ಕನ್ನಡ

ರಾಜಕುಮಾರ್ ರವರು “ಅಭಿಮಾನಿ ದೇವರುಗಳೇ” ಅಂದದ್ದು , ಬಂಗಾರಪ್ಪನವರು ಹಾಡಿದ ಎಮ್ಮೆ ಹಾಡಿನ ಹಿಂದೆ ಇದೆ ಒಂದು ಸ್ವಾರಸ್ಯಕರ ಸಂಗತಿ ಓದಿ ಮತ್ತು ತಿಳಿಯಿರಿ …

ಉಸ್ತುವಾರಿ ಮುಖ್ಯಮಂತ್ರಿಗಳಾಗಿದ್ದ ಶ್ರೀಯುತ ಬಂಗಾರಪ್ಪನವರಿಗೆ ಭಾರತ ರತ್ನ ಮಾದರಿಯಲ್ಲಿ

 

 

‘ಕರ್ನಾಟಕ ರತ್ನ” ಪ್ರಶಸ್ತಿ

ನೀಡಬೇಕೆಂಬ ಮಹದಾಸೆ ಉಂಟಾಗಿ ಇದೆ ಆಲೋಚನೆಗೆ ಚಾಲನೆಯನ್ನು ಸಹ ನೀಡಿದ್ದರು.

ಅಂದು 1992 ನೇ ನವೆಂಬರ್ ಮೂರನೇ ವಾರ ವಿಧಾನ ಸೌಧದ ಮುಂಭಾಗದಲ್ಲಿ ರಾಜಕುಮಾರ್ ರವರಿಗೆ “ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಯ್ತು,
ಇದೆ ಸಂದರ್ಭದಲ್ಲಿ ಒಂದು ದುರ್ಘಟನೆಯು ನಡೆದುಹೋಯ್ತು .

 

 

ಸ್ವಾಗತ ಕಾರ್ಯಕ್ರಮದ ನಂತರ ಪಕ್ಕದ ವಾದ್ಯಗೋಷ್ಠಿಯತ್ತಾ ನೋಡುತ್ತಾ ತಕ್ಷಣ ಮೈಕನ್ನು ಕೈಗೆ ತೆಗೆದುಕೊಂಡವರೇ “ಯಾರೇ ಕೂಗಾಡಲಿ ಊರೇ ಹೋರಾಡಲಿ ” ಎಂಬ ಎಮ್ಮೆ ಹಾಡನ್ನು ಹಾಡಲು ಶುರು ಮಾಡಿದರು, ಆಗ ತಾನೇ ಕೆಲವೇ ದಿನಗಳ ಹಿಂದೆ ರಾಜಾಕೀಯ ಮೇಲಾಟಗಳಿಂದ ಬೇಸತ್ತು ಬಂಗಾರಪ್ಪನವರು ರಾಜೀನಾಮೆ ನೀಡಿದ್ದರು ಸಮಾರಂಭದಲ್ಲಿ ಉಸ್ತುವಾರಿ ಮುಖ್ಯಮಂತ್ರಿಗಳಾಗಿ ಭಾವಹಿಸಿದ್ದರು.

 

 

 

ತಮ್ಮ ರಾಜಕೀಯ ವಿರೋಧಿಗಳಿಗೆ ಉತ್ತರವಾಗಿ

“ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ ಎಮ್ಮೆ ನಿನಗೆ ಸಾಟಿಯಿಲ್ಲ”

ಎಂದು ಹಾಡಿದ ಹಾಡು ಸಭೆಯಲ್ಲಿದ್ದ ಕೆಲ ಕಿಡಿಗೇಡಿಗಳಿಗೆ ಆಹಾರವಾಯ್ತು ಕೈಗೆ ಸಿಕ್ಕ ವಸ್ತುಗಳನ್ನು ವೇದಿಕೆಯತ್ತ ಎಸೆದರು ಕೆಲ ಕಾಲ ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ್ದ ಬಂಗಾರಪ್ಪನವರು ಎದೆಗುಂದದೆ ಹಾಡುತ್ತಲೇ ಇದ್ದರು .

ಆಗ ರಾಜಕುಮಾರ ರವರು ಎದ್ದು ನಿಂತು ಕೈಮುಗಿದು

“ಅಭಿಮಾನಿ ದೇವರುಗಳೇ”

ಎಂದು ಮೊಟ್ಟಮೊದಲ ಭಾರಿಗೆ ಹೇಳಿದ್ದು , ಸಭೆಯಲ್ಲಿ ಮೌನ ಗೌರವ ಅದು ರಾಜಕುಮಾರ ರ ಬಗ್ಗೆ ಜನರಿಗಿದ್ದ ಪ್ರೀತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top