ಸಿನಿಮಾ

47 ವರ್ಷಗಳ ಹಿಂದಿನ ಲೈಂಗಿಕ ದೌರ್ಜನ್ಯಕ್ಕೆ ನಟ ಜಿತೇಂದ್ರ ಮೇಲೆ ಮಹಿಳೆಯಿಂದ ಕೇಸ್

ಬಾಲಿವುಡ್ ಚಿತ್ರರಂಗದ ಹಿರಿಯ ನಟರಾಗಿರುವ ಜೀತೇಂದ್ರ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಹತ್ತಿರದ ಸಂಬಂಧಿಯೊಬ್ಬರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸುಮಾರು 47 ವರ್ಷಗಳ ಹಿಂದೆ ತಮಗೆ ಲೈಂಗಿಕ ಕಿರುಕುಳವನ್ನು ನೀಡಿದ್ದಾರೆಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

 

 

 

ಮಹಿಳೆಗೆ 18 ವರ್ಷ ವಯಸಾಗಿದ್ದಾಗ 28 ವರ್ಷದ ವಯಸಾಗಿದ್ದ ಜಿತೇಂದ್ರ ಲೈಂಗಿಕ ಕಿರುಕುಳವನ್ನು ನೀಡಿದ ಎಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆಯ ದೂರಿನ ಪ್ರಕಾರ ಐಪಿಸಿ ಸೆಕ್ಷನ್‌ 354 ರ ಅಡಿಯಲ್ಲಿ ನಟ ಜಿತೇಂದ್ರ ವಿರುದ್ಧ ಚೋಟಾ ಸಿಮ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿಕೊಂಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಉಮಾಪತಿ ತಿಳಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಸಿನಿಮಾ ಶೂಟಿಂಗ್ ಗಾಗಿ ಬಾಲಿವುಡ್ ನಟ ಜಿತೇಂದ್ರ ಮಹಿಳೆಯನ್ನು ತಂದೆಯ ಒಪ್ಪಿಗೆಯೊಂದಿಗೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಸಾಕ್ಷಾಧಾರಗಳನ್ನು ಕೊಡುವಂತೆ ದೂರುದಾರರನ್ನು ಪೊಲೀಸ್ ಅಧಿಕಾರಿಗಳು ಕೇಳಿ ಕೊಂಡಿದ್ದು, ಘಟನೆ ನಡೆದ ಹೋಟೆಲಿನ ಹೆಸಲು ಸೇರಿದಂತೆ ಯಾವುದೇ ಮಹತ್ತರ ಸಾಕ್ಷಾಧಾರಗಳನ್ನು ಸಂತ್ರಸ್ತ ಮಹಿಳೆ ಕೊಟ್ಟಿಲ್ಲ ಎಂದು ಪೊಲೀಸ್ ಅಧಿಕಾರಿ ಉಮಾಪತಿ ಖಚಿತಪಡಿಸಿದ್ದಾರೆ.

 

 

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ಕ್ಷೇತ್ರದಲ್ಲಿ ಹೆಚ್ಚಳವಾಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಖಂಡಿಸಿ #MeToo ಎಂಬ ಅಭಿಯಾನ ಪ್ರಾರಂಭವಾಗಿದೆ. ಇದರ ಭಾಗವಾಗಿ ಮಹಿಳೆಯೊಬ್ಬರು ಈಗ ದೂರನ್ನು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಆರೋಪವನ್ನು ನಟ ಜಿತೇಂದ್ರ ಪರ ವಕೀಲರು ತಳ್ಳಿ ಹಾಕಿದ್ದಾರೆ, ಇದೊಂದು ಆಧಾರರಹಿತ ಸುಳ್ಳು ಆರೋಪ ಎಂದು ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top