ಸಮಾಚಾರ

ಹ್ಯಾರಿಸ್ ಪುತ್ರನ ವಿರುದ್ಧ ಮತ್ತೊಂದು ಕೇಸ್ ದಾಖಲು: ಗೂಂಡಾ ನಲಪಾಡ್’ಗೆ ಎದುರಾಯ್ತು ಮತ್ತೊಂದು ಸಂಕಷ್ಟ.

ಬಹುಕೋಟಿ ಉದ್ಯಮಿಯ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಂತಿನಗರ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದ್ದು ಅರ್ಜಿಯನ್ನು ವಜಾಗೊಳಿಸಿ ನಲಪಾಡ್‌ಗೆ ಜಾಮೀನು ನೀಡಲು ಹೈಕೋರ್ಟ್‌ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಹ್ಯಾರಿಸ್ ಪುತ್ರನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ..

 

 

ಈಗಾಗಲೇ ವಿದ್ವತ್ ವಿಚಾರದಲ್ಲಿ ಕೇಸ್ ಜಡಾಯಿಸಿಕೊಂಡಿರುವ ನಲಪಾಡ್ ಜೈಲಿನಲ್ಲಿರು ವಾಗಲೇ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.. ಕೆಪಿಸಿಸಿ ಕಚೇರಿ ಬಳಿ ಇರುವ ಕೋಟ್ಯಾಂತ ರೂಗಳ ಮೌಲ್ಯ ಉಳ್ಳ 3 ಎಕರೆ 29 ಗುಂಟೆ ಸರಕಾರದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಆರೋಪದಡಿಯಲ್ಲಿ ಆತನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಈ ವಿಚಾರವಾಗಿ ಬಿಬಿಎಂಪಿಯ ಬಿಎಂಟಿಎಫ್’ನಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ನೋಟಿಸ್ ನೀಡಲಾಗಿದೆ. ಬಿಬಿಎಂಪಿಯಲ್ಲಿ ಕಂದಾಯ ಅಧಿಕಾರಿಯಾಗಿರುವ ಸೀತಾರಾಂ ಎಂಬವರು ದೂರು ದಾಖಲಿಸಿದ್ದಾರೆ. ನಲಪಾಡ್’ಗೆ ಹೆದರಿ ಕುಳಿತಿದ್ದ ಅಧಿಕಾರಿಗಳು, ನೊಂದವರು ಆತ ಜೈಲು ಸೇರುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಆತನ ನೀಚ ಕೃತ್ಯಗಳನ್ನು ಬಯಲಿಗೆಳೆಯುತ್ತಿದ್ದಾರೆ. ರೌಡಿ ನಳಪಾಡ್ ನ ಪಾಪದ ಮೂಟೆ ಇನ್ನು ಎಷ್ಟು ಇದೆ ಎಂದು ಕಾದು ನೋಡಬೇಕು..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top