ಮನೋರಂಜನೆ

ಮಾಸ್ತಿಗುಡಿ ಸುಂದರ್ ಮ್ಯಾರೇಜ್ ಸ್ಟೋರಿ: ದುನಿಯಾ ವಿಜಿ ಏನಂದ್ರು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಸಿನಿಮೀಯ ಮಾದರಿಯಲ್ಲಿಯೇ ಮದುವೆಯಾಗಿದ್ದಾರೆ. ಮಾಯಕೊಂಡ ಶಾಸಕ  ಶಿವಮೂರ್ತಿ ನಾಯ್ಕ್  ಪುತ್ರಿ ಲಕ್ಷ್ಮಿ ನಾಯಕ್ ಮಿಸ್ಸಿಂಗ್ ಕೇಸ್ ಕೂಡಾ ಈ ಮೂಲಕ ಶುಭ ಅಂತ್ಯವನ್ನೇ ಕಂಡಿದೆ.

 

 

ಶಾಸಕರ ಮಗಳು ನಾಪತ್ತೆಯಾಗಿರೋ ವಿಚಾರ ಅವರ ಆಪ್ತ ವಲಯವನ್ನು ದಾಟಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ತಿಳಿದ ಮೇಲಂತೂ ನಾನಾ ದಿಕ್ಕಿನಲ್ಲಿ ಅನುಮಾನಗಳು ಮೂಡಿಕೊಂಡಿದ್ದವು. ಆದರೀಗ ಶಾಸಕರ ಮಗಳು ಲಕ್ಷ್ಮಿ ನಾಯಕ್ ಮಿಸಸ್ ಸುಂದರ್ ಗೌಡ ಆಗಿ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ನಗೆ ಬೀರಿದ್ದಾರೆ. ಈ ಮೂಲಕ ಥರ ಥರದಲ್ಲಿ ಹೊಗೆಯಾಡಿದ್ದ ರೂಮರ್, ಗುಮಾನಿಗಳಿಗೆಲ್ಲ ಕೊನೆ ಸಿಕ್ಕಿದೆ.

ಅಷ್ಟಕ್ಕೂ ಸುಂದರ್ ಗೌಡ ಹುಡುಗಿಯೊಂದಿಇಗೆ ಪರಾರಿಯಾಗಿ ನಿಗೂಢವಾಗಿ ಮದುವೆಯಾಗೋ ಜರೂರತ್ತೇನಿತ್ತೆಂಬ ಪ್ರಶ್ನೆ ಕಾಡೋದು ಸಹಜ. ಈ ನಿಟ್ಟಿನಲ್ಲಿ ನೋಡ ಹೋದರೆ ಸುಂದರವಾದೊಂದು ಪ್ರೇಮ ಕಾವ್ಯ ಅರಳಿಕೊಳ್ಳುತ್ತದೆ. ಸುಂದರ್ ಗೌಡ ಮತ್ತು ಲಕ್ಷ್ಮಿ ನಡುವೆ ವರ್ಷಾಂತರಗಳಿಂದಲೂ ಪ್ರೀತಿಯಿತ್ತು. ಆದರೆ ಅದ್ಯಾವ ಕಾರಣಕ್ಕೋ, ಶಾಸಕರಿಗೆ ತನ್ನ ಮಗಳು ಸುಂದರ್ ಜೊತೆ ಮದುವೆಯಾಗೋದು ಸುತಾರಾಂ ಇಷ್ಟವಿರಲಿಲ್ಲವಂತೆ. ಈ ಬಗ್ಗೆ ಕನ್ವಿನ್ಸ್ ಮಾಡುವ ಎಲ್ಲ ಪ್ರಯತ್ನಗಳೂ ವಿಫಲವಾದಾಗ ಈ ಜೋಡಿ ಓಡಿ ಹೋಗಿ ಮದುವೆಯಾಗೋ ನಿರ್ಧಾರಕ್ಕೆ ಬಂದಿತ್ತು.

 

 

ಸುಂದರ್ ಗೌಡ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇತ್ತಂತೆ. ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ರೂಸ್ಟ್ ಹೋಟೆಲಿನ ನಾಲ್ಕು ಕೋಣೆಗಳಲ್ಲಿ ಸುಂದರ್ ಗೌಡ ಸಂಬಂಧಿಕರು ಉಳಿದುಕೊಂಡಿದ್ದರು. ಅವರೆಲ್ಲರ ಸಮ್ಮುಖದಲ್ಲಿಯೇ ಸುಂದರ್ ಮತ್ತು ಲಕ್ಷ್ಮಿ ನಾಯಕ್ ಚಾಮುಂಡೇಶ್ವರಿ ಸನ್ನಿಧಾನದ ತಪ್ಪಲಿನಲ್ಲಿರುವ ದೇವಸ್ಥಾನವೊಂದರಲ್ಲಿ ಸಪ್ತಪದಿ ತುಳಿದಿದ್ದಾರೆ.

ಸುಂದರ್ ಗೌಡ ಶಾಸಕರ ಮಗಳ ಜೊತೆ ಓಡಿ ಹೋಗಿದ್ದಾರೆಂಬ ಸುದ್ದಿ ಹಬ್ಬಿಕೊಂಡಿತ್ತಲ್ಲಾ? ಆಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಸುಂದರ್ ಗೆಳೆಯ ದುನಿಯಾ ವಿಜಿ. `ಅವರಿಬ್ಬರೂ ಮದುವೆ ವಯಸಿಗೆ ಬಂದಿರುವವರು. ಅವರಿಗೆ ಓಡಿ ಹೋಗೋ ಅವಶ್ಯಕತೆ ಏನಿದೆ ಎಂಬರ್ಥದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದರು. ದುನಿಯಾ ವಿಜಿ ಕೂಡಾ ಗೆಳೆಯನ ಲವ್ವಿಗೆ ಸಹಾಯ ಮಾಡಿದ್ದಾರಾ? ಅವರಿಗೆ ಮಾಹಿತಿ ಇಲ್ಲದೆ ಇಷ್ಟೆಲ್ಲ ನಡೆಯಲು ಸಾಧ್ಯವಾ ಎಂಬ ಪ್ರಶ್ನೆ ಸಹಜವೇ. ಇದೆಲ್ಲ ಏನೇ ಇದ್ದರೂ ಸುಂದರ್ ಗೌಡ ಒಂದು ಸಂಗ್ರಾಮವನ್ನೇ ನಡೆಸಿ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದಾರೆ. ಅವರ ದಾಂಪತ್ಯ ಜೀವನ ಸುಖಮಯವಾಗಿರಲೆಂದು ಹಾರೈಸೋಣ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top