ಇಲ್ಲಿದೆ ನೋಡಿ ಅವಳಿ ಹಳ್ಳಿ .
ಕೋಡಿನ್ಹಿ ಎಂಬುದು ಮಲಪ್ಪುರಂ , ಕೇರಳ ದ ಒಂದು ಚಿಕ್ಕ ಹಳ್ಳಿ . ಈ ಹಳ್ಳಿಯೂ “ಮಲಪ್ಪುರಂ ” ಅಥವ ಅವಳಿ ಹಳ್ಳಿ ಎಂದೇ ಪ್ರಸಿದ್ದಿ . ಏಕೆ ಎನ್ನುತೀರಾ? ಈ ಹಳ್ಳಿಯಲ್ಲಿರುವುದೇ 2000 ಮಂದಿ , ಅದ್ರಲ್ಲಿ 204 ಅವಳಿ ಜವಳಿ ಮಕ್ಕಳ ಜೋಡಿಗಳಿವೆ . ಈ ಸಂಖ್ಯೆಯ ಅವಳಿಗಳು ಜಗತ್ತಿನಲ್ಲಿ ಬಹಳ ಅಪರೂಪ.
ಇಲ್ಲಿ ವರ್ಷಕ್ಕೆ ಸರಿ ಸುಮಾರು 15 ಅವಳಿ ಜವಳಿ ಮಕ್ಕಳು ಹುಟ್ಟುತ್ತಾರೆ . ಇಲ್ಲಿ ಪ್ರತಿ 1000 ಜನನಕ್ಕೆ 45 ಅವಳಿ ಜವಳಿ ಆಗುತ್ತವೆ. ಪ್ರಪಂಚದ ಬೇರೆ ಕಡೆ ಇದರ ಸಂಖ್ಯೆ 4. ಇದು ಸಂಶೋದನಕಾರರ ಕುತೂಹಲಕ್ಕೆ ಕಾರಣವಾಗಿದೆ , ಆದರೂ ಉತ್ತರ ದೊರಕ್ಕಿಲ್ಲ.
ಈ ಹಳ್ಳಿಯವರ ಪ್ರಕಾರ ಇದು ಈ ರೀತಿಯ ಅವಳಿ ಜವಳಿ ಮಕ್ಕಳ ಜನನ ಶುರು ಆಗಿದ್ದು 1949ರಲ್ಲಿ . ಈ ಹಳ್ಳಿಯ ಹೆಣ್ಣು ಮಗಳು ಬೇರೆಯವರನ್ನು ಮದುವೆಯಾದರು , ಇಲ್ಲಿನ ಗಂಡು ಮಕ್ಕಳು ಬೇರೆ ಕಡೆಯ ಹುಡುಗಿಯನ್ನು ಮದುವೆಯಾದರು ಸಹ ಅವಳಿ ಜವಳಿ ಮಕ್ಕಳ ಜನನದ ಸಂಖ್ಯೆ ಕಮ್ಮಿ ಆಗಿಲ್ಲ.
ಎಷ್ಟೋ ಡಾಕ್ಟರ್ ಗಳು ಇಲ್ಲಿಗೆ ಸಂಶೋಧನೆಗೆ ಎಂದು ಬಂದು ಕಾಲಿ ಕೈಯಲ್ಲಿ ವಾಪಸ್ಸಾಗಿದ್ದಾರೆ . ಇಲ್ಲಿನ ಅವಳಿ ಜವಳಿ ಜನನದ ಸಂಖ್ಯೆ ಜಗತ್ತಿನ ಬೇರೆ ಕಡೆಗಿಂತ 6 ಪಟ್ಟು ಜಾಸ್ತಿ .
ಕೆಲವರ ಪ್ರಕಾರ ಇಲ್ಲಿನ ನೀರಿನಲ್ಲಿ ಯಾವುದೋ ರಾಸಾಯಿನಿಕ ಪದಾರ್ಥ ಸೇರಿದೆ , ಅದು ಇದಕ್ಕೆಲ್ಲ ಕಾರಣ ಎಂದು. ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ಪ್ರಕೃತಿಯೇ ಹಾಗೆ , ನಿಗುಡತೆಗಳ ಸಾಗರ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
