರೊಲ್ ಮಾಡುವವರಿಗೆ ತಿಳಿದಿಲ್ಲ ಎಂದು ಕಾಣಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top