ಭವಿಷ್ಯ

ಧನಸ್ಸು ರಾಶಿಯಲ್ಲಿ ಕುಜ ಮತ್ತು ಶನಿ ಗ್ರಹ ಜೊತೆಯಾಗಿ ಇಂದಿನಿಂದ ಎರಡೂವರೆ ತಿಂಗಳು ಸ್ಥಿತರಿರುತ್ತಾರೆ ಇದರಿಂದ ಯಾವ ರಾಶಿಗೆ ಏನು ಲಾಭ, ಏನು ನಷ್ಟ

ಇಂದಿನಿಂದ  ಅಂದರೆ ಮಾರ್ಚ 8 ನೇ ತಾರೀಖಿನಿಂದ ಗ್ರಹ ಗತಿಗಳಲ್ಲಿ ಆಗುತ್ತದೆ ಭಾರಿ ಬದಲಾವಣೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಲಿದೆ. ಹಣಕಾಸಿನ ವಿಷಯದಲ್ಲಿ ಕಷ್ಟ ನಷ್ಟ ಉಂಟಾಗಲಿದೆ . ಗ್ರಹಗಳ ಸ್ಥಾನ ಪಲ್ಲಟದಿಂದ ಯಾರಿಗೆ ಕಾದಿದೆ ಗಂಡಾಂತರ ? ಯಾವ್ಯಾವ ರಾಶಿಗಳ ಮೇಲೆ ಕೆಂಗಣ್ಣು ಬೀರಲಿದ್ದಾನೆ  ಶನಿದೇವ ? ಇದಕ್ಕೆ ಕಾರಣ  ಕುಜ ,ಶನಿ ಧನುಸ್ಸು ರಾಶಿಯಲ್ಲಿ  ಸಂಧಿಯಾಗಲಿದ್ದಾರೆ.  ಕಟಕ, ಮಿಥುನ, ಮಕರ ಸೇರಿದಂತೆ ಇನ್ನೂ ಕೆಲವೊಂದು ರಾಶಿಗಳಿಗೆ ಈ ಒಂದು ಸಂಯೋಗದಿಂದ ಕಂಟಕ ಎದುರಾಗಲಿದೆ. ಗ್ರಹಗಳ ಬದಲಾವಣೆ ದೇಶದ ಮೇಲೂ ಪ್ರಭಾವ ಬೀರುತ್ತದೆ ಅಂತ ಹೇಳಲಾಗುತ್ತದೆ. ದೇಶ, ವಿದೇಶಗಳ ನಡುವಿನ ವೈಷಮ್ಯ ಮತ್ತಷ್ಟು ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲೂ ಸಾಕಷ್ಟು ಏಳು ಬೀಳುಗಳಿದ್ದು, ಕೆಲವೊಂದು ರಾಜಕೀಯ ನಾಯಕರಿಗೆ ಭಾರೀ ತೊಂದರೆಯಾಗಲಿದೆ ಎಂದು  ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಯಾವ ರಾಷ್ಟ್ರ, ಕ್ಷೇತ್ರಗಳಿಗೆ ಇದರಿಂದ ಭಾರಿ ತೊಂದರೆಯಾಗುತ್ತದೆ. ಈ ಕಂಟಕದಿಂದ ಪಾರಾಗೋಕೆ ಏನು ಮಾಡ್ಬೇಕು ? ಯಾವೆಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

 

 

ಈ ಧನಸ್ಸು ರಾಶಿಗೆ ಕುಜನ ವಿಶೇಷವಾದ  ಸಂಚಾರದಿಂದಾಗಿ ಕುಜ ಮತ್ತು  ಶನಿ ಧನಸ್ಸು ರಾಶಿಯಲ್ಲಿ ಎರಡೂವರೆ ತಿಂಗಳವರೆಗೂ ಸ್ಥಿತನಿರಲಿದ್ದಾನೆ. ನಿಮ್ಮ ಗ್ರಹಗತಿಗೆ ಅನುಸಾರವಾಗಿ ಪ್ರಪಂಚದ ಆಗುಹೋಗುಗಳ ಮೇಲೆಯೂ ಪ್ರಭಾವ ಬೀರಲಿದೆ. ಗ್ರಹಗಳಲ್ಲಿ  ಒಂಬತ್ತು ಗ್ರಹಗಳಿವೆ, ಆವು ಏಳು ಗ್ರಹಗಳು ಮತ್ತು  ಎರಡು ಛಾಯಾ ಗ್ರಹಗಳು. ಈ ಬದಲಾವಣೆ ಇನ್ನು ಎರಡೂವರೆ ತಿಂಗಳು  ಸ್ಥಿತನಾಗಿರುತ್ತಾನೆ. ಆ ಎರಡೂವರೆ ತಿಂಗಳು ಏನು ಮಾಡುತ್ತವೆ ? ವಿಶೇಷವಾಗಿ ಸಾಕಷ್ಟು ಪ್ರಾಣ ಹಾನಿಯನ್ನು ಮಾಡುತ್ತವೆ. ದೇಶದಾದ್ಯಂತ ಸಾಕಷ್ಟು ಬದಲಾವಣೆಗಳ ಕಂಡು ಬರಲಿದೆ. ಹಾಗಾಗಿ ಗಾಳಿ, ನೀರು  ಪಂಚ ಭೂತಗಳಲ್ಲಿ ಏರುಪೇರಾಗಲಿದೆ , ಎಷ್ಟೋ ಕಡೆ ಮನು  ಸಂಕುಲಕ್ಕೆ ಇದು ತುಂಬಾ ಕೆಟ್ಟ ಪರಿಣಾಮವನ್ನು ಬೀರಲಿದೆ.

ಶನಿ ಗ್ರಹಕ್ಕಿಂತ ಹೆಚ್ಚು ಕ್ರೂರ ಗ್ರಹ ಕುಜ ಗ್ರಹ ಅತ್ಯಂತ ಕ್ರೂರ ಗ್ರಹ , ಅಂದರೆ ಅದರ ಪರಿಣಾಮಗಳು ಸ್ವಲ್ಪ ಕಠಿಣವಾಗಿರುತ್ತವೆ. ಆ ಗ್ರಹ ಅವರವರ ಒಂದು ಕರ್ಮದ ಅನುಸಾರವಾಗಿ ಫಲಗಳನ್ನು ನೀಡುವಂಥವನು. ಕುಜಗ್ರಹದ   ದೋಷಗಳಿದ್ದಾಗ ವಿವಾಹದಲ್ಲಿ ಆಡೆತಡೆಗಳು  ,ಮಕ್ಕಳಾಗುವುದಕ್ಕೆ ದೋಷಗಳು ,ಕುಟುಂಬದಲ್ಲಿ ಕಲಹಗಳು. ನಾನಾ ರೀತಿಯ   ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಲಿವೆ.  ಭೂಮಿಗೆ ಸಂಬಂಧಪಟ್ಟಂತಹ  ಭೂಮಿ ದೋಷಗಳ.  ಶನಿಯ ಜೊತೆ ಕುಜ  ಸೇರಿಕೊಂಡಾಗ ಅಲ್ಲೂ ಸಹ ಕ್ರೂರ  ಗ್ರಹ ಆಗಿರುವಂಥ ಕುತಂತ್ರಿ ಸೇರಿಕೊಂಡಾಗ, ನಾನಾ  ವ್ಯತ್ಯಾಸಗಳನ್ನು ಉಂಟು ಮಾಡುತ್ತವೆ. ಶನಿ ಮತ್ತು ಕುಜ  ಎಲ್ಲ ದುರಾಸೆಗಳನ್ನು  ನಾಶಪಡಿಸುತ್ತಾನೆ. ರಾಜಕೀಯದಲ್ಲಿ ಏರುಪೇರುಗಳನ್ನು ಕಾಣಲಿದ್ದೀರಿ.ಕುಜ ಗ್ರಹ ವೃಶ್ಚಿಕ ರಾಶಿಯಿಂದ ಗುರು ಅಧಿಪತಿಯಾಗಿರುವ  ಧನಸ್ಸು ರಾಶಿಗೆ   ಬರುತ್ತಿದ್ದಾನೆ. ಈ ದಿನದಿಂದ ಸುಮಾರು ರಾಶಿಗಳಿಗೆ ವ್ಯತ್ಯಾಸಗಳಾಗುತ್ತವೆ.

 

ಮೇಷ (Mesha)

 

ಮೇಷ ರಾಶಿಗೆ  ತುಂಬಾ ಅನುಕೂಲತೆಗಳು, ಅವರು ಕೈಬಿಟ್ಟಂತಹ ಕೆಲಸಗಳೆಲ್ಲವೂ ಸಹ ಮುಟ್ಟಿದೆಲ್ಲ ಚಿನ್ನವಾಗುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

 

ವೃಷಭ (Vrushabha)

ಹಣಕಾಸಿನ ಖರ್ಚು ಹೆಚ್ಚಾಗುವುದು, ಮನೆಯಲ್ಲಿ ಪತ್ನಿಗೆ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು. ಎಚ್ಚರಿಕೆ ವಹಿಸಿ ಶಿವನ ಆರಾಧನೆ ಮಾಡುವ.

 

ಮಿಥುನ (Mithuna)

ಕುಜ ,ಶನಿ ದೋಷದಿಂದ ಕೌಟುಂಬಿಕ ಕಲಹ ಉಂಟಾಗುವುದು.ಮದುವೆಗಳು ಮುರಿದು ಬೀಳುವ ಸಾಧ್ಯತೆ ಹೆಚ್ಚು ಉದ್ಯೋಗದಲ್ಲಿ ತಂದರು ಈ ವಿಷಯದಲ್ಲಿ ಎಚ್ಚರವಾದರೆ, ಶಿವನ ಪೂಜೆ ಮಾಡಿ ಶಿವ ಪಾರ್ವತಿ ಗಣೇಶ ಸುಬ್ರಹ್ಮಣ್ಯ ದೇವರ ಮತ್ತು ದುರ್ಗಾ ದೇವಿಯ  ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ .

 

ಕರ್ಕ (Karka)

ಶನಿದೋಷದಿಂದ ಕೌಟುಂಬಿಕ ಕಲಹ ಸಂಭವಿಸಬಹುದು. ಮದುವೆಗಳು ಮುರಿದು ಬೀಳಬಹುದು ಸಾಧ್ಯತೆ ಹೆಚ್ಚು, ಉದ್ಯೋಗದಲ್ಲಿ ತೊಂದರೆ ಈ ವಿಷಯದಲ್ಲಿ ಎಚ್ಚರವಾಗಿರಿ. ದುರ್ಗಾದೇವಿಯನ್ನು ಆರಾಧನೆ ಮಾಡಿ.

 

ಸಿಂಹ (Simha)

ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಮಕ್ಕಳ ಜೊತೆ ಹೆಚ್ಚು ವಾದ ಮಾಡಬೇಡಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ.

 

ಕನ್ಯಾರಾಶಿ (Kanya)

ವಾಹನದಲ್ಲಿ ಅಪಘಾತವಾಗುವ ಸಾಧ್ಯತೆಗಳು ಹೆಚ್ಚಿವೆ. ದುರಂಹಕಾರದಿಂದ  ಮೆರೆಯಲು ಹೋದರೆ ತುಂಬಾ ತೊಂದರೆ ಪಡಬೇಕಾಗುತ್ತದೆ. ಹಾಗಾಗಿ ಒಳ್ಳೆಯ ನಡವಳಿಕೆಯಿಂದ ಇದ್ದರೆ ಎಲ್ಲವೂ ಶುಭವಾಗಲಿದೆ.

 

ತುಲಾ (Tula)

ಕುಜ ಮತ್ತು ಶನಿ ಗ್ರಹದ ಸಂಧಿಯ ಪ್ರಭಾವದಿಂದ ಭೂಮಿ ವಿಚಾರದಲ್ಲಿ ತೊಂದರೆ ಗಲಾಟೆ ಮಾಡಿಕೊಂಡು ಕೋರ್ಟ್ ಕಚೇರಿಯೆಂದು ಆಲೆಯ ಬೇಕಾಗಬಹುದು. ದೇವಿಯ ಆರಾಧನೆ ಮಾಡಿ ನಿಮ್ಮ ಕುಟುಂಬದವರ ಜೊತೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿ.

 

ವೃಶ್ಚಿಕ (Vrushchika)

ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಭೂಮಿಯನ್ನು ಕಳೆದುಕೊಳ್ಳಬಹುದು . ತೊಗರಿ ಬೇಳೆ ಪ್ರಸಾದವನ್ನು  ಹಂಚುತ್ತಾ ಬನ್ನಿ .

 

ಧನು ರಾಶಿ (Dhanu)

ಕೋಪ ಅಹಂಕಾರ ಇವುಗಳಿಂದ ಧನನಷ್ಟ, ಮಾನನಷ್ಟ, ಆರೋಗ್ಯದಲ್ಲಿ ತೊಂದರೆ. ಯೋಚಿಸಿ ತಾಳ್ಮೆಯಿಂದ ವ್ಯವಹಾರ ಮಾಡುವುದು ಉತ್ತಮ .

 

ಮಕರ (Makara)

ಅತಿಯಾದ ನಷ್ಟ ಎದುರಾಗಬಹುದು. ಅವಮಾನ ,ಅಪಮಾನ ಅನುಭವಿಸ ಬೇಕಾಗಬಹುದು. ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ . ಅಪಘಾತ ಆರೋಗ್ಯದಲ್ಲಿ ಕಿರುತೆರೆ. ಹಾಗಾಗಿ ತಾಳ್ಮೆಯಿಂದ ಯೋಚಿಸಿ ಕೆಲಸವನ್ನು ಮುಂದುವರೆಸಿ.

 

ಕುಂಭರಾಶಿ (Kumbha)

ತುಂಬಾ ಚೆನ್ನಾಗಿದೆ, ಮದುವೆ ವಿಷಯದಲ್ಲಿ ಶುಭವಾಗಲಿದೆ. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಅಧಿಕವಾಗಿದೆ. ಕೈಹಾಕಿದ ಕೆಲಸದಲ್ಲಿ  ಲಾಭ ಸಿಗುವುದು .

 

ಮೀನರಾಶಿ (Meena)

 

 

 

ಮಾಡುವಂತಹ ಕೆಲಸದಲ್ಲಿ ಅಸಮಾಧಾನ, ಹಣಕಾಸಿನ ವಿಚಾರದಲ್ಲಿ ನಷ್ಟ, ಯಾವುದೇ ಕೆಲಸ ಮಾಡುವ ಮುಂಚೆ ಯೋಚಿಸಿ ನಿರ್ಧಾರ ಮಾಡಿ ,ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತೀರಿ.

 

ಪರಿಹಾರ.

ಪ್ರತಿಯೊಂದು ರಾಶಿಯವರು ಶಿವನ ಆರಾಧನೆ ಮಾಡಿ, ಶಿವ, ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಮತ್ತು ನಿಮ್ಮ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top