ದೇವರು

ಸಾಕ್ಷಾತ್ ಶ್ರೀ ಮಹಾಲಕ್ಷ್ಮೀ ದೇವಿಯ ವಾಹನ ಎನಿಸಿಕೊಳ್ಳುವ ಗೂಬೆ ಬಗೆಗಿನ ಕೆಲವು ವಿಚಿತ್ರವಾದ ಶಕುನದ ನಂಬಿಕೆಗಳು

ಶುಭವನ್ನು ನುಡಿಯುವ ಉಲೂಕಾ ( ಗೂಬೆ )ಇದು ಸಾಕ್ಷಾತ್ ಶ್ರೀ ಮಹಾಲಕ್ಷ್ಮೀ ದೇವಿಯ ವಾಹನ.

 

ಶ್ರೀ ಮಹಾಲಕ್ಷ್ಮೀ  ದೇವಿಯ  ವಾಹನ ಗೂಬೆ. ಸಂಸ್ಕೃತದಲ್ಲಿ ಅದರ ಹೆಸರು ಉಲೂಕಾ. ಸ್ತುತ್ಯಾರ್ಹ, ಪೂಜಾರ್ಹವಾಗಬೇಕಿದ್ದ ಗೂಬೆಯ ಸ್ಥಿತಿ ಈಗ ಹೇಗಾಗಿದೆ ಗೊತ್ತಾ ? ಅವುಗಳ ಪಾಡಿಗೆ ಅವು ಓಡಾಡಿಕೊಂಡು ಇರುವುದಕ್ಕೂ ಸಹ ಮನುಷ್ಯರಾದ ನಾವು ಬಿಡುವುದಿಲ್ಲ.

 

 

ಗೂಬೆಗಳು ಸಹಜವಾಗಿ ಕೂಗಿಕೊಂಡರೂ ನಮ್ಮದು ವಿಪರೀತ ಕಲ್ಪನೆ . ಇನ್ನಿಲ್ಲದ ವ್ಯಾಖ್ಯಾನಗಳು, ಅರ್ಥವಿಲ್ಲದ ನಂಬಿಕೆಗಳು, ಗೂಬೆಯ ಮೇಲಿನ ಕಾಕ ನೋಟ ಅಷ್ಟಕ್ಕೇ ನಿಲ್ಲುವುದಿಲ್ಲ. ಮತ್ತೊಬ್ಬರನ್ನು ಹೀಯಾಳಿಸಲು ಮನಸ್ಸನ್ನು ನೋಯಿಸಲು ತಕ್ಷ ಣ ನೆನಪಾಗುವ ಪದವೇ ಗೂಬೆ.

ಸಾಮಾನ್ಯವಾಗಿ ಗೂಬೆಗಳು ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಅವು ಮನುಷ್ಯರಿಂದ ಸದಾ ದೂರ ಇರಲು ಬಯಸುತ್ತವೆ. ಆದರೆ ಜ್ಯೋತಿಷ್ಯ ಶಾಸ್ತ್ರವು ಗೂಬೆಯನ್ನು ಭವಿಷ್ಯ ಸೂಚಕ ವಸ್ತುವನ್ನಾಗಿಸಿ ಕೊಂಡಿದೆ.

 

 

ಅವೆಂದರೆ ಗೂಬೆಯ ಧ್ವನಿ ಕೇಳಿದರೆ ಶುಭ ಸೂಚಕ ಗೂಬೆಯ ಧ್ವನಿಯನ್ನು ಎಡಗಡೆಯಿಂದ ಕೇಳಿದರೆ ಅದು ಶುಭ ಸೂಚಕವಂತೆ, ಅದೇ ಬಲಬದಿಯಿಂದ ಕೇಳಿದರೆ ಅದು ಅಶುಭ ಸೂಚಕವಂತೆ .

ರಸ್ತೆಯ ಮಧ್ಯದಲ್ಲಿ ಗೂಬೆಯನ್ನು ಕಂಡರೆ ಶುಭ ಸುದ್ದಿ ಕೇಳುತ್ತೇವಂತೆ. ಬಿಳಿ ಬಣ್ಣದ ಗೂಬೆ ಶುಭ ಸೂಚಕ ಎಂದು ಪರಿಗಣಿಸಲಾಗಿದೆ .ಮನೆಯ ಮೇಲೆ ಪದೇ ಪದೇ ಕುಳಿತುಕೊಳ್ಳುತ್ತಿದ್ದರೆ ಆ ಮನೆ ನಾಶವಾಗುತ್ತದೆ ಅಥವಾ ಆ ಮನೆಯ ಯಜಮಾನನಿಗೆ ಏನಾದರೂ ತೊಂದರೆ ಬಂದೊದಗುವ ಮುನ್ಸೂಚನೆಯಂತೆ.

 

 

ಒಂದೊಮ್ಮೆ ಮನೆಯ ಮೇಲೆ ಕುಳಿತು ವಿಚಿತ್ರವಾಗಿ ಕೂಗಿದರೆ ಆ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಒಬ್ಬರಿಗೆ ಗಂಡಾಂತರ ಸಂಭವಿಸಬಹುದು.

ಗೂಬೆ ಮನೆಯ ಮುಂದೆ ಮೂರು ದಿನಗಳ ಕಾಲ ಕುಳಿತು ಕೊಂಡರೆ ಮನೆಯಲ್ಲಿ ಕಳ್ಳತನವಾಗುತ್ತದೆ ಎನ್ನುತ್ತಾರೆ ಆಥವಾ ಕಳ್ಳತನವಾಗುವ ಸಂಭವವಿದೆ ಎಂದು ಸಹ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top