ಮನೋರಂಜನೆ

ರಿಷಿಕುಮಾರ ಸ್ವಾಮಿಗೆ ಬೆಂಡೆತ್ತಿದ ಪವರ್ ಸ್ಟಾರ್ ಅಭಿಮಾನಿಗಳು!

ಕಾಳಿ ಮಠದ ಸ್ವಾಮೀಜಿ ರಿಷಿಕುಮಾರ ಅವರು ಕೆಲ ದಿನಗಳ ಹಿಂದೆ ಪುನೀತ್ ರಾಜಕುಮಾರ್ ನಟಿಸಿದ್ದ ಖಾಸಗಿ ಕಂಪನಿಯ ಜಾಹಿರಾತಿನ ವಿರುದ್ಧ ತಿರುಗಿಬಿದ್ದಿದ್ದರು…ಜಾಹಿರಾತಿನಲ್ಲಿ ಕೆಂಪೇಗೌಡರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಋಷಿಕುಮಾರ ಸ್ವಾಮಿ ಜಾಹಿರಾತನ್ನು ಹಿಂಪಡೆಯುವಂತೆ ಕೋರ್ಟ್ ಮೆಟ್ಟಿಲೇರಿ ಒಂದುವೇಳೆ ಜಾಹಿರಾತನ್ನು ಹಿಂಪಡೆಯದಿದ್ದರೆ ಉಗ್ರಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು..

 

 

“ಈ ಜಾಹಿರಾತಿಗೆ ಕನ್ನಡಿಗರ ವಿರೋಧವಾಗಬಾರದು ಎಂದು ಪುನೀತ್ ರಾಜಕುಮಾರ್ ಅವರನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದಾರೆ. ಪುನೀತ್ ಅವರಿಗೆ ಇಂತಹ ಸೂಕ್ಷ್ಮ ಸಂಗತಿ ಅರ್ಥವಾಗದೆ ಹೋದದ್ದು ನಿಜಕ್ಕೂ ದುಃಖದ ಸಂಗತಿ ” ಎಂದು ಕಾಳಿ ಸ್ವಾಮಿ ಹೇಳಿದ್ದರು. ಸ್ವಾಮಿಯ ಈ ಮಾತಿಗೆ ಕೆರಳಿರುವ ಪುನೀತ್ ಅಭಿಮಾನಿಗಳು ಸ್ವಾಮಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಯದ್ವಾ ತದ್ವಾ ತರಾಟೆಗೆ ತೆಗೆದುಕೊಂಡಿದ್ದಾರೆ.ಇನ್ನೂ ಕೆಲವರು ರಿಷಿ ಕುಮಾರ ಸ್ವಾಮಿಜಿ ಅವರಿಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಪುನೀತ್ ರಾಜಕುಮಾರ್ ಬಳಿ ಕ್ಷಮೆ ಕೇಳುವಂತೆ ಕೆಲವು ಅಭಿಮಾನಿಗಳು ಆಗ್ರಹಿಸಿದ್ದಾರೆ.

 

 

ಅಭಿಮಾನಿಗಳು ಮೇಲಿಂದ ಮೇಲೆ ಫೋನ್ ಮಾಡಲು ಶುರುವಿಟ್ಟ ಬಳಿಕ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ರಿಷಿ ಕುಮಾರ ಸ್ವಾಮಿ “ನನ್ನ ಬೇಸರ ಪುನೀತ್ ಮೇಲೆ ಅಲ್ಲ, ನಾನು ಪುನೀತ್ ಅವರ ದೊಡ್ಡ ಅಭಿಮಾನಿ.. ನನ್ನ ಕೋಪವಿರುವುದು ಕೆಂಪೇಗೌಡರನ್ನು ದುರುಪಯೋಗಮಾಡಿಕೊಂಡಿರುವ ಪೋತಿಸ್ ಮಾಲೀಕರ ಮೇಲೆ.. ನನ್ನ ಮಾತನ್ನು ಪುನೀತ್ ಅಭಿಮಾನಿಗಳು ತಪ್ಪಾಗಿ ಅರ್ಥೈಸಿಕೊಳ್ಳಬಾರದು” ಎಂದಿದ್ದಾರೆ.

 

 

ದಕ್ಷಿಣ ಭಾರತದ ಹೆಸರಾಂತ ವಸ್ತ್ರ ಮಾರಾಟ ಸಂಸ್ಥೆ ಪೋತೀಸ್​ ಸಂಸ್ಥೆ ಮಾಡಿದ್ದ ಈ ಜಾಹಿರಾತು “ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ನಗರಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನೂ ವ್ಯವಸ್ಥೆ ಮಾಡಿದ್ದರು ಆದರೆ ತನ್ನ ರಾಣಿಗೆ ಇಷ್ಟವಾಗುವಂತಹ ಉತ್ತಮ ವಸ್ತ್ರಗಳ ಮಳಿಗೆಯನ್ನು ಮಾತ್ರ ಕಟ್ಟಿಸಲಾಗಲಿಲ್ಲ. ನಂತರ ಪೋತಿಸ್ ಸಂಸ್ಥೆಯವರು ವಸ್ತ್ರಗಳ ಮಾರಾಟ ಮಳಿಗೆಯನ್ನು ನೀಗಿಸಿ ಆ ಕೊರತೆಯನ್ನು ನೀಗಿಸಿ ರಾಜ ರಾಣಿಯರನ್ನು ಸಂತೋಷ ಪಡಿಸಿದರು” ಎಂಬ ಸಾರಂಶ ಹೊಂದಿತ್ತು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top